• Home
  • About Us
  • ಕರ್ನಾಟಕ
Monday, February 2, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಬದಲಾದ ಭಾರತದಲ್ಲಿ ಬದಲಾಗಲಿದ್ದಾರೆಯೇ ಇಂದಿರಾರ ಮೊಮ್ಮಗ?

ಫಾತಿಮಾ by ಫಾತಿಮಾ
November 13, 2021
in ದೇಶ, ರಾಜಕೀಯ
0
ಬದಲಾದ ಭಾರತದಲ್ಲಿ ಬದಲಾಗಲಿದ್ದಾರೆಯೇ ಇಂದಿರಾರ ಮೊಮ್ಮಗ?
Share on WhatsAppShare on FacebookShare on Telegram

ಕಳೆದೊಂದು ವರ್ಷದಿಂದಲೂ‌ ವರುಣ್ ಗಾಂಧಿ ಬಿಜೆಪಿ ತೊರೆಯುವ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಲೇ ಇದೆ. ಕಳೆದ ಕೆಲವು ದಿನಗಳಿಂದ ಅವರು ತೆಗೆದುಕೊಳ್ಳುತ್ತಿರುವ ರಾಜಕೀಯ ನಿಲುವುಗಳು ಈ ವದಂತಿಗಳಿಗೆ ಮತ್ತಷ್ಡು ಪುಷ್ಟಿ ಒದಗಿಸುತ್ತಿವೆ.

ADVERTISEMENT

ಹಿಂದುತ್ವದ ಹರಿಕಾರನಾಗಿ ರಾಜಕೀಯ ಜೀವನ ಪ್ರಾರಂಭಿಸಿದವರು ವರುಣ್. 1999ರಲ್ಲಿ ಫಿಲಿಬಿತ್ ಕ್ಷೇತ್ರದಲ್ಲಿ ಅವರ ತಾಯಿ ಲೋಕಸಭಾ ಕಣಕ್ಕಿಳಿದಾಗ ಮೊದಲ ಬಾರಿಗೆ ವರುಣ್ ಪ್ರಚಾರಕ್ಕೆ ಹೋಗಿ ರಾಜಕೀಯ ಜೀವನಕ್ಕೆ ಅಧಿಕೃತವಾಗಿ ಪ್ರವೇಶಿಸಿದ್ದರು. 2004ರಲ್ಲಿ ಎನ್‌ಡಿಎ  ಭಾಗವಾಗಿದ್ದ ಬಿಜೆಪಿಯನ್ನು ಅಧಿಕೃತವಾಗಿ ಸೇರ್ಪಡೆಗೊಂಡ ಮೇನಕಾ ಗಾಂಧಿ ಜತೆಗೆ ಮಗ ವರುಣ್ ಗಾಂಧಿ ಕೂಡ ಬಿಜೆಪಿ ಭಾಗವಾದರು. ಆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ 40 ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ಕೈಗೊಂಡು ಬಿಜೆಪಿ ಫೈರ್ ಬ್ರ್ಯಾಂಡ್ ಎಂದೇ ಚಿರಪರಿಚಿತರಾದರು. 2009ರಲ್ಲಿ ಫಿಲಿಬಿತ್ ಕ್ಷೇತ್ರದಿಂದ ಸತತವಾಗಿ ಐದು ಬಾರಿ ಜಯಗಳಿಸಿದ್ದ ಮನೇಕಾ ಗಾಂಧಿಯ ಬದಲಾಗಿ ವರುಣ್ ಗಾಂಧಿಯನ್ನೇ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಇಳಿಸಲು ಬಿಜೆಪಿ ನಿರ್ಧರಿಸಿತು. ಅದರಂತೆ ಕಾಂಗ್ರೆಸ್ಸಿನ ವಿ.ಎಂ. ಸಿಂಗ್ ಅವರನ್ನು ಸೋಲಿಸಿ ವರುಣ್ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಅದೇ ಚುನಾವಣೆಯಲ್ಲಿ ಸುಲ್ತಾನಪುರ ಕ್ಷೇತ್ರದಿಂದ ಮನೇಕಾ ಸ್ಪರ್ಧಿಸಿ ಗೆದ್ದರು. ಆ ನಂತರ 2013ರಲ್ಲಿ ಬಿಜೆಪಿಯ ಕಿರಿಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕವಾದರು. 2014ರಲ್ಲಿ ತಾಯಿಯ ಕ್ಷೇತ್ರ ಸುಲ್ತಾನಪುರದಿಂದ ಮತ್ತು 2019ರಲ್ಲಿ ಮತ್ತೆ ಫಿಲಿಬಿತ್ ನಿಂದ ಸ್ಪರ್ಧಿಸಿ ಗೆಲುವು ಕಂಡರು.

