ಮೊನ್ನೆಯವರೆಗೂ ಒಬ್ಬರು ಪೊಲೀಸರಿಗೆ ತಂಪು ಪಾನೀಯ ಮಾರುತ್ತಿದ್ದರು. 40 ವರ್ಷಗಳ ಹಿಂದೆ ಅವರು ಜನಿಸಿದ ಕಟ್ಟಡದಲ್ಲಿ ಇನ್ನೊಬ್ಬರು ಅಂಗಡಿ ನಡೆಸುತ್ತಿದ್ದರು. ಮೂರನೆಯದು ಹಬ್ಬಕ್ಕಾಗಿ ಉಳಿತಾಯ ಮಾಡುತ್ತಿದ್ದರು. ಯಾರಿಗೂ ಯಾವುದೇ ಪೂರ್ವ ಸೂಚನೆ ಇರಲಿಲ್ಲ, ಯಾರ ಪ್ರತಿಕ್ರಿಯೆಗೂ ಅವಕಾಶ ಇರಲಿಲ್ಲ. ಅಳಿದುಳಿದ ತಮ್ಮ ಸರಕು-ಸಾಮಾನುಗಳನ್ನು ಎತ್ತಿಟ್ಟುಕೊಳ್ಳುವುದಷ್ಟೇ ಅವರಿಗೆ ಉಳಿದಿದ್ದ ಏಕೈಕ ದಾರಿಯಾಗಿತ್ತು.
ಕೆಲವೇ ಗಂಟೆಗಳ ಹಿಂದೆ, ಇಬ್ಬರು ಸಿಆರ್ಪಿಎಫ್ ಅಧಿಕಾರಿಗಳು ಜಹಾಂಗೀರ್ಪುರಿಯಲ್ಲಿರುವ ಅಕ್ಬರ್ನ ಮನೆಯ ಮೇಲೆ ಬಿಸಿಲ ಬೇಗೆ ತಡೆಯಲಾರದೆ ಕುಳಿತಿದ್ದಾಗ ಅವರ ಮೇಲೆ ಬಿಸಿಲು ಬಾರದಂತೆ 35 ವರ್ಷದ ಅಂಗಡಿ ಮಾಲೀಕರು ಕೆಂಪು ಫ್ಲಕ್ಸ್ ಒಂದೊನ್ನು ಸೂರ್ಯನಿಗೆ ಅಡ್ಡ ಇಟ್ಟಿದ್ದರು. ‘ಬುಲ್ಡೋಜರ್ ಡ್ರೈವ್ ನನ್ನ ಅಂಗಡಿಯನ್ನು ಹಾಳು ಮಾಡುತ್ತದೆಯೇ? ಎಂದು ನಾನು ಕೇಳಿದೆ. ಇಲ್ಲ ಅದು ಗುಜರಿ ಅಂಗಡಿಗಳನ್ನು ಮಾತ್ರ ನಾಶ ಮಾಡುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಆಗಿದ್ದೇ ಬೇರೆ” ಎಂದು ಅಳು ನುಂಗಿಕೊಂಡರು ಅಕ್ಬರ್.
ಸಣ್ಣ ಅಂಗಡಿಯೊಂದರ ಮೇಲೆ ಬುಲ್ಡೋಜರ್ ನುಗ್ಗಿದ ಒಂದು ಗಂಟೆಯ ನಂತರ ಬಂದ ಅದರ ಮಾಲೀಕನಿಗೆ ಸಿಕ್ಕಿದ್ದು ಕೆಲವು ಸಿಗರೇಟ್ ಪ್ಯಾಕೆಟ್ಗಳು ಮತ್ತು ಧೂಳಿನಿಂದ ಆವೃತವಾದ ತಂಪು ಪಾನೀಯಗಳು ಮಾತ್ರ. ನಾಲ್ವರನ್ನು ಹೊಂದಿರುವ ಅವರ ಕುಟುಂಬಕ್ಕೆ ಈಗ ಉಳಿದಿರುವುದು ಬಿಡಿಗಾಸು ಮಾತ್ರ.
