ಮಂಗಳೂರಿನ ಅರುಣ್ ಪುತ್ತಿಲ(Arun Puthila) ನನ್ನನ್ನು ಭೇಟಿ ಮಾಡಿದ್ದು ಸತ್ಯ, ಬೇಷರತ್ ಆಗಿ ಬಿಜೆಪಿ(BJP) ಸೇರ್ಪಡೆಯಾಗಿ ಎಂದು ಹೇಳಿದ್ದೇನೆ ಎಂದು ಮೈಸೂರಿ(Mysore)ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(BY Vijayendra) ಹೇಳಿದರು.
ಮಂಗಳೂರಿನ ಅರುಣ್ ಪುತ್ತಿಲ ನನ್ನನ್ನು ಭೇಟಿ ಮಾಡಿದ್ದು ಸತ್ಯ, ಬೇಷರತ್ ಆಗಿ ಬಿಜೆಪಿ ಏರ್ಪಡೆಯಾಗಿ ಎಂದು ಹೇಳಿದ್ದೇನೆ. ಯಾವುದೇ ಷರತ್ತುಗಳು ಬೇಡ. ಮೋದಿ(Narendra Modi) ನಾಯಕತ್ವಕ್ಕಾಗಿ ಎಲ್ಲರೂ ಒಂದಾಗಬೇಕು ಎಂದು ಹೇಳಿದ್ದೆನೆ. ನಾನು ಕೂಡ ಅಲ್ಲಿನ ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡುತ್ತೇನೆ ಎಂದಿದ್ದೇನೆ. ಅರುಣ್ ಪುತ್ತಿಲ ಅಷ್ಟೇ ಅಲ್ಲ, ಯಾರೇ ಬೇಷರತ್ತಾಗಿ ಪಕ್ಷಕ್ಕೆ ಬಂದರೆ ನಮ್ಮ ಸ್ವಾಗತ ಇದೆ ಎಂದರು.

ಚಾಮರಾಜನಗರ(Chamarajanagar) ಲೋಕಸಭಾ(Loka Saba) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಅಭ್ಯರ್ಥಿ ಫೈನಲ್(Final) ಆಗಿದೆ. ಎಲ್ಲಾ ಕ್ಷೇತ್ರಕ್ಕೂ ನಮಗೆ ಬಿಜೆಪಿ, ಕಮಲ ಮಾತ್ರ ಅಭ್ಯರ್ಥಿ. ಈ ವಿಚಾರದಲ್ಲಿ ನಮ್ಮ ಪಕ್ಷದ ಹಿರಿಯರು ತೀರ್ಮಾನ ಮಾಡುತ್ತಾರೆ. ಉಳಿದಂತೆ ಬೇರೆ ಯಾವ ಭಿನ್ನಾಭಿಪ್ರಾಯಗಳು ನಮ್ಮ ನಡುವೆ ಇಲ್ಲ. ಜೆಡಿಎಸ್(JDS) ಮತ್ತು ಬಿಜೆಪಿ ನಡುವೆ ಸೀಟ್ ಹಂಚಿಕೆಗೆ ಯಾವ ಗೊಂದಲಗಳು ಇಲ್ಲ. ಮುಂದೆಯೂ ಕೂಡ ಅದು ಉದ್ಭವ ಆಗುವುದಿಲ್ಲ ಎಂದು ಹೇಳಿದ್ದಾರೆ.
ಇವತ್ತು ಕುಮಾರಸ್ವಾಮಿ ಅಮಿತ್ ಶಾ(Amit Shah) ಅವರನ್ನು ಯಾಕೆ ಭೇಟಿ ಮಾಡುತ್ತಿದ್ದಾರೆ ಅಂತ ನನಗೆ ಗೊತ್ತಿಲ್ಲ. ನಾನು ಮುಂದಿನ ತಿಂಗಳ ಮೊದಲ ವಾರದಲ್ಲಿ ದೆಹಲಿಗೆ ತೆರಳಿ ನಮ್ಮ ಹೈಕಮಾಂಡ್ ಭೇಟಿ ಮಾಡುತ್ತೇನೆ. ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಮುಂದಿನ ದಿಕ್ಸೂಚಿಯಲ್ಲ. ಗುಂಡ್ಲುಪೇಟೆ ಉಪ ಚುನಾವಣೆ ನಡೆದ ಮೇಲೆ ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರ ಹೇಗೆ ಸೋತಿದೆ ಅಂತ ಜನರಿಗೆ ಗೊತ್ತಿದೆ. ಸರ್ಕಾರ ಇದ್ದಾಗ ಉಪ ಚುನಾವಣೆಗಳು ಹೇಗೆ ನಡೆಯುತ್ತೆ ಅಂತ ಜನರಿಗೆ ಗೊತ್ತಿದೆ.
#BYVijayendra #BJPKarnataka #Mysore #ArunPuthila #Chamarajanagar #HDKumaraswamy


