ನನ್ನ ಕ್ಷೇತ್ರದಲ್ಲಿ ಬೆಡ್‌ ಕೊರತೆ ಇದೆ, ಆಕ್ಸಿಜನ್‌ ಸಿಗದೆ ನನ್ನ ಸಂಬಂಧಿಕರೇ ಮೃತಪಟ್ಟಿದ್ದಾರೆ -ಶಾಸಕ ಕೆ ಜೆ ಜಾರ್ಜ್

ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಕೋವಿಡ್‌ ಪಾಸಿಟಿವ್‌ ಕೇಸ್‌ ಹೆಚ್ಚಾಗುತ್ತಿದ್ದು, ಬೆಡ್‌, ಆಕ್ಸಿಜನ್‌ ಕೊರತೆ ಹಿನ್ನಲೆ, ಇಂದು ವಿಕಾಸ ಸೌಧದಲ್ಲಿ ವಸತಿ ಸಚಿವ ವಿ ಸೋಮಣ್ಣ ಅಧ್ಯಕ್ಷತೆಯಲ್ಲಿ ಬಿಬಿಎಂಪಿ ಪೂರ್ವವಲಯದ ಅಧಿಕಾರಿಗಳು ಮತ್ತು 7 ವಿಧಾನಸಭಾ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿದೆ. ಶಾಸಕ ಕೆ.ಜೆ ಜಾರ್ಜ್‌ ಕೂಡ ಭಾಗವಹಿಸಿ, ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಹೆಚ್ಚುವರಿಯಾಗಿ ಬೆಡ್‌ ಮತ್ತು ಆಕ್ಸಿಜನ್‌ ಪೂರೈಕೆಗೆ ಕೂಡಲೇ ವ್ಯವಸ್ಥೆ ಮಾಡಬೇಕು, ಆರೋಗ್ಯ ಸಚಿವರು ಈಗಾಗಲೇ ಹೇಳಿಕೆ ಕೊಟ್ಟಂತೆ ಔಷಧಿಗೆ ಯಾವುದೇ ಕೊರತೆ ಆಗಿಲ್ಲ ಎಂದಿದ್ದಾರೆ. ಆದ್ರೆ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಎದುರಾಗಿದೆ. ಅಧಿಕಾರಿಗಳೂ ಏನೂ ಮಾತಾಡದೆ ಬೇಜವಬ್ದಾರಿತನ ತೋರುತ್ತಿದ್ದಾರೆ. ಆಕ್ಸಿಜನ್‌ ಸಿಗದೆ ನಮ್ಮ ಸಂಬಂಧಿಕರೊಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಬೆಡ್‌ ಕೇಳಿ ಮೇಸ್‌ ಪೋನ್‌ ಮಾಡಿದ್ರೆ ಅಧಿಕಾರಿಗಳು ಎಷ್ಟೋ ಹೊತ್ತಿನ ನಂತರ ಪ್ರತಿಕ್ರಿಯಿಸಿ ಬೆಡ್‌ ಈಜ್‌ ನಾಟ್‌ ಅವೈಲಬಲ್‌ ಅಂತ ಮೆಸೇಜ್‌ ಹಾಕ್ತಾರೆ, ನನ್ನ ಕ್ಷೇತ್ರದಲ್ಲಿಯೂ ಬೆಡ್‌ಗಳ ಕೊರತೆಯಿದೆ ಎಂದು ಜಾರ್ಜ್‌ ಸಭೆಯಲ್ಲಿ ತಿಳಿಸಿದ್ದಾರೆ.

ವಸತಿ ಸಚಿವ ವಿ ಸೋಮಣ್ಣ ಕೂಡ ಅವರ ಕ್ಷೇತ್ರದ ಕೋವಿಡ್‌ ಕರಾಳ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಶವ ಹಸ್ತಾಂತರದ ವ್ಯವಸ್ಥೆ ಕೇಂದ್ರೀಕೃತ ಮಾಡಿರುವುದರಿಂದ ಸಮಸ್ಯೆ ಎದುರಾಗಿದೆ. ಸೋಂಕಿನಿಂದ ಮೃತಪಟ್ಟು ಎರಡು ದಿನವಾದ್ರೂ ಶವ ಸಿಗುತ್ತಿಲ್ಲ ಎಂಬ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ನಮ್ಮ ಕ್ಷೇತ್ರದ ಆಸ್ಪತ್ರೆಯೊಂದರಲ್ಲಿ ಬಿಯು ನಂಬರ್‌ ಬರುವ ಮುಂಚೆಯೇ 2 ಲಕ್ಷ ಕಟ್ಟಿಸಿಕೊಂಡಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಭೆಯ ನಂತರ ಪತ್ರಿಕಾ ಗೋಷ್ಟಿ ನಡೆಸಿದ ವಿ. ಸೋಮಣ್ಣ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಂಬೇಡ್ಕರ್‌ ಮೆಡಿಕಲ್‌ ಕಾಲೇಜು ಕೋವಿಡ್‌ಗೆ ಮೀಸಲು