ಇದಕ್ಕೆ ನೂರು ಮೀಟರ್ ದೂರದಲ್ಲಿ ದಿನೇಶ್ ಕುಮಾರ್ ಎಂಬುವವರ ಮೊಬೈಲ್ ರಿಪೇರಿ ಅಂಗಡಿಯ ಮೇಲೆ ಲೋಹದ ಮೇಲ್ಕಟ್ಟು ಮುರಿದುಬಿದ್ದಿದೆ. ಅದರ ಬೆಲೆ 50,000 ರೂಪಾಯಿ. ಇದಕ್ಕೂ ಮೀರಿ ಹಾನಿಯಾಗಿರುವುದು ಇಲ್ಲಿಗೆ ಎಂದು ತಮ್ಮ ಎದೆ ತೋರಿದರು 40 ವರ್ಷ ವ್ಯಕ್ತಿ. ‘ನನ್ನ ಅಂಗಡಿಯನ್ನು ಕೆಡವುತ್ತೀರಾ? ನಮ್ಮ ವಸ್ತುಗಳನ್ನು ಸ್ಥಳಾಂತರಿಸಬೇಕಾ? ಎಂದು ಕಳೆದ ರಾತ್ರಿಯೇ ಪೊಲೀಸ್ ಸಿಬ್ಬಂದಿಯನ್ನು ಕೇಳಿದ್ದೆ. ಅವರು ಇಲ್ಲ ಎಂದು ಹೇಳಿದ್ದರು. ಕೆಲವರ ತಪ್ಪುಗಳಿಂದಾಗಿ ನಮಗೆಲ್ಲ ಶಿಕ್ಷೆಯಾಗುತ್ತಿದೆ’ ಎಂದು ಅಲವತ್ತುಕೊಂಡರು.
ಇವು ನಿನ್ನೆ ದೆಹಲಿಯ ಜಹಾಂಗೀರಪುರಿ ಮುಖ್ಯರಸ್ತೆಯಲ್ಲಿ ಬುಲ್ಡೋಜರ್ ಕಾರ್ಯಾಚರಣೆಗೆ ಒಳಗಾದ ಜಾಗದಲ್ಲಿ ಕಂಡುಬಂದ, ಕೇಳಿಬಂದ ಕರುಣಾಜನ ದೃಶ್ಯಗಳು. ಇದೇ ಜಹಾಂಗೀರಪುರಿಯಲ್ಲಿ ಕಳೆದ ಶನಿವಾರ ಹನುಮ ಜಯಂತಿ ನಡೆಯಿತು. ಆಗ ಹೊತ್ತಿಕೊಂಡ ಕೋಮು ದಳ್ಳುರಿಗೆ ಇನ್ನು ನೀರು ಬಿದ್ದಿಲ್ಲ. ಕೋಮು ಸೌಹಾರ್ದತೆ ಕದಡದಂತೆ ಕಾಪಾಡಬೇಕಾದ ದೆಹಲಿ ನಾರ್ತ್ ಮುನಿಸಿಪಲ್ ಕಾರ್ಪೊರೇಶನ್ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದೆ. ಜಹಾಂಗೀರಪುರಿ ಮುಖ್ಯರಸ್ತೆಯಲ್ಲಿ ಇದ್ದಕ್ಕಿದ್ದಂತೆ ಒತ್ತುವರಿ ತೆರವು ಕಾರ್ಯಾಚರಣೆ ಹಮ್ಮಿಕೊಂಡಿದೆ. ಇದರ ಪರಿಣಾಮ ಏನೇನಾಗಿದೆ ಎನ್ನುವುದನ್ನು ನೋಡುತ್ತಾ ಹೋಗಿ.
ಈ ಕೋಮುಕ್ರೋಧದ ನಡುವೆಯೂ ಐದು ದಿನಗಳಲ್ಲಿ ಚುರುಕಾದ ವ್ಯಾಪಾರದ ಆಯಿತೆಂದು ಅಂಗಡಿ ಮಾಲೀಕ ಅಕ್ಬರ್, ಸಿಆರ್ಪಿಎಫ್, ದೆಹಲಿ ಪೊಲೀಸ್ ಮತ್ತು ಆರ್ಎಎಫ್ ಸಿಬ್ಬಂದಿಗೆ ನೀರು ಮತ್ತು ಸಿಹಿ ಹಂಚಿದ್ದಾರೆ. ಅವರು ಕುಳಿತುಕೊಳ್ಳಲು ಜಾಗ ಮಾಡಿಕೊಟ್ಟಿದ್ದಾರೆ. ದೆಹಲಿಯ ಬಿರು ಬಿಸಿಲಿನಲ್ಲಿ ನೆರಳು ಕಲ್ಪಿಸಿಕೊಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಅವರಿಗೆ ಸಿಕ್ಕಿದ್ದು ಅವರ ಅಂಗಡಿ ನಾಶ.
