ಸರ್ಕಾರ ಮೂರನೇ ಅಲೆ ಕಟ್ಟಿಹಾಕುವ ನಿಟ್ಟನಲ್ಲಿ ಸಕಲ ತಯಾರಿ ಮಾಡಿಕೊಂಡಿರುವುದಾಗಿ ಹೇಳಿದೆ. ಆದರೆ, ರಾಜ್ಯದಲ್ಲಿ ಕೇಂದ್ರ ಸರ್ಕಾರ ಶಿಫಾರಸ್ಸು ಮಾಡಿರುವ ಎರಡು ಔಷಧಿಗಳಾದ ಡೆಕ್ಸಮೆಥಾಸೊನ್ ಮತ್ತು ಪೊಸಾಕೊನಜೋಲ್ ಚುಚ್ಚುಮದ್ದುಗಳ ಕೊರೆತೆ ಕಂಡು ಬಂದಿದೆ.
ಕೇಂದ್ರ ಸರ್ಕಾರ ಶಿಫಾರಸ್ಸು ಮಾಡಿರುವ ಪ್ರಕಾರ ಸುಮಾರು 11 ಲಕ್ಷ ಚುಚ್ಚುಮದ್ದುಗಳನ್ನು ರಾಜ್ಯ ಆರೋಗ್ಯ ಇಲಾಖೆ ಸಂಗ್ರಹ ಮಾಡಬೇಕು. ಆದರೆ, ಸದ್ಯ ತಿಳಿದು ಬಂದಿರುವ ಮಾಹಿತಿ ಪ್ರಕಾರ ಡೆಕ್ಸಮೆಥಾಸೊನ್ 50,000 ಹಾಗೂ ಪೊಸಾಕೊನಜೋಲ್ 11,200 ಚುಚ್ಚುಮದ್ದುಗಳ ಶೇಕರಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿರುವ ಆರೋಗ್ಯ ಇಲಾಖೆಯ ಮುಖ್ಯ ಆಯುಕ್ತ ಡಿ.ರಣದೀಪ್ ವಾರದೊಳಗೆ ಅಗತ್ಯವಿರುವ ಔಷಧಗಳನ್ನು ಖರೀದಿಸುವಂತೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ವತಿಯಿಂದ ಆದೇಶ ಹೊರಡಿಸಿದ್ದಾರೆ. ಸದ್ಯ ನಾವು ಯಾವುದೇ ಕೊರತೆಯನ್ನು ಎದುರಿಸುತ್ತಿಲ್ಲ ಎಂದು ಹೇಳಿದ್ದಾರೆ.
ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಡಾ.ಕೆ ಸುಧಾಕರ್ ಸದ್ಯ ನಮಗೆ ಪೊಸಾಕೊನಜೋಲ್ ಚುಚ್ಚುಮದ್ದುಗಳ ಕೊರತೆ ಎದುರಾಗಿದೆ. ಇದು ಮಾರುಕಟ್ಟೆಯಲ್ಲೂ ಸದ್ಯ ಲಭ್ಯವಾಗುತ್ತಿಲ್ಲ ಎಂದಿದ್ದಾರೆ.