ಮಾಜಿ ಸಂಸದ ಡಿ.ಕೆ ಸುರೇಶ್ (Dk suresh) ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವ ಮಲತಾಯಿ ಧೋರಣೆಯ ಬಗ್ಗೆ ಮಾತಮಾಡಿದ್ದು, ಈ ಬಜೆಟ್ ಬಿಹಾರ ಮತ್ತು ಆಂದ್ರಪ್ರದೇಶದ (Bihar & Andrapradesh) ಬಜೆಟ್ ಮಾತ್ರ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದ (Congress) ಗ್ಯಾರಂಟಿಗಳ ಬಗ್ಗೆ ಬಿಜೆಪಿ (Bjp) ಟೀಕೆ ಮಾಡುತ್ತೆ.ಆದ್ರೆ ಕರ್ನಾಟಕ ದಿವಾಳಿಯಾಗಿದೆ ಅಂತ ಹೇಳಿದ್ದಾರೆ,ಮೋದಿ (Modi) ಹಾಸ್ಯಾಸ್ಪದವಾಗಿ ಮಾತನಾಡಿದ್ದಾರೆ.ಮೋದಿಯವರಿಗೆ ಸರಿಯಾಗಿ ಸಲಹೆ ಕೊಟ್ಟಿಲ್ಲ ಎಂದು ಟೀಕಿಸಿದ್ದಾರೆ.

ಈ ಬಾರಿಯ ಬಜೆಟ್ ನಲ್ಲಿ ಬಿಹಾರ, ಆಂದ್ರಪ್ರದೇಶದಕ್ಕೆ ಹೆಚ್ಚು ಹಣ ಕೊಟ್ಟಿದ್ದಾರೆ.ಕಳೆದ ಹತ್ತು ವರ್ಷಗಳಿಂದ ನಮ್ಮ ತೆರಿಗೆ ಹಣ ಬರುತ್ತಿಲ್ಲ. ಎಷ್ಟು ದಿನ ಕನ್ನಡಿಗರು ಕಣ್ಣುಮುಚ್ಚಿ ಇರಬೇಕು ? ನಮ್ಮ ರಾಜ್ಯ ದಿವಾಳಿ ಅಂತಿರಾ, ನೀವೆಷ್ಟು ಸಾಲ ಮಾಡಿದ್ದೀರಾ ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರದ್ದು ಒಡೆದು ಆಳುವ ನೀತಿಯಾಗಿದೆ. ಮೂರು ರಾಜ್ಯಗಳಿಗೆ ಮಾತ್ರ ಬಜೆಟ್ ಸೀಮಿತವಾಗಿದೆ.ಕರ್ನಾಟಕಕ್ಕೆ (Karnataka) ಪದೇ ಪದೇ ಅನ್ಯಾಯವಾಗುತ್ತಿದೆ, ಕನ್ನಡಿಗರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.