ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಮುಟ್ಟಾವುವಂತದ್ದು ಸಹಜ..ಈ ಮುಟ್ಟಿನ ಸಂದರ್ಭದಲ್ಲಿ ಹೊಟ್ಟೆ ನೋವೂ,ಬೆನ್ನು ಎಳೆತಾ,ವಾಕರಿಕೆ,ವಾಂತಿ, ತಲೆ ನೋವೂ ಇರುವುದು ಸಾಮಸ್ಯ.. ಆದ್ರೇ ಇತ್ತಿಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಂದ ಹೆಚ್ಚಾಗಿ ಕೇಳ್ತಾ ಇರುವಂತ ಒಂದು ಕಂಪ್ಲೇಂಟ್ ಅಂದ್ರೆ ರೆಗ್ಯುಲರ್ ಆಗಿ ಪಿರಿಯಡ್ಸ್ ಆಗ್ತಾ ಇಲ್ಲ.. ಪ್ರತಿ ತಿಂಗಳು ಮುಟ್ಟು ಲೇಟ್ ಆಗಿ ಆಗುತ್ತದೆ ಅಂತ.. ಇದಕ್ಕೆ ಕಾರಣ ಪ್ರಮುಖ ಕಾರಣ ಅಂದ್ರೆ ನಮ್ಮ ಲೈಫ್ ಸ್ಟೈಲ್, ಒತ್ತಡ, ಹಾರ್ಮೋನಲ್ ಇಂಬ್ಯಾಲೆನ್ಸ್, ಕೆಲವು ಹೆಣ್ಣು ಮಕ್ಕಳು ಗರ್ಬಾ ನಿರೋದಕ ಮಾತ್ರೆಗಳನ್ನ ತಗೊಳ್ತಾರೆ, ಇದೆಲ್ಲದರ ಜೊತೆಗೆ ಮತ್ತೊಂದು ಪ್ರಮುಖ ಕಾರಣ ಅಂದ್ರೆ ಆಹಾರ ಪದ್ಧತಿ,ಕಲವರು ಊಟ ತಿಂಡಿಯ ಬಗ್ಗೆ ಕಾಳಜಿ ಇರುವುದಿಲ್ಲಾ ಸರಿಯಾದ ಸಮಯಕ್ಕೆ ಆಹಾರ ಸೇವಿಸದೆ ಇರುವುದು.. ಇನ್ನೂ ಕೆಲವರು ಸಿಕ್ಕಿದ್ದೆಲ್ಲಾ ತಿನ್ನುವುದು..ಇದೆರಡು ಕೂಡ ಮುಟ್ಟು ಸರಿಯಾಗಿ ಆಗದೆ ಇರುವುದಕ್ಕೆ ಮುಖ್ಯ ರೀಸನ್ಗಳು ಅಂದ್ರೆ ತಪ್ಪಾಗಲ್ಲ..ಹಾಗದ್ರೆ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಪೀರಿಯೇಡ್ಸ್ ಆಗ್ಬೇಕು ಅಂದ್ರೆ ಈ ಪದಾರ್ಥಗಳನ್ನು ಸೇವಿಸಿ..
![](https://pratidhvani.com/wp-content/uploads/2024/06/IMG_8028.jpeg)
ಶುಂಠಿ
ಶುಂಠಿಯು ಶಕ್ತಿಯುತವಾದ ಮೂಲವಾಗಿದ್ದು, ಋತುಚಕ್ರವನ್ನು ನಿಯಂತ್ರಿಸುವಲ್ಲಿ ಹೆಚ್ಚು ಶಿಫಾರಸು ಮಾಡಲಾಗಿದೆ. ಅನಿಯಮಿತ ಚಕ್ರವನ್ನು ಸರಿಪಡಿಸಲು ಇದು ಪರಿಣಾಮಕಾರಿ ಪರಿಹಾರವಾಗಿದೆ. ಶುಂಠಿಯ ಉರಿಯೂತದ ಪರಿಣಾಮಗಳು ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಮತ್ತು ಅವಧಿಯ ಲಕ್ಷಣಗಳನ್ನು ಸುಧಾರಿಸಬಹುದು.ವಾರಕ್ಕೆ ಎರಡು ಅಥವ ಮೂರು ಬಾರಿ ಶುಂಠಿ ಕಷಯಾವನ್ನು ಸೇವಿಸುವುದು ಉತ್ತಮ.
