• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಇಂಗ್ಲಿಷ್‌ ಪೆನ್‌ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಸಂದರ್ಶನ|  “ಅನುವಾದ ಮಾಡುತ್ತಾ ನನ್ನ ಭಾಷೆಗೆ ನಾನು ಹತ್ತಿರವಾಗುತ್ತಿದ್ದೇನೆ”

ಪ್ರತಿಧ್ವನಿ by ಪ್ರತಿಧ್ವನಿ
July 29, 2024
in Top Story, ಇತರೆ / Others, ಕರ್ನಾಟಕ
0
ಇಂಗ್ಲಿಷ್‌ ಪೆನ್‌ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಸಂದರ್ಶನ|  “ಅನುವಾದ ಮಾಡುತ್ತಾ ನನ್ನ ಭಾಷೆಗೆ ನಾನು ಹತ್ತಿರವಾಗುತ್ತಿದ್ದೇನೆ”
Share on WhatsAppShare on FacebookShare on Telegram

ಇದೇ ಮೊದಲ ಬಾರಿಗೆ ಕನ್ನಡದಿಂದ ಅನುವಾದಗೊಂಡ ಕೃತಿಯೊಂದಕ್ಕೆ ‘ಇಂಗ್ಲಿಷ್‌ ಪೆನ್‌’ ಅನುವಾದ ಪ್ರಶಸ್ತಿ ಲಭಿಸಿದೆ. ಬರಹಗಾರರ ಸ್ವಾತಂತ್ಯ್ರವನ್ನು ಕಾಯುವ, ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಇಂಗ್ಲೆಂಡಿನ ಪ್ರಮುಖ ಸಂಸ್ಥೆ. ಈ ಸಂಸ್ಥೆ ನೀಡುವ 2024ರ ಅನುವಾದ ಪ್ರಶಸ್ತಿ, ಪತ್ರಕರ್ತೆ, ಲೇಖಕಿ, ಅನುವಾದಕಿ ದೀಪಾ ಭಾಸ್ತಿಯವರು ಅನುವಾದಿಸಿದ ಭಾನು ಮುಷ್ತಾಕ್ ಅವರ ಕತೆಗಳಿಗೆ ಬಂದಿದೆ.

ADVERTISEMENT

ಪತ್ರಕರ್ತೆಯಾಗಿ, ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿದವರು. ನಂತರ ಪೂರ್ಣಪ್ರಮಾಣದ ಬರಹಗಾರ್ತಿಯಾಗಿ ಕಾರವಾನ್‌, ಟೈಮ್ಸ್‌ ಆಫ್‌ ಇಂಡಿಯಾ, ಇಂಡಿಯನ್‌ ಎಕ್ಸ್‌ಪ್ರೆಸ್‌, ಸ್ಕ್ರಾಲ್, ಓಪನ್‌, ಹಿಮಾಲ್‌ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಬರೆಯಲು ಆರಂಭಿಸಿದವರು. ಅಂತಾರಾಷ್ಟ್ರೀಯ ಪತ್ರಿಕೆಗಳಾದ ಆರ್ಟ್ ರಿವ್ಯೂ, ದಿ ಗಾರ್ಡಿಯನ್‌, ಪ್ಯಾರಿಸ್‌ ರಿವ್ಯೂಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ.

ಸಾಹಿತ್ಯದ ಜೊತೆಗೆ ಕಲೆ, ಆಹಾರದ ಬಗ್ಗೆ ಅತೀವ ಆಸಕ್ತಿ ಹೊಂದಿರುವ ದೀಪಾ, ಕಲಾ ವಿಮರ್ಶೆಗಳನ್ನೂಪ್ರಕಟಿಸಿದ್ದಾರೆ. ಆಹಾರದ ಸಾಂಸ್ಕೃತಿಕ, ಐತಿಹಾಸಿಕ, ರಾಜಕೀಯ ಆಯಾಮಗಳನ್ನು ಕಟ್ಟಿಕೊಡುವ ಮಹತ್ವಕಾಂಕ್ಷೆಯೊಂದಿಗೆ ದಿ ಫೋರೇಜರ್ ಎಂಬ ಆನ್‌ಲೈನ್‌ ಪತ್ರಿಕೆಯನ್ನೂ ಆರಂಭಿಸಿದ್ದರು.