2009ರ ವರುಣ್ ಗಾಂಧಿಗೂ 2019ರ ವರುಣ್ ಗಾಂಧಿಗೂ ಅಜಗಜಾಂತರವಿತ್ತು. 2009ರಲ್ಲಿ ಬುದ್ಧಿಜೀವಿಗಳಿಂದ, ಪ್ರಗತಿಪರರಿಂದ, ದೇಶದ ಪ್ರಜ್ಞಾವಂತ ರಾಜಕೀಯ ವಲಯದಿಂದ ವರುಣ್ ವ್ಯಾಪಕ ಟೀಕೆ ಎದುರಿಸಿದ್ದರು. ಆ ಮಟ್ಟಿಗಿನ‌ ದ್ವೇಷದ ಭಾಷಣ, ಸಮಾಜವನ್ನು ಒಡೆಯುವ, ಕೋಮು ಧ್ರುವೀಕರಣದ  ಮಾತುಗಳನ್ನಾಡಿದ್ದರು ಅವರು. ಫಿಲಿಬಿತ್‌ನ ದಾಲ್ ಚಂದ್ ಮೊಹಲ್ಲಾದಲ್ಲಿ ಅವರು ಮಾಡಿದ ಮುಸ್ಲಿಂ ದ್ವೇಷಿ ಭಾಷಣಕ್ಕಾಗಿ ಅವರ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ಅದೇ ವರುಣ್ ಗಾಂಧಿ 2019ರಲ್ಲಿ ಅದೇ ವಲಯದಿಂದ ಪ್ರಬುದ್ಧ ರಾಜಕಾರಣಿಯಾಗುತ್ತಿದ್ದಾರೆ ಎಂದು ಅನ್ನಿಸಿಕೊಂಡಿದ್ದರು.

ಇತ್ತೀಚೆಗೆ ಲಖಿಂಪುರ್ ಖೇರಿ ಘಟನೆಯನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದ ಅವರು ರೈತ ಪ್ರತಿಭಟನೆಯನ್ನು ಹಿಂದೂ- ಸಿಖ್ ನಡುವಿನ ಕದನವನ್ನಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಿಡಿ ಕಾರಿದ್ದರು . ಇದನ್ನು ಅನೈತಿಕ ಮತ್ತು ಅಪಾಯಕಾರಿ ಎಂದು ಕರೆದ ಅವರು “ರಾಷ್ಟ್ರೀಯ ಐಕ್ಯತೆಗಿಂತ ಒಂದು ಹೆಜ್ಜೆ ಮುಂದೆ ರಾಜಕೀಯ ಲಾಭಗಳನ್ನು ಇರಿಸಬೇಡಿ” ಎಂದು ಹೇಳಿದ್ದರು. ಅಲ್ಲದೆ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ರೈತರಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮಾತನಾಡಿದ ಭಾಷಣದ ತುಣಕೊಂದನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.  ಅದಕ್ಕೆ ‘ವಿಶಾಲ ಹೃದಯದ ನಾಯಕನಿಂದ ಜಾಣ್ಮೆಯ ಮಾತುಗಳು ‘ ಎಂಬ ಶೀರ್ಷಿಕೆಯನ್ನೂ ನೀಡಿ ಬಿಜೆಪಿಯ ಕೇಂದ್ರ ನಾಯಕರನ್ನು ಕೆಣಕಿದ್ದರು. ಇದಾಗಿ ಕೆಲವೇ ಘಂಟೆಗಳಲ್ಲಿ ವರುಣ್ ಮತ್ತವರ ತಾಯಿ ಮೇನಕಾ ಗಾಂಧಿಯವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಕೈ ಬಿಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅವರು”ಯಾವುದೇ ಹುದ್ದೆ ನನ್ನನ್ನು ಸತ್ಯ ಹೇಳದಿರುವಂತೆ ತಡೆಯಲು ಸಾಧ್ಯವಿಲ್ಲ” ಎಂದಿದ್ದರು.

