• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಲಕ್ಷ್ಮೀ ಹೆಬ್ಬಾಳ್ಕರ್‌ ರಿಲೀಸ್‌ ಮಾಡಿದ ವಿಡಿಯೋಗೆ ಬೆಲೆನೇ ಇಲ್ವಾ..?

ಕೃಷ್ಣ ಮಣಿ by ಕೃಷ್ಣ ಮಣಿ
December 24, 2024
in Top Story, ಕರ್ನಾಟಕ, ರಾಜಕೀಯ
0
ಲಕ್ಷ್ಮೀ ಹೆಬ್ಬಾಳ್ಕರ್‌ ರಿಲೀಸ್‌ ಮಾಡಿದ ವಿಡಿಯೋಗೆ ಬೆಲೆನೇ ಇಲ್ವಾ..?
Share on WhatsAppShare on FacebookShare on Telegram

ಸಿ.ಟಿ.ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಸದನ ಸಮರ ಇನ್ನೂ ಮುಗಿಯುವ ಲಕ್ಷಣಗಳು ಕಾಣ್ತಿಲ್ಲ. ಇಬ್ಬರ ನಡುವಿನ ಸಂಘರ್ಷದ ಬಗ್ಗೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ್ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಸದನದಲ್ಲಿ ಆದ ಘಟನೆ ಬಗ್ಗೆ ಚರ್ಚೆ ಮಾಡಿ ಕಾನೂನು ನೋಡಿ ತೀರ್ಮಾನ ಕೊಟ್ಟು ಬಂದಿದ್ದೇನೆ. ಆ ನಂತರ ಸಿ.ಟಿ ರವಿ ಅರೆಸ್ಟ್ ಮಾಡಿರೋದು. ಅದು ನನಗೆ ಸಂಬಂಧಪಡದ ವಿಚಾರ. ಸರ್ಕಾರ ಮತ್ತು ಪೊಲೀಸ್ ಕೆಲಸದಲ್ಲಿ ಹಸ್ತಕ್ಷೇಪ ಮಾಡಲ್ಲ. ಹಕ್ಕುಚ್ಯುತಿ ಬಗ್ಗೆ ನನಗೆ ಯಾರು ದೂರು ಕೊಟ್ಟಿಲ್ಲ. ಹಕ್ಕುಚ್ಯುತಿ ಬಗ್ಗೆ ದೂರು ಕೊಟ್ಟರೆ ಪರಿಶೀಲನೆ ಮಾಡ್ತೇನೆ ಎಂದಿದ್ದಾರೆ.

ADVERTISEMENT
Mandya ಸಾಹಿತ್ಯ ಸಮ್ಮೇಳನದಲ್ಲಿ ವಿರೋಧದ ಮಧ್ಯೆನೂ ಚಿಕನ್, ಮುದ್ದೆ ಊಟ ಹಂಚಿದ ಪ್ರಗತಿಪರರು #pratidhvani

ಪೊಲೀಸರು ಬಂಧನ ಮಾಡಿದ ವಿಚಾರದ ಬಗ್ಗೆ ಸಿ.ಟಿ.ರವಿ ಹಕ್ಕುಚ್ಯುತಿ ಮಂಡಿಸಲಿ. ಆಮೇಲೆ ಪರಿಶೀಲನೆ ಮಾಡ್ತೀನಿ. ಪೊಲೀಸರು ತನಿಖೆ ನಡೆಸಲು ನನ್ನ ಅನುಮತಿ ಬೇಕಾಗಿಲ್ಲ. ಬಂಧನದ ಕುರಿತು ನನಗೆ ಮಾಹಿತಿ ನೀಡಿದ್ರು. ಆದರೆ ಬಂಧನದ ಬಳಿಕ ಮಾಹಿತಿ ನೀಡಿದ್ದಾರೆ. ಶಾಸಕರ ಭದ್ರತೆ ಕುರಿತು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಸರ್ಕಾರದ ಬಳಿ ಇರುವ ಆಡಿಯೊ ವಿಡಿಯೋ FSLನಲ್ಲಿ ದೃಢವಾಗಬೇಕು ಅಂತ ಹೇಳಿದ್ರು.