ಕಳೆದ ಕೆಲವು ವರ್ಷಗಳಿಂದ ಅನುವಾದದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ದೀಪಾ, ಕನ್ನಡದ ಎರಡು ಕೃತಿಗಳನ್ನು ಈಗಾಗಲೇ ಅನುವಾದಿಸಿ ಗಮನ ಸೆಳೆದಿದ್ದಾರೆ. ಶಿವರಾಮ ಕಾರಂತರ ‘ ಅದೇ ಊರು, ಅದೇ ಮರ’ ಹಾಗೂ ಕೊಡಗಿ ಗೌರವಮ್ಮನವರ ಸಣ್ಣ ಕತೆಗಳನ್ನು ಇಂಗ್ಲಿಷ್ ಸಾಹಿತ್ಯಲೋಕಕ್ಕೆ ಪರಿಚಯಿಸಿದ್ದಾರೆ. ಈಗ ಈ ಪಟ್ಟಿಗೆ ಬಾನುಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಸೇರಿದೆ. ಇಂಗ್ಲಿಷ್‌ ಪೆನ್ ಪ್ರಶಸ್ತಿಗೆ ಪಾತ್ರವಾಗಿರುವ ಈ ಅನುವಾದ ಸದ್ಯದಲ್ಲೇ ಕೃತಿಯ ರೂಪದಲ್ಲಿ ಹೊರ ಬರಲಿದೆ. ಈ ಸಂದರ್ಭದಲ್ಲಿ ದೀಪಾ ಅವರೊಂದಿಗೆ ಪತ್ರಕರ್ತ ಕುಮಾರ್ ನಡೆಸಿದ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

* ವೃತ್ತಿಯಲ್ಲಿ ಪತ್ರಕರ್ತರಾಗಿದ್ದ ಕಾರಣಕ್ಕೆ ಅಕ್ಷರದೊಂದಿಗೆ ಒಡನಾಟ ಸಹಜ. ಆದರೆ ಪತ್ರಿಕೋದ್ಯಮ ತೊರೆದು ಬರವಣಿಗೆಯನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿರಿ.  ಇಂಗ್ಲಿಷ್‌ ಬರವಣಿಗೆ ಅನುವಾದದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೀರಿ. ಈ ಸ್ವತಂತ್ರ ಬರಹಗಾರ್ತಿಯಾಗುವ ಪಯಣದ ಆರಂಭ ಹೇಗಾಯ್ತು?

ನಾನು ಪತ್ರಿಕೋದ್ಯಮವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡ ಸ್ವಲ್ಪ ಸಮಯದಲ್ಲೇ ದಿನನಿತ್ಯದ ವರದಿ ಮಾಡುವುದು ನನಗೆ ಹೊಂದುವ ಕೆಲಸವಲ್ಲ ಎಂದು ಅರಿವಾಯಿತು. ಬರವಣಿಗೆಯನ್ನೇ ಮುಂದುವರಿಸಬೇಕೆಂದಿದ್ದರೂ ಅದೊಂದು ವೃತ್ತಿಯಾಗಬಹುದೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹಲವಾರು ವರ್ಷಗಳಾದವು. ನಾನು ಫ್ರೀಲಾನ್ಸ್‌  ಮಾಡುವುದನ್ನು ಪ್ರಾರಂಭಿಸಿದಾಗ ಅದಿನ್ನೂ ಹೊಸ ಫೀಲ್ಡ್ ಆಗಿತ್ತು. ಈಗಿರುವಷ್ಟು ಅರಿವು, ಅವಕಾಶಗಳು ಆಗ ಇರಲಿಲ್ಲ. ಮೊದಮೊದಲು ಕೈಗೆ ಸಿಕ್ಕಿದ ಎಲ್ಲಾ ರೀತಿಯ ಕಮರ್ಷಿಯಲ್ ಬರವಣಿಗೆ, ಎಡಿಟಿಂಗ್ ಕೆಲಸಗಳು, ಕಮರ್ಷಿಯಲ್ ಅನುವಾದ, ಹೀಗೆ ಮಾಡಬೇಕಾಗಿ ಬಂತು. ಹೆಚ್ಚು ಕಮ್ಮಿ ಒಂದು ದಶಕ ಫ್ರೀಲಾನ್ಸ್‌ ಮಾಡಿದ ನಂತರ ಸ್ವಲ್ಪಮಟ್ಟಿನ ಆರ್ಥಿಕ ಭದ್ರತೆ ಇದೆ. ಅದೂ ನಾನು ಹೊರ ದೇಶದ ಪತ್ರಿಕೆಗಳಿಗೆ ಬರೆಯುವ ಕಾರಣಕ್ಕೆ. ನಮ್ಮ ದೇಶದಲ್ಲಿ ಕೇವಲ ಫ್ರೀಲಾನ್ಸ್‌ ಬರವಣಿಗೆಯನ್ನು ನಂಬಿ ಬದುಕುವುದು ತುಂಬಾ, ತುಂಬಾ ಕಷ್ಟ.

