ನಾನು ನಿಜವಾದ ಕಾಂಗ್ರೆಸಿಗ, ಪಕ್ಷಾಂತರ ಮಾಡಿ ಬಿಜೆಪಿ ಸೇರುವುದಿಲ್ಲ: ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಪ್ತರಾಗಿದ್ದ ಜಿತಿನ್ ಪ್ರಸಾದ್ ನೆನ್ನೆಯಷ್ಟೆ ಕಾಂಗ್ರೆಸ್ ಪಕ್ಷವನ್ನು ತೊರೆದು ಪಿಯೂಶ್ ಗೊಯಾಲ್ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರೆ. ಕಳೆದ ಎರಡು ಮೂರು ವರ್ಷಗಳಿಂದ ಕಾಂಗ್ರೆಸ್ ನ ಅನೇಕ ನಾಯಕರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಿರುವುದು ಕಾಣಬಹುದು ಈ ಕುರಿತು ಪತ್ರಕರ್ತರು ಕಾಂಗ್ರೆಸ್ ಪಕ್ಷ ಹಿರಿಯ ನಾಯಕ ಕಪಿಲ್ ಸಿಬಲ್ ಅವರಿಗೆ ಪ್ರಶ್ನಿಸಿದ್ದಾರೆ.

ಈಗೆ ಪ್ರಶ್ನಿಸಿದ ಪತ್ರಕರ್ತರಿಗೆ, ನಾವು ನಿಜವಾದ ಕಾಂಗ್ರೆಸ್ಸಿಗರು, ನಾನು ಬಿಜೆಪಿಗೆ ಸೇರುವ ಬಗ್ಗೆ ನನ್ನ ಜೀವನದಲ್ಲಿ ಎಂದಿಗೂ ಯೋಚಿಸುವುದಿಲ್ಲ. ಕಾಂಗ್ರೆಸ್ ನಾಯಕತ್ವದಿಂದ ನನ್ನನ್ನು ತೊರೆಯುವಂತೆ ತಿಳಿಸಿದರೆ, ನಾನು ಆ ಆಧಾರದ ಮೇಲೆ ಪಕ್ಷವನ್ನು ತೊರೆಯುವ ಬಗ್ಗೆ ಯೋಚಿಸಬಹುದು ಆದರೆ ಬಿಜೆಪಿಗೆ ಸೇರುವುದಿಲ್ಲ: ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ

ಜಿತಿನ್ ಪ್ರಸಾದ ಅವರನ್ನು ನಾನು ವಿರೋಧಿಸುವುದಿಲ್ಲ, ಆದರೆ ಬಿಜೆಪಿಗೆ ಸೇರುವುದು ನನಗೆ ಅರ್ಥವಾಗದ ಸಂಗತಿಯಾಗಿದೆ. “ನಾವು ಬಂದ ಪುಟ್ಟ ಹೋದ ಪುಟ್ಟ” ಮಾದರಿಯ ರಾಜಕೀಯದಿಂದ ಲಾಭ ಕೇಂದ್ರೀಕೃತ ರಾಜಕೀಯದೆಡೆಗೆ ಸಾಗುತ್ತಿದ್ದೇವೆ ಎಂದು ಸ್ಪಷ್ಟಪಡಿಸುತ್ತದೆ. ಯಾವ ಪಕ್ಷದಲ್ಲಿ ಲಾಭ ಇದೆಯೋ ಆ ಪಕ್ಷಕ್ಕೆ ಸೇರುತ್ತಿದ್ದಾರೆ.

ಮೂರು ದಶಕಗಳಿಂದ ತಾನು ವಿರೋಧಿಸುತ್ತಿದ್ದ ಒಂದು ಸಿದ್ಧಾಂತವನ್ನು ಈಗ ಸ್ವೀಕರಿಸುತ್ತಿದ್ದೇನೆ ಎಂದು ಅವರು ಯಾವ ಮುಖದಿಂದ ಹೇಳಬಹುದು? ತತ್ವಬದ್ಧ ರಾಜಕೀಯದ ಬಗ್ಗೆ ಮಾತನಾಡುವ ಬಿಜೆಪಿಯವರು, ಜಿತಿನ್ ಅವರನ್ನು ಯಾವ ಮುಖದಿಂದ ತೆಗೆದುಕೊಳ್ಳುತ್ತಾರೆ? ಎಂದು ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.

ಕಪಿಲ್ ಸಿಬಲ್ ಅವರ ಪೂರ್ತಿ ಸುದ್ದಿಯ ಹೂರಣ, ಕಾಂಗ್ರೆಸ್‍ಗೆ ಸುಧಾರಣೆಗಳು ಅಗತ್ಯವಾಗಿವೆ ಮತ್ತು ಪಕ್ಷದ ನಾಯಕತ್ವವು ಇದನ್ನು ಆಲಿಸಬೇಕಾಗಿದೆ. ಸಮಸ್ಯೆಗಳನ್ನು ಬಗೆಹರಿಸಿದ್ದರೂ, ನಾನು ಏನನ್ನೂ ಪಡೆಯುತ್ತಿಲ್ಲ ಎಂದು ಒಬ್ಬ ವ್ಯಕ್ತಿಯು ಭಾವಿಸಿದರೆ ಅವನು ಪಕ್ಷದವನ್ನು ತ್ಯಜಿಸುತ್ತಾನೆ. ಜಿತಿನ್ ಹೊರಹೋಗಲು ಒಳ್ಳೆಯ ಕಾರಣಗಳಿರಬಹುದು. ಪಕ್ಷವನ್ನು ತೊರೆದಿದ್ದಕ್ಕಾಗಿ ನಾನು ಅವರನ್ನು ದೂಷಿಸುವುದಿಲ್ಲ. ಅವರು ಬಿಜೆಪಿಗೆ ಸೇರಿದ ಕಾರಣಗಳಿಗಾಗಿ ನಾನು ಅವರನ್ನು ದೂಷಿಸುತ್ತೇನೆ ಎಂಬುದಾಗಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...