ಸಿ.ಟಿ ರವಿ ವಿರುದ್ಧ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ. ನನ್ನ ವಿರುದ್ಧ ಸಿ.ಟಿ.ರವಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಈ ಬಗ್ಗೆ ಸಭಾಪತಿಗೆ ಮತ್ತೊಮ್ಮೆ ದೂರು ಕೊಡ್ತೀನಿ. ನಾನು ಹೋರಾಟ ನಿಲ್ಲಿಸಲ್ಲ. ಘಟನೆ ಬಗ್ಗೆ ದಾಖಲೆ ಕೊಡ್ತೀವಿ. FSL ವರದಿಯೂ ಶೀಘ್ರವೇ ಬಹಿರಂಗ ಆಗಬೇಕು ಅಂತ ಹೆಬ್ಬಾಳ್ಕರ್ ಹೇಳಿದ್ದಾರೆ. ಸಿ.ಟಿ.ರವಿ ಹೇಳಿಕೆ ಸಮರ್ಥಿಸಿಕೊಳ್ತಿರೋ ಬಿಜೆಪಿ ನಾಯಕರ ವಿರುದ್ಧವೂ ಹೆಬ್ಬಾಳ್ಕರ್ ಕಿಡಿ ಕಾರಿದ್ದಾರೆ. ಬಿಜೆಪಿಯವರು ಸಿ.ಟಿ ರವಿ ಅವರ ಬೆನ್ನಿಗೆ ನಿಂತಿದ್ದಾರೆ. ಹಾರ ತುರಾಯಿ ಹಾಕಿಸಿಕೊಂಡು ವೈಭವೀಕರಿಸುತ್ತಿದ್ದಾರೆ. ಬಿಜೆಪಿಯವ್ರು ಎನ್‌ಕೌಂಟರ್ ಅಂತಾರೆ.. ನಾಚಿಕೆ ಆಗಲ್ವಾ? ದಾರಿ ತಪ್ಪಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಪ್ರಧಾನಿ ಹಾಗು ರಾಷ್ಟ್ರಪತಿ ಅವರಿಗೆ ನಾನು ಪತ್ರ ಬರೆಯುತ್ತೇನೆ ಎಂದಿದ್ದಾರೆ.

ಇನ್ನು ಹೆಬ್ಬಾಳ್ಕರ್ ಹೇಳಿಗೆಗೆ ಚಿಕ್ಕಮಗಳೂರಲ್ಲಿ MLC ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಹೆಬ್ಬಾಳ್ಕರ್ ಸೂಚನೆ ಮೇರೆಗೆ ನನ್ನ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಡಿಕೆಶಿ, ಚನ್ನರಾಜ್ ಹಟ್ಟಿಹೊಳಿ ಕೂಡ ನನಗೆ ಧಮ್ಕಿ ಹಾಕಿದ್ದಾರೆ. ಸುವರ್ಣಸೌಧದಲ್ಲೇ ನನ್ನ ಮೇಲೆ ದಾಳಿಗೆ ಯತ್ನ ನಡೆದಿದೆ. ನಾನು ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ದೂರು ನೀಡಿದ್ದೇನೆ. ಆಳುವವರಿಗೊಂದು, ವಿರೋಧ ಪಕ್ಷಕ್ಕೆ ಒಂದು ಕಾನೂನು ಇಲ್ಲ. ಕಾನೂನು ಎಲ್ಲರಿಗೂ ಒಂದೆ ಎಂದಿದ್ದಾರೆ.

ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಮಾತನಾಡಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಿಡುಗಡೆ ಮಾಡಿದ ವೀಡಿಯೋಗೆ ಬೆಲೆ ಇಲ್ಲ ಎಂದಿದ್ದಾರೆ. ಸಭಾಪತಿ ಹೊರಟ್ಟಿಯವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆ ರೀತಿ ಮಾತನಾಡಿರೋ ಆಡಿಯೋ, ವೀಡಿಯೋ ದಾಖಲೆ ಇಲ್ಲ ಅಂತ ಹೇಳಿದ್ದಾರೆ. ಇವರ ಬಳಿ ಇರೋ ವೀಡಿಯೋ ದಾಖಲೆಗೆ ಯಾವುದೇ ಬೆಲೆ ಇಲ್ಲ ಅಂತಾ ತಿಳಿಸಿದ್ದಾರೆ.

Tags: CT Ravict ravi derogatory remarks against lakshmi hebbalkarct ravi lakshmi hebbalkarct ravi lakshmi hebbalkar fightct ravi latest newsct ravi on lakshmi hebbalkarct ravi statement on lakshmi hebbalkarct ravi vs lakshmi hebbalkarct ravi vs laxmi hebbalkarLakshmi hebbalkarlakshmi hebbalkar allegation on ct ravilakshmi hebbalkar latest newslakshmi hebbalkar newslakshmi hebbalkar speechlakshmi hebbalkar vs ct ravi
Previous Post

ಮದುವೆ ನೆಪದಲ್ಲಿ ಫೋಟೋಗ್ರಾಫರ್ ಕರೆಸಿ 8 ಲಕ್ಷ ಮೌಲ್ಯದ ಕ್ಯಾಮೆರಾ ಕದ್ದ ಕಳ್ಳ

Next Post

ಸ್ವೇಚ್ಛಾ ಟ್ರೈಲರ್ ಆಡಿಯೋ ಬಿಡುಗಡೆಪ್ರೀತಿ-ಬಾಂಧವ್ಯದ ಕಥೆಗಳ ಸಂಗಮ

Related Posts

BIG BREAKING : ಕಾಂಗ್ರೆಸ್‌ ಪಾಳಯಕ್ಕೆ ಶಾಕ್‌ : ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ..
Top Story

BIG BREAKING : ಕಾಂಗ್ರೆಸ್‌ ಪಾಳಯಕ್ಕೆ ಶಾಕ್‌ : ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ..

by ಪ್ರತಿಧ್ವನಿ
April 17, 2026
0

ಬೆಂಗಳೂರು : ಧಾರವಾಡದ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ನಿನ್ನೆಯಷ್ಟೇ ಶಾಸಕ ಸೇರಿದಂತೆ...

Read moreDetails
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
ಉದಯನಿಧಿಗೆ ವಿಜಯ್‌ ಖಡಕ್‌ ಕೌಂಟರ್‌ : ತಾನು ಸ್ಪರ್ಧಿಸಿರುವ ಕ್ಷೇತ್ರದ ಮತದಾರರಿಗೆ ಥಳಪತಿ ಮನವಿ ಏನು..?

ಉದಯನಿಧಿಗೆ ವಿಜಯ್‌ ಖಡಕ್‌ ಕೌಂಟರ್‌ : ತಾನು ಸ್ಪರ್ಧಿಸಿರುವ ಕ್ಷೇತ್ರದ ಮತದಾರರಿಗೆ ಥಳಪತಿ ಮನವಿ ಏನು..?

April 17, 2026
ಲಾಹೋರ್‌ನಲ್ಲಿ ಸ್ಫೋಟಕ ಬೆಳವಣಿಗೆ: ಲಷ್ಕರ್ ಸಹ-ಸ್ಥಾಪಕನಿಗೆ ಗುಂಡೇಟು

ಲಾಹೋರ್‌ನಲ್ಲಿ ಸ್ಫೋಟಕ ಬೆಳವಣಿಗೆ: ಲಷ್ಕರ್ ಸಹ-ಸ್ಥಾಪಕನಿಗೆ ಗುಂಡೇಟು

April 17, 2026
ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

April 16, 2026
Next Post

ಸ್ವೇಚ್ಛಾ ಟ್ರೈಲರ್ ಆಡಿಯೋ ಬಿಡುಗಡೆಪ್ರೀತಿ-ಬಾಂಧವ್ಯದ ಕಥೆಗಳ ಸಂಗಮ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada