• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಬೂಸ್ಟರ್ ಲಸಿಕೆಯೇ ಒಂದು ಹಗರಣ – WHO

Any Mind by Any Mind
November 24, 2021
in ಕರ್ನಾಟಕ, ರಾಜಕೀಯ
0
ಬೂಸ್ಟರ್ ಲಸಿಕೆಯೇ ಒಂದು ಹಗರಣ – WHO
Share on WhatsAppShare on FacebookShare on Telegram

ಆರೋಗ್ಯ ಕಾರ್ಯಕರ್ತರಿಗೆ ಮೂರನೆಯ ಅಂದರೆ ಬೂಸ್ಟರ್ ಡೋಸ್ ಲಸಿಕೆ ನೀಡಲು ರಾಜ್ಯ ಸರ್ಕಾರ ಯೋಚಿಸುತ್ತಿದೆ ಎಂದು ಇತ್ತೀಚೆಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ಆದರೆ ಬೂಸ್ಟರ್ ಡೋಸ್ ಎನ್ನುವುದೇ ಒಂದು ಹಗರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ADVERTISEMENT

ಡಬ್ಲೂಎಚ್ ಒ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಈ ಕುರಿತು ಮಾತನಾಡಿ, ಎಷ್ಟೋ ಬಡದೇಶಗಳಲ್ಲಿ ಕೆಲವರಿಗೆ ಇನ್ನೂ ಒಂದು ಡೋಸ್ ಲಸಿಕೆಯೂ ಸಿಕ್ಕಿಲ್ಲ. ಹೀಗಿರುವಾಗ ಮೂರನೇ ಡೋಸ್ ಅಥವಾ ಬೂಸ್ಟರ್ ಡೋಸ್ ನೀಡಿ ಲಸಿಕೆಯ ಕೊರತೆ ಉಂಟು ಮಾಡುತ್ತಿರುವುದು ಸರಿಯಲ್ಲ. ಬೂಸ್ಟರ್ ಎನ್ನುವುದೇ ಒಂದು ಹಗರಣʼ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲೂ ಕೆಲವರಿಗೆ ಇವರೆಗೂ ಮೊದಲ ಡೋಸ್ ದೊರೆತಿಲ್ಲ. ಬೂಸ್ಟರ್ ಡೋಸ್ ಹಾಕುವುದು ವೃಥಾ ಖರ್ಚಿಗೆ ಕಾರಣವಾಗಲಿದೆ. ಬೂಸ್ಟರ್ ಡೋಸ್ಗಳನ್ನು ಖಾಸಗಿ ಕಂಪನಿಗಳಿಂದ ಖರೀದಿಸಬೇಕಾಗುತ್ತದೆ. ಇದರಲ್ಲಿ ಕಮಿಷನ್ ವ್ಯವಹಾರ ನಡೆಯುವ ಸಾಧ್ಯತೆಗಳಿವೆ.

ಭಾರತದಲ್ಲಿ ಸದ್ಯದ ಪರಿಸ್ಥಿತಿಗೆ ಕೊವಿಡ್-19 ಬೂಸ್ಟರ್ ಡೋಸ್ ಲಸಿಕೆಯನ್ನು ನೀಡುವ ಅಗತ್ಯವಿಲ್ಲ. ಅದರ ಬದಲಿಗೆ ಲಸಿಕೆಯು ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪಿಸುವತ್ತ ಹೆಚ್ಚು ಗಮನ ಹರಿಸಬೇಕಿದೆ ಎಂದು ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ತಿಳಿಸಿದ್ದಾರೆ. 

WHO ಪ್ರಕಾರ, ಮೂರನೇ ಡೋಸ್ನ ಅಗತ್ಯವೇ ಇಲ್ಲ.