ಕಾಲೇಜ್‌ ಆವರಣದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಆರಂಭ

ಚರಕ ಆಸ್ಪತ್ರೆಯಲ್ಲಿ 20 ಐಸಿಯು ಬೆಡ್‌ಗಳ ವ್ಯವಸ್ಥೆಯಿದ್ದರು, ಕ್ಲೋಸ್‌ ಮಾಡಲಾಗಿತ್ತು. ಮತ್ತೀಗಾ ಪುನರ್‌ ಆರಂಭ

ಪುಲುಕೇಶಿ ನಗರ, ಸರ್ವಜ್ಞ ನಗರದಲ್ಲಿ ಕೋವಿಡ್‌ ಸೆಂಟರ್‌ ಪ್ರಾರಂಭ

ಶಾಂತಿನಗರದಲ್ಲಿ 175 ಬೆಡ್‌ಗಳ ಕೋವಿಡ್‌ ಸೆಂಟರ್‌ ಆರಂಭ

ಇಂದಿರಾನಗರದಲ್ಲಿ 20 ರಿಂದ 30 ಬೆಡ್‌ಗಳ ವ್ಯವಸ್ಥೆಗೆ ಸೂಚನೆ

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 20 ಜನರಿಗೆ ಆಕ್ಸಿಜನ್‌ ವ್ಯವಸ್ಥೆ

ಸಿ.ವಿ ರಾಮನ್‌ ನಗರದಲ್ಲಿ 100 ಬೆಡ್‌ಗಳ ಕೋವಿಡ್‌ ಸೆಂಟರ್‌

ಶವ ಸಾಗಿಸಲು ಹೆಚ್ಚುವರಿ ವಾಹನಗಳ ವ್ಯವಸ್ಥೆ ಕಲ್ಪಿಸಲಾಗುವುದು

Related posts

Latest posts

ಇಸ್ರೇಲ್‌ vs ಫೆಲಸ್ತೀನ್: ಯಥಾಸ್ಥಿತಿ ಕಾಪಾಡುವಂತೆ ಭಾರತ ಆಗ್ರಹ

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ವಿಷಮ ಪರಿಸ್ಥಿತಿ ಕುರಿತಂತೆ ಭಾರತ ತನ್ನ ಹೇಳಿಕೆಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ದಾಖಲಿಸಿದೆ. ಎರಡೂ ದೇಶಗಳು ಯತಾಸ್ಥಿತಿಯನ್ನು ಕಾಪಾಡಬೇಕೆಂದು ಒತ್ತಾಯಿಸಿರುವ ಭಾರತ, ಪರಸ್ಪರ ರಾಕೆಟ್‌ ದಾಳಿಯನ್ನು ಖಂಡಿಸಿದೆ. ಇಸ್ರೇಲ್‌ ಮತ್ತು ಫೆಲಸ್ತೀನ್‌...

ಕರೋನಾ ಪ್ರಕರಣ ಇಳಿಕೆಯಾಗಿದೆ ಅನ್ನುವುದು ಭ್ರಮೆ, ಭಾರತದ ಅಂಕಿಅಂಶಗಳು ವಿಶ್ವಾಸಾರ್ಹವಲ್ಲ – ತಜ್ಞರ ಕಳವಳ

ಕೋವಿಡ್‌ ಸೋಂಕುಗಳಲ್ಲಿ ಕಳೆದೊಂದು ತಿಂಗಳಿನಿಂದ ತತ್ತರಿಸಿರುವ ಭಾರತ ಕ್ರಮೇಣ ಸೋಂಕಿನ ತೀವ್ರತೆ ಇಳಿಯುತ್ತಿರುವುದಾಗಿ ವರದಿ ಮಾಡುತ್ತಿದೆ. ಅದಾಗ್ಯೂ, ಕೋವಿಡ್‌ ಸಂಬಂಧಿತ ದೈನಂದಿನ ಸಾವಿನ ಪ್ರಮಾಣ ಈಗಲೂ 4 ಸಾವಿರಕ್ಕೂ ಹೆಚ್ಚಿದೆ. ಭಾರತದ ಗ್ರಾಮೀಣ...

ಬ್ಲಾಕ್ ಫಂಗಸ್: ಅಧಿಕೃತ ರೋಗಗಳ ಪಟ್ಟಿಯಲಿ ಸೇರಿಸಿ, ಉಚಿತ ಚಿಕಿತ್ಸೆ ಕೊಡಿ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಬ್ಲಾಕ್ ಫಂಗಸ್ ಕಾಯಿಲೆಯನ್ನು ಅಧಿಕೃತ ರೋಗಗಳ ಪಟ್ಟಿಯಲಿ ಸೇರಿಸಿ ಸೂಕ್ತ ಅಧಿಸೂಚನೆ ಹೊರಡಿಸಿ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೋವಿಡ್ ನಿಂದಾಗಿ ಸಾವು...