ಕಳೇದ ತಿಂಗಳು ಲಾಂಚ್ ಆಗಿರುವ ಐಫೋನ್ 16 (Iphone 16) ಸೀರಿಸ್‌ಗೆ ಭಾರತ ಸೇರಿದಂತೆ ಎಲ್ಲೆಡೆ ಭಾರಿ ಬೇಡಿಕೆ ಇದೆ. ಜನ ಸರದಿ ಸಾಲಿನಲ್ಲಿ ನಿಂತು ಐಫೋನ್ 16 ಖರೀದಿಸಲು ಮುಗಿಬೀಳುತ್ತಿದ್ದಾರೆ. ಆದರೆ ಇಂಡೋನೇಷಿಯಾದಲ್ಲಿ (Indonesia) ಐಫೋನ್ 15 ಬ್ಯಾನ್ ಬಳಕೆ ಮಾಡಲಾಗಿದೆ.

ಇಂಡೋನೇಷಿಯಾ ಸರ್ಕಾರದ ಈ ನಿರ್ಧಾರ ವಿದೇಶಿ ಪ್ರವಾಸಿಗರಿಗೂ ಕೂಡ ಸಂಕಷ್ಟ ತಂದಿದೆ. ಎಲ್ಲಾ ದೇಶಗಳಲ್ಲಿ ಆ್ಯಪಲ್ ಫೋನ್ 16 ಬಳಕೆ ಹೆಚ್ಚಾದರೆ, ಇತ್ತ ಇಂಡೋನೇಷಿಯಾದಲ್ಲಿ ಮಾತ್ರ ಸಂಪೂರ್ಣ ಬ್ಯಾನ್ ಮಾಡಲಾಗಿದೆ.
ಇದಕ್ಕೆ ಕಾರಣವಿದೆ. ಐಫೋನ್ 16 ಫೋನ್‌ಗೆ ಇಂಡೋನೇಷಿಯಾ ಸರ್ಕಾರ ಇನ್ನೂ ಕೂಡ ಐಎಂಇಐ (IMEI) ಪ್ರಮಾಣ ಪತ್ರ ನೀಡಿಲ್ಲ. ಇನ್ನು ಟಿಕೆಡಿಎನ್ (TKDN) ಪ್ರಮಾಣ ಪತ್ರವೂ ಕೂಡ ಪೂರ್ಣಗೊಂಡಿಲ್ಲ. ಹೀಗಾಗಿ ಮಾರಾಟ ಮಾತ್ರವಲ್ಲ, ಬಳಕೆ ಮಾಡುವುದು ಅಕ್ರಮ ಎಂದು ಹೇಳಿದೆ.