IPL 17 ನೇ ಆವೃತ್ತಿಯಲ್ಲಿ RCB ತನ್ನ ಖಾತೆ ತೆರೆದಿದೆ. ಪಂಜಾಬ್ ವಿರುದ್ಧ ನಡೆದ ಮ್ಯಾಚ್ ನಲ್ಲಿ ಜಯಭೇರಿ ಬಾರಿಸಿದೆ. ವಿರಾಟ್ ಕೊಹ್ಲಿಯ ಅಮೋಘ ಅರ್ಧ ಶತಕ (77 ರನ್) ಹಾಗೂ ದಿನೇಶ್ ಕಾರ್ತಿಕ್ ಬಾರಿಸಿದ ಸ್ಫೋಟಕ 28 ರನ್ಗಳ ನೆರವಿನಿಂದ ಮಿಂಚಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ನಗೆ ಬೀರಿದೆ. ಪಂಜಾಬ್ ವಿರುದ್ಧ 4 ವಿಕೆಟ್ಗಳ ವಿಜಯ ಸಾಧಿಸಿದೆ. ಇದರೊಂದಿಗೆ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಸೋಲಿನ ಕಹಿ ಮರೆಯಿತು. ಕೊಹ್ಲಿ ಈ ಪಂದ್ಯದ ಗೆಲುವಿನ ರೂವಾರಿ ಎನಿಸಕೊಂಡರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್‌ಸಿಬಿ 19.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 178 ರನ್ ಬಾರಿಸಿ ಗೆಲುವು ಸಾಧಿಸಿತು. ಕೊನೇ ಹಂತದಲ್ಲಿ ಆರ್‌ಸಿಬಿ ವಿಕೆಟ್ಗಳನ್ನು ಕಳೆದುಕೊಳ್ಳುವ ಮೂಲಕ ಆತಂಕ್ಕೆ ಸಿಲುಕಿತು. ದಿನೇಶ್ ಕಾರ್ತಿಕ್ 3 ಫೋರ್ ಹಾಗೂ 2 ಸಿಕ್ಸರ್ ಸಮೇತ 10 ಎಸೆತದಲ್ಲಿ 28 ರನ್ ಹಾಗೂ ಮಹಿಪಾಲ್ ಲಾಮ್ರೋರ್ 8 ಎಸೆತದಲ್ಲಿ 2 ಫೋರ್ ಹಾಗೂ 1 ಸಿಕ್ಸರ್ ಸಮೇತ 17 ರನ್ ಬಾರಿಸಿ ಗೆಲುವು ತಂದುಕೊಟ್ಟರು
ಆರಂಭಿಕರಾಗಿ ಆಡಲು ಇಳಿದ ವಿರಾಟ್ ಕೊಹ್ಲಿ ಉತ್ತಮವಾಗಿ ಬ್ಯಾಟ್ ಬೀಸಿದರು. ಹಿಂದಿನ ಪಂದ್ಯದಲ್ಲಿ ನಿಧಾನಗತಿಯಲ್ಲಿ ಆಡಿದ ಅವರು ಈ ಪಂದ್ಯದಲ್ಲಿ ಅಬ್ಬರಿಸಿದರು. ಆದರೆ, ವಿಕೆಟ್ ಪತನವಾದ ಕಾರಣ ಅವರ ಸ್ಟ್ರೈಕ್ ರೇಟ್ ನಿಧಾನವಾಗಿ ಕುಸಿಯಿತು. ಆದಾಗ್ಯೂ ಅವರು 49 ಎಸೆತಕ್ಕೆ 77 ರನ್ ಬಾರಿಸಿ ತಂಡದ ಮರ್ಯಾದೆ ಕಾಪಾಡಿದರು. ಹಿಂದಿನ ಪಂದ್ಯದಲ್ಲಿ ಮಿಂಚಿದ್ದ ಅನುಜ್ ರಾವತ್ 11 ರನ್ಗೆ ಸೀಮಿತಗೊಂಡರು. ಅಲ್ಲದೆ ಅವರು 14 ಎಸೆತಗಳನ್ನು ತೆಗೆದುಕೊಂಡರು. ಹೀಗಾಗಿ ಕೊನೇ ಹಂತದಲ್ಲಿ ಆರ್ಸಿಬಿಗೆ ರನ್ರೇಟ್ ಕಾಪಾಡಿಕೊಳ್ಳಲು ಸಾಧ್ಯವಾಗದೇ ಒತ್ತಡಕ್ಕೆ ಬಿತ್ತು. ಆದರೆ, ದಿನೇಶ್ ಕಾರ್ತಿಕ್ ಹಾಗೂ ಮಹಿಪಾಲ್ ಲಾಮ್ರೋರ್ ಆರ್‌ಸಿಬಿ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿದರು. ಪಂಜಾಬ್ ಪರ
ಕಗಿಸೊ ರಬಾಡ ಹಾಗೂ ಹರ್ಪ್ರೀತ್ ಬ್ರಾರ್ ತಲಾ 2 ವಿಕೆಟ್ ಪಡೆದರು.