ಅಕ್ಬರ್ ಗೋಳು ಹೇಳ ತೀರದು. ಈ ಬೇಸಿಗೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ದುಡಿಯಬೇಕೆಂದು ನಿರ್ಧರಿಸಿದ್ದರು. 12 ಲಕ್ಷ ರೂಪಾಯಿ ಸಾಲ ತಂದು ಮೂರು ಚಾಕೊಲೇಟ್ ಬಣ್ಣದ ರೆಫ್ರಿಜರೇಟರ್ಗಳನ್ನು ತಂದಿದ್ದರು. ಅವುಗಳ ಒಳಗೆ 15,000 ರೂಪಾಯಿ ಮೌಲ್ಯದ ತಂಪು ಪಾನೀಯಗಳನ್ನು ಸಂಗ್ರಹಿಸಿಟ್ಟಿದ್ದರು. ಈಗ ನಾಶವಾಗಿರುವುದು ಅಂಗಡಿಯಲ್ಲ, ಬದುಕು ಎನ್ನುತ್ತಾರೆ ಅವರು.
ಈಗ ಅಕ್ರಮ ಎಂದು ತೆರವು ಗೊಳಿಸಲಾಗಿರುವ ಅಂಗಡಿ ಮೇಲೆ ಬುಲ್ಡೋಜರ್ ಹರಿಸಿರುವ ದೆಹಲಿ ನಾರ್ತ್ ಮುನ್ಸಿಪಲ್ ಕಾರ್ಪೊರೇಶನ್ 2021ರಲ್ಲಿ ಅಂದರೆ ಕಳೆದ ವರ್ಷ ಕೊಟ್ಟಿರುವ ಪರವಾಗಿ ಪತ್ರವನ್ನು ತೋರುತ್ತಾ ಕಣ್ಣೊರೆಸಿಕೊಳ್ಳುತ್ತಾರೆ ಅಕ್ಬರ್ ಅವರ ಪತ್ನಿ ರಹೀಮಾ. ‘ನಾವು ಕಾನೂನುಬಾಹಿರವಾಗಿ ಏನನ್ನೂ ಮಾಡಿಲ್ಲ. ನಮಗೆ ಏಕೆ ಶಿಕ್ಷೆಯಾಯಿತು? ಇದೇ ನಮ್ಮ ಜೀವನಾಧಾರ’ ಎನ್ನುತ್ತಾರೆ ಅವರು. ಇವರ ಇಬ್ಬರು ಮಕ್ಕಳಾದ ರಹೀಮ್ (16) ಮತ್ತು ಆಸಿಫ್ (12) ಅವಶೇಷಗಳಿಂದ ತಮ್ಮ ಕೈಲಾದಷ್ಟು ರಕ್ಷಿಸುವ ಪ್ರಯತ್ನದಲ್ಲಿ ನಿರತರಾಗಿದ್ದರು. ಸ್ಲೆಡ್ಜ್ ಹ್ಯಾಮರ್ಗಳು ಅಂಗಡಿಯಲ್ಲಿ ಉಳಿದಿದ್ದನ್ನು ಕೆಡವಿದಾಗಲೂ ಆಸಿಫ್ ಹಣ್ಣಿನ ರಸದ ಪ್ಯಾಕೆಟ್ ಅನ್ನು ತೆಗೆದುಕೊಂಡನು. ರಹೀಮ್ ಚಿಪ್ಸ್ ಪ್ಯಾಕೆಟ್ಗಳನ್ನು ಉಳಿಸುವಲ್ಲಿ ಯಶಸ್ವಿಯಾದರು.
