ಜಿಲ್ಲಾಧಿಕಾರಿ ಜೆ.ಮಂಜುನಾಥ್ ಪ್ರಕರಣದಲ್ಲಿ ಎಸಿಬಿ ನ್ಯಾಯಾಧೀಶರನ್ನೇ ಬೆದರಿಕೆ ಹಾಕಿದ್ದಾರೆ. ರಾಜ್ಯದಲ್ಲಿ ಜಡ್ಜ್ ಗೆ ರಕ್ಷಣೆ ಇಲ್ಲ ಅಂತಾದರೆ ರಾಜ್ಯದಲ್ಲಿ ಯಾರಿಗೆ ರಕ್ಷಣೆ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನ್ಯಾಯಾಧೀಶರಿಗೆ ಎಸಿಬಿ ಬೆದರಿಕೆ ಹಾಕಿದೆ. ಜಡ್ಜ್ ಹೆದರಿಕೊಂಡಿಲ್ಲ. ಆದರೆ ಅವರು ಹೇಳಿದ ಮೇಲೆ ಕೇಸ್ ಹಾಕಿದ್ದಾರೆ. ಇಲ್ಲದಿದ್ದರೆ ಪ್ರಕರಣ ದಾಖಲಿಸಿಕೊಳ್ಳುತ್ತಲೇ ಇರಲಿಲ್ಲ ಎಂದರು.
ಮಂಜುನಾಥ್ ಅವರ ಮೇಲೆ ಕೇಸ್ ಹಾಕಿಲ್ಲ. ಇದು ಎಷ್ಟೋ ಪ್ರಕರಣಗಳಲ್ಲಿ ಆಗಿದೆ ಎಂದು ಹೇಳಿದ್ದಾರೆ ಅಂದರೆ ಇದು ಎಸಿಬಿ ಅನ್ನೋದು ಭ್ರಷ್ಟಾಚಾರ ನಿಗ್ರಹ ಘಟಕ ಆಗಿಲ್ಲ ಬದಲಿಗೆ ಕರೆಕ್ಷನ್ ಕರೆಪ್ಟ್ ಬ್ಯೂರೋ ಆಗಿದೆ ಎಂದು ಅವರು ಹೇಳಿದರು.

ಇದೇ ವೇಳೆ ಪಿಎಸ್ ಐ ಅಕ್ರಮ ಪ್ರಕರಣದ ದಿಕ್ಕು ತಪ್ಪಿಸಲು ಜಮೀರ್ ಅಹಮದ್ ಅವರ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿದೆ. ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.