![](https://pratidhvani.com/wp-content/uploads/2024/06/IMG_8029.jpeg)
ಬೀಟ್ರೂಟ್
ಬೀಟ್ರೂಟ್ ಸೇವನೆಯು ಇರ್ರೆಗ್ಯೂಲರ್ ಪೀರಿಯೆಡ್ಸ್ನ ಸಮಸ್ಯೆಗಳನ್ನು ಮತ್ತು ಅವುಗಳ ರೋಗಲಕ್ಷಣಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಬೀಟ್ರೂಟ್ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲ ಮತ್ತು ಕಬ್ಬಿಣವನ್ನು ಹೊಂದಿರುತ್ತದೆ ಇದರಿಂದ ತಿಂಗಳಲ್ಲಿ ಸರಿಯಾದ ಸಮಯಕ್ಕೆ ಮುಟ್ಟಾಗುತ್ತದೆ..ಹಾಗೂ ದೇಹದಲ್ಲಿ ರಕ್ತ ಕೂಡಾ ಹೆಚ್ಚಾಗುತ್ತದೆ..
![](https://pratidhvani.com/wp-content/uploads/2024/06/IMG_8030.jpeg)
ಡಾರ್ಕ್ ಚಾಕೊಲೇಟ್
ಇದರಲ್ಲಿ ಕಬ್ಬಿಣ ಮತ್ತು ಮೆಗ್ನೀಸಿಯಮ್ನ ಅಂಶ ಹೆಚ್ಚಿದೆ..ಹಾಗೂ ಸಾಕಷ್ಟು ಕಬ್ಬಿಣವನ್ನು ತಿನ್ನುವುದು ಕಬ್ಬಿಣದ ಕೊರತೆಯನ್ನು ತಡೆಯಲು ಸಹಾಯ ಮಾಡುತ್ತದೆ …ಇದರಿಂದಾಗಿ ಮುಟ್ಟು ಇಡವಾಗುವುದನ್ನು ತಡೆಯುತ್ತದೆ..ಉತ್ಕರ್ಷಣ ನಿರೋಧಕಗಳು ಹೆಚ್ಚಿರುವುದರಿಂದ ಇದು ಹಾರ್ಮೋನುಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
![](https://pratidhvani.com/wp-content/uploads/2024/06/IMG_8031.jpeg)
ಮೀನು
ಇದೆಲ್ಲದರ ಜೊತೆಗೆ ಸೀ ಫುಡ್ ನ ಸೇವಿಸಬೇಕು ಅದರಲ್ಲು ಫಿಶ್ ತಿನ್ನುವುದರಿಂದ ಒಮೆಗ-೩ ಫ್ಯಾಟಿ ಆಸಿಡ್ ನಮ್ಮ ದೇಹಕ್ಕೆ ಲಭ್ಯವಾಗುತ್ತದೆ..ಇದರಲ್ಲಿ ಪ್ರೋಟಿನ್ ಹೆಚ್ಚಿರುವುದು ಕೂಡಾ ನಮ್ಮ ಆರೋಗ್ಯಕ್ಕೆ ಉತ್ತಮ..
![](https://pratidhvani.com/wp-content/uploads/2024/06/IMG_8032.jpeg)
ಇದೆಲ್ಲದರ ಜೊತೆಗೆ ನಿಮ್ಮ ಆಹಾರದಲ್ಲಿ ಅರಿಶಿನವನ್ನು ಬಳಸಿ, ಅಜ್ವಯ್ನ್ ಕೂಡಾ ಉತ್ತಮ,ಪೈನಾಪಲ್ ತಿನ್ನುವುದು ಒಳ್ಳೆಯದು,ಹಾಗೂ ಪಪ್ಪಾಯ ಸೇವಿಸಿ.. ಇವುಗಳಿಂದ ನಿಮಗೆ ತಿಂಗಳಿಗೆ ಸರಿಯಾಗಿ ಮುಟ್ಟಾಗುತ್ತದೆ..