ಸಾಕಷ್ಟು ದೇಶಗಳಲ್ಲಿ ಮೊದಲ ಡೋಸ್ ಲಸಿಕೆಯೇ ದೊರೆತಿಲ್ಲ.. ಇಂತಹ ಪರಿಸ್ಥಿತಿಯಲ್ಲಿ ಲಸಿಕೆ ಬೂಸ್ಟರ್‌ ಡೋಸ್ ನೀಡುವಿಕೆ ಸರಿಯಲ್ಲ.. ಅದೊಂದು ಹಗರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆ (WHO) ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಅವರು, ‘ಬಡ ರಾಷ್ಟ್ರಗಳಲ್ಲಿ ನಾಗರಿಕರು ಒಂದೇ ಒಂದು ಡೋಸ್‌ ಲಸಿಕೆ ಪಡೆಯಲೂ ಹೆಣಗಾಡುತ್ತಿರುವ ಸಂದರ್ಭದಲ್ಲಿ ಶ್ರೀಮಂತ ರಾಷ್ಟ್ರಗಳಲ್ಲಿ ಬೂಸ್ಟರ್‌ ಡೋಸ್ ಹೆಸರಿನಲ್ಲಿ ನಡೆಯುತ್ತಿರುವ ಲಸಿಕೆಯ ಅಸಮಾನ ಹಂಚಿಕೆಯು ಸರಿಯಲ್ಲ. ಅದೊಂದು ದೊಡ್ಡ ಹಗರಣ. ಅದು ನಿಲ್ಲಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಲಸಿಕಾ ನೀಡಿಕೆಯಲ್ಲಿ ಉತ್ತಮ ಸ್ಥಿತಿಯಲ್ಲಿರುವ ದೇಶಗಳು ಬೂಸ್ಟರ್ ಡೋಸ್‌ಗಳನ್ನು ನೀಡುತ್ತಿರುವ ಹೊತ್ತಿನಲ್ಲಿ, ಬಡ ದೇಶಗಳು ಲಸಿಕೆಗಾಗಿ ಇನ್ನೂ ಕಾಯುತ್ತಿವೆ. ಕಡಿಮೆ ಆದಾಯದ ದೇಶಗಳಲ್ಲಿ ನಡೆಯುತ್ತಿರುವ ಪ್ರಾಥಮಿಕ ಹಂತದ ಲಸಿಕಾ ಕಾರ್ಯಕ್ರಮಕ್ಕಿಂತಲೂ ಆರು ಪಟ್ಟು ಮಿಗಿಲಾಗಿ ಹಲವು ದೇಶಗಳಲ್ಲಿ ಬೂಸ್ಟರ್‌ ಅಭಿಯಾನ ನಡೆಯುತ್ತಿದೆ. ಇದೊಂದು ಹಗರಣ. ಇದು ನಿಲ್ಲಬೇಕು. ಆರೋಗ್ಯವಂತ ವಯಸ್ಕರಿಗೆ ಬೂಸ್ಟರ್‌ಗಳನ್ನು ನೀಡುವುದು ಸರಿಯಲ್ಲ. ಆರೋಗ್ಯವಂತ ವಯಸ್ಕರಿಗೆ ಬೂಸ್ಟರ್‌ಗಳನ್ನು ನೀಡುವುದರಲ್ಲಿ ಅಥವಾ ಮಕ್ಕಳಿಗೆ ಲಸಿಕೆ ಹಾಕುವುದರಲ್ಲಿ ಅರ್ಥವಿಲ್ಲ. ಆರೋಗ್ಯ ಕಾರ್ಯಕರ್ತರು, ವೃದ್ಧರು ಮತ್ತು ಪ್ರಪಂಚದಾದ್ಯಂತ ಸಂಕಷ್ಟದಲ್ಲಿರುವ ಹಲವು ಗುಂಪುಗಳಿವೆ. ಅವರು ಲಸಿಕೆಗಾಗಿ ಇನ್ನೂ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಲಸಿಕೆಯ ಅಸಮಾನ ವಿತರಣೆಯು ಆಫ್ರಿಕಾ ಖಂಡವನ್ನು ತೀವ್ರವಾಗಿ ಕಾಡಿದೆ. ಅಲ್ಲಿ ಇಡೀ ಖಂಡದ ಜನಸಂಖ್ಯೆಯ ಕೇವಲ ಶೇ.6ರಷ್ಟು ಜನ ಮಾತ್ರ ಕೋವಿಡ್ ಲಸಿಕೆ ಪಡೆದಿದ್ದಾರೆ. ಈ ಹಿಂದೆ ವರ್ಷದ ಅಂತ್ಯದ ವೇಳೆಗೆ ಪ್ರತಿ ದೇಶದ ಜನಸಂಖ್ಯೆಯ ಶೇಕಡಾ 40 ರಷ್ಟು ಮಂದಿಗೆ ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ಹಾಕುವ ಗುರಿಯನ್ನು ಹೊಂದಿತ್ತು. ಆದರೆ 100 ಕ್ಕೂ ಹೆಚ್ಚು ದೇಶಗಳು ಪ್ರಸ್ತುತ ಗುರಿಯ ಕೊರತೆಯನ್ನು ಹೊಂದಿವೆ. ದೇಶಗಳ ಜನಸಂಖ್ಯೆಯ ಕನಿಷ್ಠ 20 ಪ್ರತಿಶತದಷ್ಟು ಜನರಿಗೆ ಕೋವಿಡ್ ಲಸಿಕೆ ಡೋಸ್ ಗಳನ್ನು ಒದಗಿಸಲು WHO ನ ಉಪಕ್ರಮವಾದ COVAX ಮೂಲಕ ಕ್ರಮ ಕೈಗೊಳ್ಳಲಾಗಿತ್ತು.

