ಭಾರತ ವಿರುದ್ಧ ಎಡ್ಜ್ ಬಸ್ಟನ್ ನಲ್ಲಿ ನಾಳೆಯಿಂದ ನಡೆಯಲಿರುವ ೫ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಅಂತಿಮ 11 ಆಟಗಾರರ ತಂಡವನ್ನು ಪ್ರಕಟಿಸಿದೆ.
ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡದ ಅಂತಿಮ 11 ಆಟಗಾರರ ತಂಡವನ್ನು ಪ್ರಕಟಿಸಲಾಗಿದ್ದು, ಹಿರಿಯ ಮಧ್ಯಮ ವೇಗಿ ಜೇಮ್ಸ್ ಆಂಡರ್ಸನ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಸ್ಥಾನ ಪಡೆದಿದ್ದಾರೆ.
ಜೇಮ್ಸ್ ಆಂಡರ್ಸನ್ ಸುಮಾರು 40 ತಿಂಗಳ ನಂತರ ಇಂಗ್ಲೆಂಡ್ ತಂಡಕ್ಕೆ ಮರಳಿದ್ದಾರೆ. ಅಲ್ಲದೇ ಸ್ಟುವರ್ಟ್ ಬ್ರಾಡ್ ಕೂಡ ತಂಡದಲ್ಲಿದ್ದು, ವೇಗದ ದಾಳಿಗೆ ಒತ್ತು ನೀಡಲಾಗಿದೆ.
ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜಾಕ್ ಕ್ರಾವ್ಲೇ, ಅಲೆಕ್ಸ್ ಲೀಸ್, ಓಲೆ ಪೊಪೆ, ಜೋ ರೂಟ್, ಜೋನಾಥನ್ ಬೇರ್ ಸ್ಟೊ, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಮ್ಯಾಥ್ಯೂ ಪಾಟ್ಸ್, ಜಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್.