Wise words from a big-hearted leader… pic.twitter.com/xlRtznjFAx

— Varun Gandhi (@varungandhi80) October 14, 2021

ಇದೀಗ “ಭಾರತಕ್ಕೆ 1947ರಲ್ಲಿ ಸಿಕ್ಕಿದ್ದು ಭಿಕ್ಷೆ, ನಿಜವಾದ ಸ್ವಾತಂತ್ರ್ಯ 2014ರಲ್ಲಿ ಸಿಕ್ಕಿತು” ಎಂದು ಹೇಳಿಕೆ ನೀಡಿರುವ ಕಂಗನಾ ಅವರನ್ನು ತೀವ್ರವಾಗಿ ಟೀಕಿಸಿರುವ ವರುಣ್ “ಹಲವು ಬಾರಿ ಮಹಾತ್ಮಗಾಂಧಿ ಅವರ ತ್ಯಾಗವನ್ನು ಅಪಮಾನಿಸಲಾಯಿತು, ಹಲವು ಬಾರಿ ಮಹಾತ್ಮರನ್ನು ಕೊಂದವರನ್ನು ಹೊಗಳಲಾಯಿತು. ಈಗ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನ ಮಾಡಲಾಗಿದೆ. ಹುತಾತ್ಮರಾದ ಮಂಗಲ ಪಾಂಡೆ, ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ನೇತಾಜಿ ಸೇರಿದಂತೆ ಅನೇಕರ ತ್ಯಾಗವನ್ನು ಕಡೆಗಣಿಸಲಾಗಿದೆ. ಇದು ಹುಚ್ಚುತನವೇ ಅಥವಾ ದೇಶದ್ರೋಹವೇ” ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಲಖಿಂಪುರ ಖೇರಿ ಘಟನೆಯನ್ನು ಖಂಡಿಸಿದಾಗ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಅವರನ್ನು ಕೈ ಬಿಟ್ಟಿದ್ದ ಬಿಜೆಪಿಯು ಈಗ ಅವರ ಮೇಲೆ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಕುತೂಹಲವಿದೆ. ಆದರೆ ಸೋಶಿಯಲ್ ಮೀಡಿಯಾದಾದ್ಯಂತ ಬಿಜೆಪಿ ಕಾರ್ಯಕರ್ತರು ವರುಣ್ ಹೇಳಿಕೆಯನ್ನು ಬೆಂಬಲಿಸುತ್ತಿದ್ದಾರೆ.‌ ಹತ್ತಿರದಲ್ಲೇ ಚುನಾವಣೆಯನ್ನು ಎದುರಿಸಲಿರುವ ಉತ್ತರ ಪ್ರದೇಶದಲ್ಲಿ ವರುಣ್ ಕೇವಲ ಒಬ್ಬ ಎಂಪಿಯಾಗಿ ಮಾತ್ರ ಗುರುತಿಸಿಕೊಳ್ಳುತ್ತಿಲ್ಲ ಬದಲಾಗಿ ಅವರೊಬ್ಬ ತಳಮಟ್ಟದ ನಾಯಕ. ಹಾಗಾಗಿ ಅಲ್ಲಿನ ಚುನಾವಣೆಯಲ್ಲಿ ಅವರ ಮಾತು, ನಡೆ ನುಡಿಗಳು ಖಂಡಿತಾ ಪ್ರಭಾವ ಬೀರಲಿದೆ ಎನ್ನುವುದು ಬಿಜೆಪಿ ನಾಯಕರಿಗೂ ಗೊತ್ತು. ಹಾಗಾಗಿಯೇ ವರುಣ್ ಗಾಂಧಿ ಹೇಳಿಕೆ ರಾಜಕೀಯವಾಗಿ ಈ ಮಟ್ಟಕ್ಕೆ ಗಮನ ಸೆಳೆದಿರುವುದು.