* ಕನ್ನಡ ಸಾಹಿತ್ಯದ ಒಡನಾಟದ ಬಗ್ಗೆ ಹೇಳಿ.. ಕನ್ನಡದ ನಿಮ್ಮ ನೆಚ್ಚಿನ ಲೇಖಕರು ಯಾರು? ಯಾಕೆ?

ನಾನು ಇಂಗ್ಲಿಷ್ ನಲ್ಲಿ ಓದಿದಷ್ಟು ಕನ್ನಡದಲ್ಲಿ ಓದುವುದಿಲ್ಲ ಎಂಬುದು ನನಗೆ ಬಹಳ ಮುಜುಗರದ ವಿಷಯ. Macaulayism ನಿಂದಾಗಿ ಆಂಗ್ಲ ಮಾಧ್ಯಮದಲ್ಲಿ ಓದಿರುವ ನನ್ನಂತವರ ಹಣೆ ಬರಹ ಇದು. ಆದರೆ, ನಮ್ಮ ಮನೆಯಲ್ಲಿ, ತಂದೆ-ತಾಯಿಯ ಕುಟುಂಬದಲ್ಲಿ ಎಲ್ಲರೂ ಓದುವವರೇ, ನನ್ನ ಅಜ್ಜಿ ಅದ್ಭುತ ಕಥೆಗಾರ್ತಿ. ನನ್ನ ಅಜ್ಜನ ಸಂಪೂರ್ಣ ಗ್ರಂಥಾಲಯ ನನಗೆ ಸಿಕ್ಕಿತ್ತು. ಹಾಗೆ ಚಿಕ್ಕವಳಾಗಿದ್ದಾಗ ನಾನು ಕನ್ನಡದಲ್ಲಿ ಕೆಲವೊಂದು ಪುಸ್ತಕಗಳನ್ನು ಮಾತ್ರ ಓದಿದ್ದರೂ ನನ್ನ ಸುತ್ತಲೂ ಸಾಹಿತ್ಯ, ಕನ್ನಡ ಸಾಹಿತ್ಯದ ವಾತಾವರಣ ಪ್ರಬಲವಾಗಿತ್ತು. ಅಮ್ಮ ಕನ್ನಡ ಕಾದಂಬರಿಗಳನ್ನು ಓದಿ ಅವುಗಳ ಕಥೆಗಳನ್ನು ಹೇಳುತ್ತಿದ್ದಳು. ಹೀಗೆ ನಾನು ಕುವೆಂಪು, ಕಾರಂತ ಮುಂತಾದ ಲೇಖಕರ ಪುಸ್ತಕಗಳನ್ನು ಓದುವ ಎಷ್ಟೋ ಮೊದಲೇ ಆ ಕಥೆಗಳನ್ನು ಕೇಳಿದ್ದೆ.

