ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಕಬ್ಜ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಮಾರ್ಚ್ 17ರಂದು ಸ್ಯಾಂಡಲ್‌ವುಡ್ ಪರಮಾತ್ಮ, ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್‌ರವರ ಹುಟ್ಟುಹಬ್ಬದ ಪ್ರಯುಕ್ತ, ವಿಶ್ವದಾದ್ಯಂತ ತೆರೆಕಂಡ ʻಕಬ್ಜʼ ಸಿನಿಮಾ, ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡಿದೆ. ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ 54 ಕೋಟಿ ಕಲೆಕ್ಷನ್ ಮಾಡಿದ್ದ ಚಿತ್ರ, ಎರಡನೇ ದಿನ 100 ಕೋಟಿ ಗಳಿಕೆ ಕಂಡು ಮುನ್ನುಗ್ಗುತ್ತಿದೆ.

ನಿರ್ದೇಶಕ ಆರ್.ಚಂದ್ರುರವರ ಕನಸಿನ ಕೂಸಾದ ʻಕಬ್ಜʼ ಸಿನಿಮಾ, ಬಾಕ್ಸ್ ಆಫೀಸ್‌ನ್ನ ಕಬ್ಜ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆ ನಿನ್ನೆ ಚಿತ್ರತಂಡ ಖಾಸಗಿ ಹೋಟೆಲ್ ಒಂದರಲ್ಲಿ ಸಕ್ಸಸ್ ಮೀಟ್ ಮಾಡಿತ್ತು. ʻಕಬ್ಜʼ ಸಿನಿಮಾ ಯಶಸ್ಸಿನತ್ತ ಸಾಗುತ್ತಿರೋದನ್ನ ನೋಡಿ ಚಿತ್ರತಂಡ, ಕೇಕ್ ಕತ್ತರಿಸಿ ಸಂಭ್ರಮಿಸಿದೆ. ಕಬ್ಜ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಇನ್ನೂ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇದ್ದು, ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ
