ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ 29 ಸಚಿವರು ಇರಲಿದ್ದು, ಅವರು ಬುಧವಾರ ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬೊಮ್ಮಾಯಿ ಅವರ ಹಿಂದಿನ ಬಿಎಸ್ .ಯಡಿಯೂರಪ್ಪನವರಂತೆ ಯಾವುದೇ ಡಿಸಿಎಂ ಹೊಂದಿರುವುದಿಲ್ಲ.
ಬೊಮ್ಮಾಯಿ ಅವರು ರಾಜಭವನಕ್ಕೆ ಕಳುಹಿಸಿದ ಪಟ್ಟಿಯಲ್ಲಿ ಬಿಜೆಪಿ ಉಪಾಧ್ಯಕ್ಷ ಮತ್ತು ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರ ಹೆಸರು ಇಲ್ಲ ಎಂದು ತಿಳಿದುಬಂದಿದೆ.
“ನಿನ್ನೆ ಪಕ್ಷದ ಹೈಕಮಾಂಡ್ ಜೊತೆಗಿನ ಸುದೀರ್ಘ ಚರ್ಚೆಗಳ ನಂತರ, ಇಂದು ಬೆಳಿಗ್ಗೆ ಕ್ಯಾಬಿನೆಟ್ ಮಂತ್ರಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ” ಎಂದು ಬೊಮ್ಮಾಯಿ, ಪಟ್ಟಿಯನ್ನು ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ಗೆ ಕಳುಹಿಸಿದ ನಂತರ ಹೇಳಿದ್ದಾರೆ.
ಹೊಸ ಕ್ಯಾಬಿನೆಟ್ ನಲ್ಲಿ ಅನುಭವಿ ಶಾಸಕರು ಮತ್ತು ಯುವ ಮುಖಗಳ ಮಿಶ್ರಣವಾಗಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
29ರಲ್ಲಿ ಎಂಟು ಮಂದಿ ಲಿಂಗಾಯತ ಸಮುದಾಯದವರು, ಏಳು ಒಕ್ಕಲಿಗರು, ಏಳು ಒಬಿಸಿಗಳು, ಮೂವರು ಎಸ್ಸಿಗಳು, ಒಂದು ಎಸ್ಟಿ, ಒಬ್ಬರು ರೆಡ್ಡಿ ಸಮುದಾಯದವರು ಮತ್ತು ಒಬ್ಬ ಮಹಿಳೆ.
“ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಮಾರ್ಗದರ್ಶನದಲ್ಲಿ, ಜನಪರ ಆಡಳಿತ ನೀಡಲು ಮತ್ತು ಮುಂದಿನ ವಿಧಾನಸಭಾ ಚುನಾವಣೆಯ ಸವಾಲನ್ನು ಎದುರಿಸಲು, ಈ ಕ್ಯಾಬಿನೆಟ್ ರಚನೆಯಾಗಿದೆ” ಎಂದು ಬೊಮ್ಮಾಯಿ ಹೇಳಿದ್ದಾರೆ.
ಮಂತ್ರಿಗಳ ಅಧಿಕೃತ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ:
ಯಡಿಯೂರಪ್ಪನವರ ವಿರೋಧ ಬನದಲ್ಲಿರುವ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್, ಮತ್ತು ಶಾಸಕರಾದ ಅರವಿಂದ ಬೆಲ್ಲದ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಗೆ ಕ್ಯಾಬಿನೆಟ್ನಲ್ಲಿ ಸ್ಥಾನ ಗಿಟ್ಟಿಲ್ಲ, ಹೈಕಮಾಂಡ್ ಈ ಬಗ್ಗೆ ಕರೆ ಮಾಡಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಬೇಕೆಂಬ ಬೇಡಿಕೆಗಳ ಮೇಲೆ, ನಡ್ಡಾ ಈ ವಿಚಾರದ ಬಗ್ಗೆ ಯಡಿಯೂರಪ್ಪನವರೊಂದಿಗೆ ಮಾತನಾಡಿದ್ದಾರೆ. ಕರ್ನಾಟಕದ ಉಸ್ತುವಾರಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಕೂಡ ವಿಜಯೇಂದ್ರ ಅವರೊಂದಿಗೆ ಮಾತನಾಡಿದರು.”ವಿಜಯೇಂದ್ರ ಅವರ ಹೆಸರು ಪಟ್ಟಿಯಲ್ಲಿ ಇಲ್ಲ” ಎಂದು ಬೊಮ್ಮಾಯಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿರುವ ಪಟ್ಟಿವೊಂದು ಮಾಧ್ಯಮಕ್ಕೆ ಸಿಕ್ಕುದ್ದು ಈ ಪಟ್ಟಿ ಈಗ ಎಲ್ಲಾ ಕಡೆ ವೈಲರ್ ಆಗುತ್ತಿದೆ. ಆದರೆ ಆಧಿಕೃತ ಪಟ್ಟಿ ಇನ್ನು ಹೊರಗೆ ಬಂದಿಲ್ಲವೆಂದು ಡೆಕನ್ ಎರಾಲ್ಡ್ಸ್ ವರದಿ ಮಾಡಿದೆ.