ಆದರೆ ವಿತರಿಸಲು ಸರಿಸುಮಾರು 500 ಮಿಲಿಯನ್ ಡೋಸ್ಗಳನ್ನು ಸ್ವೀಕರಿಸದ ಹೊರತು ಆ ಗುರಿ ಸಾಧನೆ ಸಾಧ್ಯವಿಲ್ಲ. ವರದಿಗಳ ಪ್ರಕಾರ ಆಫ್ರಿಕಾದ ಕೇವಲ ಐದು ದೇಶಗಳು ಮೊರಾಕೊ, ಟುನೀಶಿಯಾ ಮತ್ತು ಮಾರಿಷಸ್ ಸೇರಿದಂತೆ ತಮ್ಮ ಜನಸಂಖ್ಯೆಯ ಶೇಕಡಾ 35 ಕ್ಕಿಂತ ಹೆಚ್ಚು ಲಸಿಕೆ ಹಾಕಿವೆ. ಆದರೆ ಹೆಚ್ಚಿನ ಆಫ್ರಿಕನ್ ರಾಷ್ಟ್ರಗಳು ತಮ್ಮ ಜನಸಂಖ್ಯೆಯ ಶೇಕಡಾ 10 ಕ್ಕಿಂತ ಕಡಿಮೆ ಲಸಿಕೆಯನ್ನು ಪಡೆದಿವೆ ಎಂದು WHO ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

ರಾಜ್ಯ ಸರ್ಕಾರ ಬೂಸ್ಟರ್‌ ಡೋಸ್‌ ನೀಡುವ ಕಾರ್ಯಕ್ರಮವನ್ನು ಕೈ ಬಿಡುವುದು ಸೂಕ್ತ. ಈ ಹಿಂದೆ ಪಿಪಿಇ ಕಿಟ್‌, ಆಕ್ಸಿಜನ್‌ ಸಿಲಿಂಡರ್‌ ಖರೀದಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿವಂತಿತ್ತು. ಈಗ ಮೂರನೇ ಡೋಸ್‌ ಹೆಸರಲ್ಲಿ ಮತ್ತೆ ಕಮಿಷನ್‌ ದಂಧೆ ನಡೆಯುವ ಸಾಧ್ಯತೆಗಳಿವೆ.

Tags: BJPCongress PartyWHOಡಾ. ಕೆ. ಸುಧಾಕರ್ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಬೂಸ್ಟರ್ ಲಸಿಕೆ
Previous Post

ಬೆಳ್ಳಂಬೆಳಿಗ್ಗೆ 15 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ : ಮುಂದುವರಿದ ಪರಿಶೀಲನೆ – ಇಲ್ಲಿದೆ ಸಂಪೂರ್ಣ ವರದಿ

Next Post

ಪರ್ಯಾಯ ರಾಜಕಾರಣದ ನಿರ್ವಾತ ತುಂಬಲು ಕಾಂಗ್ರೆಸ್ ಶಕ್ಯವೇ ?

Related Posts

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
0

ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಗೆ (KS Eshwarappa) ಲೋಕಾಯುಕ್ತ (Lokayukta) ಶಾಕ್ ಎದುರಾಗಿದೆ. ಈ ಹಿಂದೆ ಬಿಜೆಪಿ (Bjp) ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಈಶ್ವರಪ್ಪ ಅವರ...

Read moreDetails
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

July 3, 2025

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

July 3, 2025
Next Post
ಪರ್ಯಾಯ ರಾಜಕಾರಣದ ನಿರ್ವಾತ ತುಂಬಲು ಕಾಂಗ್ರೆಸ್ ಶಕ್ಯವೇ ?

ಪರ್ಯಾಯ ರಾಜಕಾರಣದ ನಿರ್ವಾತ ತುಂಬಲು ಕಾಂಗ್ರೆಸ್ ಶಕ್ಯವೇ ?

Please login to join discussion

Recent News

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,
Top Story

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

by ಪ್ರತಿಧ್ವನಿ
July 4, 2025
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!
Top Story

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

by Chetan
July 4, 2025
Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
Top Story

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

by ಪ್ರತಿಧ್ವನಿ
July 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

July 4, 2025
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!