ಅಕ್ಬರ್ ಪ್ರಕಾರ, ರಹೀಮ್ ಮೊದಲ ಕೋವಿಡ್ ಲಾಕ್ಡೌನ್ ಸಮಯದಲ್ಲಿ ಶಾಲೆಯನ್ನು ಬಿಟ್ಟಿದ್ದಾನೆ. ಈಗ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಅಪ್ರೆಂಟಿಸ್ ಆಗಿ ಕೆಲಸ ಮಾಡುತ್ತಿದ್ದಾರೆ. ‘ಬುಲ್ಡೋಜರ್ ಬಂದಾಗ ನಾನು ಮಲಗಿದ್ದೆ. ನನ್ನ ತಾಯಿ ಅಳುತ್ತಿರುವುದನ್ನು ನಾನು ನೋಡಿದೆ ಮತ್ತು ಆ ತಂಪು ಪಾನೀಯಗಳನ್ನು ಉಳಿಸಲು ಸಹಾಯ ಮಾಡಲು ಹೊರಗೆ ಹೋದೆ’ ಎನ್ನುತ್ತಾನೆ ರಹೀಮ್.
ದಿನೇಶ್ ಕುಮಾರ್ ಅವರು ನವೆಂಬರ್ 2020ರಲ್ಲಿ ತಮ್ಮ ಮೊಬೈಲ್ ರಿಪೇರಿ ಅಂಗಡಿಯನ್ನು ತೆರೆದಿದ್ದರು, “18 ವರ್ಷಗಳ ಕಾಲ NGO ವೊಂದರಲ್ಲಿ ಮ್ಯಾನೇಜರ್ ಕೆಲಸ ಮಾಡಿದ ನಂತರ ಕಳೆದ ವರ್ಷ ರಾಜೀನಾಮೆ ನೀಡಿದ್ದೇನೆ. ಸರ್ಕಾರ ಉದ್ಯಮಶೀಲತೆಗಾಗಿ ಆದ್ಯತೆ ನೀಡುವ ಸ್ಫೂರ್ತಿ ಪಡೆದು ಸ್ವಂತ ವ್ಯವಹಾರವನ್ನು ಅಭಿವೃದ್ಧಿಪಡಿಸಲು ಶುರುಮಾಡಿದ್ದೆ’ ಎನ್ನುತ್ತಾರೆ ಅವರು.
ದಿನೇಶ್ ಕುಮಾರ್ ಅವರ ಅಂಗಡಿಯ ಮೇಲೆ ಲೋಹದ ಮೇಲ್ಕಟ್ಟು ಹಾನಿಗೊಳಗಾಗಿದೆ. ಇದರಿಂದ ಅವರು ಏನು ಸಾಧಿಸಿದ್ದಾರೆ? ಈ ಮೂಲಕ ಏನು ಸಾಬೀತುಪಡಿಸಿದ್ದಾರೆ? ಮೇಲ್ಕಟ್ಟುಗಳನ್ನು ತೆಗೆದುಹಾಕಲು ಅವರು ನಮ್ಮನ್ನು ಕೇಳಬಹುದಿತ್ತು. ನಾವು ಅದನ್ನು ಮಾಡುತ್ತಿದ್ದೆವು. ಈ ಅಂಗಡಿ ಕೇವಲ ಕೆಲವು ತಿಂಗಳ ಹಳೆಯದು, ಆದರೆ ನಾನು ಇದೇ ಕಟ್ಟಡದಲ್ಲಿ ಹುಟ್ಟಿದ್ದು. ಹುಟ್ಟಿದಾಗಿನಿಂದಲೂ ಇಲ್ಲೇ ಇದ್ದೇನೆ’ ಎಂದು ಹೇಳುತ್ತಾರೆ.
ಸ್ಥಳೀಯ ಮಸೀದಿ ಆವರಣದಲ್ಲಿ ಬಾಡಿಗೆ ಜಾಗದಲ್ಲಿ ಆಶು ಎಂಬುವವರು ಮೋಟಾರ್ ಬೈಕ್ ರಿಪೇರಿ ಅಂಗಡಿ ನಡೆಸುತ್ತಿದ್ದರು. ಅವರು ರಿಪೇರಿ ಮಾಡಲು ಇಟ್ಟಿದ್ದ ಗ್ರಾಹಕರ ಬೈಕ್ ಗಳು ಸೇರಿದಂತೆ ಲೋಹದ ಮೇಲ್ಚಾವಣಿ, ಶೆಟರ್ ಹಾನಿಯಾಗಿದೆ. ಮೂರು ವಾಹನಗಳು ನಾಶವಾಗಿವೆ. ದ್ವಿಚಕ್ರ ವಾಹನದ ಜಖಂಗೊಂಡ ಅವಶೇಷಗಳನ್ನು ದಿಟ್ಟಿಸಿ ನೋಡುತ್ತಿದ್ದ ಆಶು ಅವರ ಕಂಬಗಳಲ್ಲಿ ಆಸೂ (ಕಣ್ಣೀರು) ಬಂದಿತ್ತು. ಆದ ನಷ್ಟವನ್ನು ಒಂದೂವರೆಯಿಂದ ಎರಡು ಲಕ್ಷ ರೂಪಾಯಿ ಎನ್ನುತ್ತಾರೆ.
