ಬೆಂಗಳೂರು :ಏಪ್ರಿಲ್ 14: ರಾಜ್ಯದಲ್ಲಿ ಚುನಾವಣೆ ಕಣ ರಂಗೇರುತ್ತಿದೆ. ಮೂರು ಪಕ್ಷಗಳ ಹುರಿಯಾಳುಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಈಗಾಗಲೇ ಬಿಜೆಪಿ ಮೊದಲು ಮತ್ತು ಎಡರನೇ ಪಟ್ಟಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಮೊದಲ ಪಟ್ಟಿ ಮಾತ್ರ ರೀಲಿಸ್ ಮಾಡಿದೆ. ಇದ್ರ ಜೊತೆಗೆ ಇವತ್ತು ಜೆಡಿಎಸ್ ಕೂಡ ಎರಡನೇ ಪಟ್ಟಿ ರಿಲೀಸ್ ಮಾಡಿದೆ. ಅದ್ರಲ್ಲಿ ಹಾಸದ ಕ್ಷೇತ್ರದಿಂದ ಭವಾನಿ ರೇವಣ್ಣ ಬದಲಿಗೆ ಪ್ರಕಾಶ್ ಸ್ವರೂಪ್ ಗೆ ಟಿಕೆಟ್ ನೀಡಲಾಗಿದೆ.

ಈಗಾಗಲೇ ಜೆಡಿಸ್ 93 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಕುತೂಹಲಕಾರಿ ಬೆಳವಣಿಗೆಯಲ್ಲಿ ಹಾಸನದಿಂದ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಮೀಸ್ ಆಗಿದೆ. ಪ್ರಕಾಶ್ ಸ್ವರೂಪ್ ಅವರಿಗೆ ಹಾಸನದಲ್ಲಿ ಜೆಡಿಎಸ್ ಟಿಕೆಟ್ ದೊರೆತಿದೆ. ಈ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಕೈ ಮೇಲಾಗಿದೆ.


ಸಾಮಾನ್ಯ ಜೆಡಿಎಸ್ ಕಾರ್ಯಕರ್ತನಿಗೆ ಟಿಕೆಟ್ ನೀಡಬೇಕೆಂಬುದು ಹೆಚ್ ಡಿಕೆ ಅವರ ಅಭಿಪ್ರಾಯವಾಗಿತ್ತು. ಆದರೆ, ಹೆಚ್‌ಡಿ ರೇವಣ್ಣ ಅವರು ತಮ್ಮ ಪತ್ನಿ ಭವಾನಿ ರೇವಣ್ಣ ಹಾಸನದಿಂದ ಟಿಕೆಟ್ ಕೊಡಬೇಕೆಂದು ಒತ್ತಾಯಿಸಿದ್ದರು. ಈ ವಿಚಾರ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ತಲುಪಿತ್ತು. ಜೆಡಿಎಸ್ ವರಿಷ್ಠ ದೇವೇಗೌಡರು ಸಂಧಾನ ಸಭೆಯನ್ನು ನಡೆಸಿದ್ದರು. ಆ ಸಭೆಯಲ್ಲಿ ಕುಮಾರಸ್ವಾಮಿ, ರೇವಣ್ಣ ಹಾಗೂ ಭವಾನಿ ರೇವಣ್ಣ ಅವರು ಭಾಗವಹಿಸಿದ್ದರು. ಈ ಸಂಧಾನ ಸಭೆ ವಿಫಲವಾಗಿತ್ತು ಎನ್ನಲಾಗಿತ್ತು.