ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ವಿಡಿಯೋ ಚಿತ್ರೀಕರಣ ಅಥವಾ ಫೋಟೋ ತೆಗೆಯಬಾರದೆಂಬ ಆದೇಶವನ್ನು ಸರ್ಕಾರ ವಾಪಸ್ ಪಡೆಯುವ ಆತುರದಲ್ಲಿ ಮತ್ತೊಂದು ಎಡವಟ್ಟು ಸಿಲುಕಿದೆ
ಹೌದು, ಆದೇಶವನ್ನು ವಾಪಸ್ ಪಡೆಯುವ ಬಗ್ಗೆ ಹೊರಡಿಸಲಾಗಿದ್ದ ಆದೇಶ ಪತ್ರದಲ್ಲಿ ಸಾಕಷ್ಟು ವ್ಯಾಕರಣ ದೋಷಗಳು ಕಂಡು ಬಂದಿದೆ.
ನಡಾವಳಿ – ನಡವಳಿ ಎಂದು, ಪ್ರಸ್ತಾವನೆ – ಪ್ರಸತ್ತಾವನೆ ಎಂದು, ಮೇಲೆ – ಮೇಲೇ ಎಂದು, ಭಾಗ-1 – ಬಾಗ-1 ಎಂದು, ಕರ್ನಾಟಕ – ಕರ್ನಾಟಾ, ಆಡಳಿತ -ಆಡಳಿದ ಎಂದು ತಪ್ಪಾಗಿ ಟೈಪ್ ಮಾಡಲಾಗಿದೆ
ರಾಜ್ಯ ಸರ್ಕಾರವೇ ಇಂತಹ ತಪ್ಪುಗಳನ್ನು ಮಾಡಿದರೆ ಹೇಗೆ? ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