कभी महात्मा गांधी जी के त्याग और तपस्या का अपमान, कभी उनके हत्यारे का सम्मान, और अब शहीद मंगल पाण्डेय से लेकर रानी लक्ष्मीबाई, भगत सिंह, चंद्रशेखर आज़ाद, नेताजी सुभाष चंद्र बोस और लाखों स्वतंत्रता सेनानियों की कुर्बानियों का तिरस्कार।

इस सोच को मैं पागलपन कहूँ या फिर देशद्रोह? pic.twitter.com/Gxb3xXMi2Z

— Varun Gandhi (@varungandhi80) November 11, 2021

ಬಿಜೆಪಿಯಲ್ಲಿ ನೆಹರು-ಗಾಂಧಿ ಪರಿವಾರದವರನ್ನು ಒಂದು ಹಂತಕ್ಕೆ ಮೀರಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುವುದಕ್ಕೆ ವರುಣ್ ಸ್ಪಷ್ಟ ಮತ್ತು ತಾಜಾ ಉದಾಹರಣೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ವದಂತಿಯನ್ನು ವರುಣ್ ಸದ್ಯಕ್ಕೆ ಸ್ಪಷ್ಟವಾಗಿ ಅಲ್ಲಗೆಳೆದಿದ್ದಾರೆ. ಆದರೆ ಬದಲಾದ ಭಾರತದಲ್ಲಿ ಅವರು ಬದಲಾಗಲಾರರು ಎನ್ನುವುದಕ್ಕೆ ಮಾತ್ರ ಯಾವ ಖಾತರಿಯೂ ಇಲ್ಲ.

Tags: BJPCongress PartyCovid 19lakhimpurkherimenakagandhiUttar Pradeshvarungandhiಕರೋನಾಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ಉತ್ತರ ಪ್ರದೇಶದಲ್ಲಿ ಮತ್ತೊಂದು ಕಸ್ಟಡಿ ಸಾವು: ಹೊಸ ಭಾರತದಲ್ಲಿ ನ್ಯಾಯ ನಿರೀಕ್ಷಿಸುವುದೂ ತಪ್ಪೇ?

Next Post

ಮಣಿಪುರದಲ್ಲಿ ಸೇನಾ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದಕರ ದಾಳಿ; ಕಮಾಂಡೆಂಟ್‌ ಸೇರಿ ಆರು ಜನರ ಸಾವು

Related Posts

ಸಾಮಾಜಿಕ ಜಾಲತಾಣದಲ್ಲಿ  ಜಮಾತೆ ಇಸ್ಲಾಮಿ ಮುಖ್ಯಸ್ಥರ ಪೋಸ್ಟ್: ಬಾಂಗ್ಲಾದೇಶದಲ್ಲಿ ಆಕ್ರೋಶ! ಆಗಿದ್ದಾದರೂ ಏನು ?
ರಾಜಕೀಯ

ಸಾಮಾಜಿಕ ಜಾಲತಾಣದಲ್ಲಿ  ಜಮಾತೆ ಇಸ್ಲಾಮಿ ಮುಖ್ಯಸ್ಥರ ಪೋಸ್ಟ್: ಬಾಂಗ್ಲಾದೇಶದಲ್ಲಿ ಆಕ್ರೋಶ! ಆಗಿದ್ದಾದರೂ ಏನು ?

