ಕೇಂದ್ರ ಸರ್ಕಾರದಿಂದ (Central government) ಕರ್ನಾಟಕಕ್ಕೆ ಮಲತಾಯಿ ಧೋರಣೆ ಆಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪದ ವಿಚಾರವಾಗಿ ಕೇಂದ್ರ ಹಣಕಾಸು ಸಚಿವೆಯನ್ನು ರಾಜ್ಯದ ಕಾಂಗ್ರೆಸ್ ಸಂಸದರು ಭೇಟಿಯಾಗಿದ್ದಾರೆ.
ದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ರನ್ನ (Nirmala sitaraman) ಭೇಟಿ ಮಾಡಿದ ಸಂಸದರು,ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ (Karnataka) ಯಾವುದೇ ವಿಶೇಷ ಅನುದಾನ, ಕೊಡುಗೆಯನ್ನ ನೀಡಿಲ್ಲವೆಂಬುದನ್ನ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಈ ಹಿಂದೆ ರಾಜ್ಯಕ್ಕೆ ನಿಗದಿಯಾದ ನಬಾರ್ಡ್ ರೀ ಫೈನಾನ್ಸ್ ನ್ನು ಕಡಿಮೆಗೊಳಿಸಿದ ಕುರಿತು ಹಾಗೂ ಎಲ್ಐಸಿ ಪ್ರತಿನಿಧಿಗಳ ಬೇಡಿಕೆಗಳ ಕುರಿತು ಕಾಂಗ್ರೆಸ್ ಸಂಸದರು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಗಮನಸೆಳೆದಿದ್ದಾರೆ.
ಈ ವೇಳೆ, ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ (AIMS) ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ಸಂಸದರು ಆಗ್ರಹಿಸಿದ್ದು, ಸಂಸದ ಜಿ.ಕುಮಾರ ನಾಯಕ್, ರಾಜಶೇಖರ್ ಹಿಟ್ನಾಳ್, ಸಾಗರ್ ಖಂಡ್ರೆ, ಶ್ರೇಯಸ್ ಪಟೇಲ್, ಸುನೀಲ್ ಬೋಸ್, ಡಾ. ಪ್ರಭಾ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.