ಎರಡು ಮಕ್ಕಳ ತಂದೆ ಆಶು “ಈದ್ಗಾಗಿ ಉಳಿತಾಯ ಮಾಡುತ್ತಿದ್ದರು”. “ಈಗ ಗ್ರಾಹಕರು ನನ್ನ ಬೆನ್ನು ಬೀಳುತ್ತಾರೆ. ಹಿಂಸಾಚಾರ ನಡೆದ ದಿನದಿಂದ ಅಂಗಡಿ ಮುಚ್ಚಿದ್ದು, ವ್ಯಾಪಾರ ವಹಿವಾಟು ನಡೆಯದೆ ನಷ್ಟವಾಗಿತ್ತು. ಈಗ ಅಂಗಡಿಯೇ ನಾಶವಾಗಿದೆ. ನಾನಿಲ್ಲಿ 16-17 ವರ್ಷಗಳಿಂದ ಅಂಗಡಿ ನಡೆಸುತ್ತಿದ್ದೇನೆ. ಈ ಅಂಗಡಿ ಬಗ್ಗೆ ಯಾರೂ ಯಾವುದೇ ಚಕಾರ ಎತ್ತಿರಲಿಲ್ಲ. ಇಂಥದ್ದೊಂದು ಸಂಭವಿಸುತ್ತದೆ ಎಂದು ನಾನು ಭಾವಿಸಿರಲಿಲ್ಲ’ ಎನ್ನುತ್ತಾರೆ ಅವರು.
ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ನಮಗೆ ಯಾವುದೇ ಸೂಚನೆ ನೀಡದೆ ನಮ್ಮ ಅಂಗಡಿಗಳನ್ನು ಕೆಡವಿದ್ದಾರೆ. ಇದು ಹಬ್ಬದ ಸಮಯವಾಗಬೇಕಿತ್ತು. ಆದರೀಗ ನಾವು ಹಬ್ಬ ಮಾಡುವ ಸ್ಥಿತಿಯಲ್ಲಿ ಇಲ್ಲ ಎನ್ನುತ್ತಾರೆ ಸ್ಥಳೀಯರು. ನಿನ್ನೆ ಈ ಬುಲ್ಡೋಜರ್ ಮೂಲಕ ಅಕ್ರಮವಾಗಿ ಒತ್ತುವರಿ ಕಾರ್ಯಾಚರಣೆ ಮಾಡುತ್ತಿರುವ ದೆಹಲಿ.ಮುನ್ಸಿಪಲ್ ಕಾರ್ಪೊರೇಶನ್ ನಡೆಗೆ ಸುಪ್ರೀಂ ಕೋರ್ಟ್ ತಡೆ ಕೊಟ್ಟಿದೆ. ಸುಪ್ರೀಂ ಕೋರ್ಟ್ ತಡೆಕೊಟ್ಟಮೇಲೂ ಆದೇಶ ಕೈತಲುಪಿಲ್ಲ ಎಂಬ ನೆಪ ಹೇಳಿಕೊಂಡು ಅಧಿಕಾರಿಗಳು ಬಡವರ ಹೊಟ್ಟೆಗೆ ಹೊಡೆಯುವ ಕೆಲಸವನ್ನು ಮುಂದುವರೆಸಿದ್ದರು. ಇಂದು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯಲಿದೆ. ಸದ್ಯ ಅಲ್ಲಿನ ಜನಕ್ಕೆ ಭರವಸೆ ಅಂತಾ ಇರುವುದು ಸುಪ್ರೀಂ ಕೋರ್ಟ್ ಮೇಲೆ ಮಾತ್ರ.