ನಾಯಕ ಕೆಎಲ್ ರಾಹುಲ್ ಶತಕದ ನೆರವಿನಿಂದ ಲಕ್ನೋ ಸೂಪರ್ ಗೈಂಟ್ಸ್ ತಂಡ 40 ರನ್ ಗಳಿಂದ ಜಯಭೇರಿ ಬಾರಿಸಿದರೆ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿ ಸತತ 6 ಸೋಲಿನ ದಾಖಲೆ ಬರೆದಿದೆ.
ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಗೈಂಟ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿತು. 200 ರನ್ ಗಳ ಗುರಿ ಬೆಂಬತ್ತಿದ ಮುಂಬೈ ಇಂಡಿಯನ್ಸ್ ೨೦ ಓವರ್ ಗಳಲ್ಲಿ 9 ವಿಕೆಟ್ ಗೆ 181 ರನ್ ಗಳಿಸಲಷ್ಟೇ ಶಕ್ತವಾಯಿತು.
ಬೃಹತ್ ಮೊತ್ತ ಬೆಂಬತ್ತಬೇಕಾದ ಮುಂಬೈಗೆ ಆವಿಶ್ ಖಾನ್ ಆಘಾತ ನೀಡಿದರು. ಆರಂಭದಲ್ಲೇ ಸತತ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ ಮುಂಬೈ ಪರ ಮಧ್ಯಮ ಕ್ರಮಾಂಕದಲ್ಲಿ ಬ್ರೇವಿಸ್ (31), ಸೂರ್ಯಕುಮಾರ್ ಯಾದವ್ (37), ತಿಲಕ್ ವರ್ಮಾ (2) ಮತ್ತು ಕೀರನ್ ಪೊಲಾರ್ಡ್ (25) ಹೋರಾಟ ನಡೆಸಿದರೂ ರನ್ ಸರಾಸರಿ ತಲುಪಲು ವಿಫಲರಾದರು.