by ಪ್ರತಿಧ್ವನಿ
February 1, 2026
0

ಜಮಾತೆ-ಇ-ಇಸ್ಲಾಮಿ (ಜೆಇಐ) ಶನಿವಾರ  ಅಮೀರ್ ಡಾ. ಶಫೀಕರ್ ರೆಹಮಾನ್ ಅವರ ಅಧಿಕೃತ 'ಎಕ್ಸ್' ಹ್ಯಾಂಡಲ್‌ನಲ್ಲಿ ಸಾರ್ವಜನಿಕ ಜೀವನ ಮತ್ತು ನಾಯಕತ್ವದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು...

Read moreDetails
ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

February 1, 2026
Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ

Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ

February 1, 2026
ಕೇಂದ್ರದಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

ಕೇಂದ್ರದಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

February 1, 2026
400 ಕೋಟಿ ದರೋಡೆ ಕೇಸ್‌: ದಿಢೀರ್‌ ಪೊಲೀಸರಿಗೆ ಶರಣಾದ ವ್ಯಕ್ತಿ ಯಾರು..?

400 ಕೋಟಿ ದರೋಡೆ ಕೇಸ್‌: ದಿಢೀರ್‌ ಪೊಲೀಸರಿಗೆ ಶರಣಾದ ವ್ಯಕ್ತಿ ಯಾರು..?

February 1, 2026
Next Post
ಮಣಿಪುರದಲ್ಲಿ ಸೇನಾ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದಕರ ದಾಳಿ; ಕಮಾಂಡೆಂಟ್‌ ಸೇರಿ ಆರು ಜನರ ಸಾವು

ಮಣಿಪುರದಲ್ಲಿ ಸೇನಾ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದಕರ ದಾಳಿ; ಕಮಾಂಡೆಂಟ್‌ ಸೇರಿ ಆರು ಜನರ ಸಾವು

Please login to join discussion

Recent News

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?
Top Story

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

by ಪ್ರತಿಧ್ವನಿ
February 1, 2026
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಹಾಗೂ ಅಳಿಯನ ಬಗ್ಗೆ ಇಲ್ಲಿದೆ ಯಾರಿಗೂ ತಿಳಿಯದ ಈ ವಿಷಯ!
Top Story

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಹಾಗೂ ಅಳಿಯನ ಬಗ್ಗೆ ಇಲ್ಲಿದೆ ಯಾರಿಗೂ ತಿಳಿಯದ ಈ ವಿಷಯ!

by ಪ್ರತಿಧ್ವನಿ
February 1, 2026
ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ
Top Story

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

by ಪ್ರತಿಧ್ವನಿ
February 1, 2026
Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ
Top Story

Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ

by ಪ್ರತಿಧ್ವನಿ
February 1, 2026
ಕೇಂದ್ರದಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ
Top Story

ಕೇಂದ್ರದಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

by ಪ್ರತಿಧ್ವನಿ
February 1, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

February 1, 2026
ಸಾಮಾಜಿಕ ಜಾಲತಾಣದಲ್ಲಿ  ಜಮಾತೆ ಇಸ್ಲಾಮಿ ಮುಖ್ಯಸ್ಥರ ಪೋಸ್ಟ್: ಬಾಂಗ್ಲಾದೇಶದಲ್ಲಿ ಆಕ್ರೋಶ! ಆಗಿದ್ದಾದರೂ ಏನು ?

ಸಾಮಾಜಿಕ ಜಾಲತಾಣದಲ್ಲಿ  ಜಮಾತೆ ಇಸ್ಲಾಮಿ ಮುಖ್ಯಸ್ಥರ ಪೋಸ್ಟ್: ಬಾಂಗ್ಲಾದೇಶದಲ್ಲಿ ಆಕ್ರೋಶ! ಆಗಿದ್ದಾದರೂ ಏನು ?

February 1, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!