ಕೆ. ವಿ. ಅಯ್ಯರ್ ಅವರ ಶಾಂತಲಾ ನಾನು ಓದಿದ ಮೊದಲ ಕನ್ನಡ ಕಾದಂಬರಿ, ಆದ್ದರಿಂದ ಆ ಪುಸ್ತಕಕ್ಕೆ ನನ್ನ ಗ್ರಂಥಾಲಯದಲ್ಲಿ ಒಂದು ವಿಶೇಷ ಸ್ಥಾನವಿದೆ. ದೇವನೂರ ಮಹಾದೇವರವರ ಕುಸುಮಬಾಲೆಯನ್ನು ಮೊದಲು ಓದಿದಾಗ I was stunned, ಹೀಗೂ ಭಾಷೆಯನ್ನು ಬಳಸಬಹುದೇ ಎಂದು.

ಸದ್ಯಕ್ಕೆ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಪುನಃ ಓದುತ್ತಿದ್ದೇನೆ. ಭಾಷೆಯ, ಸಾಹಿತ್ಯದ ಸ್ಪೂರ್ತಿಯನ್ನು ಒಂದಿಷ್ಟು ರಿಫ್ರೆಶ್ ಮಾಡಿಕೊಳ್ಳಬೇಕು ಎಂದೆನಿಸಿದಾಗ ಕುವೆಂಪುರವರ ಒಂದೆರಡು ಸಾಲುಗಳನ್ನು ಓದಿದರೆ ಸಾಕು!

* ಕನ್ನಡದ ಕೃತಿಯೊಂದನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಕ್ಕೆ ಕನ್ನಡಕ್ಕೆ ಮೊದಲ ಅಂತಾರಾಷ್ಟ್ರೀಯ ಇಂಗ್ಲಿಷ್‌ ಪೆನ್ ಅನುವಾದ ಪ್ರಶಸ್ತಿ ಲಭಿಸಿದೆ. ಅಭಿನಂದನೆಗಳು. ಏನಿದು ಇಂಗ್ಲಿಷ್‌ ಪೆನ್‌ ಅನುವಾದ ಪ್ರಶಸ್ತಿ ಸ್ವಲ್ಪ ತಿಳಿಸಿ.

ಧನ್ಯವಾದಗಳು. ಇಂಗ್ಲಿಷ್ ಪೆನ್ ಎಂಬುದು ಒಂದು ಅಂತರರಾಷ್ಟ್ರೀಯ ಮಾನವ ಹಕ್ಕುಗಳನ್ನು ರಕ್ಷಿಸಲಿರುವ ಸಂಸ್ಥೆ. ಅವರ ಮುಖ್ಯ ಧ್ಯೇಯ ಪ್ರಪಂಚದ ಸರ್ವಾಧಿಕಾರಿ ಆಡಳಿತದಡಿಯಲ್ಲಿರುವ ದೇಶಗಳ ಶೋಷಣೆ, ಸೆನ್ಸಾರ್ಶಿಪ್ ಇತ್ಯಾದಿಗೆ ಗುರಿಯಾದ ಲೇಖಕರ ಪರವಾಗಿ ನಿಲ್ಲುವುದು. ಅವರು ಶಿಕ್ಷೆಗೆ ಒಳಪಟ್ಟಲ್ಲಿ ಅಂತಹ ಲೇಖಕರ ಬಿಡುಗಡೆಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಾಯಿಸುವುದು, ಹೀಗೆ. ಓದಲು ಸ್ವಾತಂತ್ರವಿರಬೇಕು, ಬರೆಯಲು ಸ್ವಾತಂತ್ರವಿರಬೇಕು ಎಂಬುದು ಅವರ ಸ್ಲೋಗನ್.

ಇಂಗ್ಲಿಷ್ ಪೆನ್ ನ ಒಂದು ದೊಡ್ಡ ಅಂಗ ಅವರ ಅನುವಾದಕ್ಕೆ ಸಂಬಂಧ ಪಟ್ಟ ಕಾರ್ಯಕ್ರಮಗಳು. ಹಲವು ರೀತಿಯಲ್ಲಿ ಅವರು ಅನುವಾದಕರಿಗೆ, ಅನುವಾದಿಸಿದ ಪುಸ್ತಕಗಳಿಗೆ ಅವಾರ್ಡ್, ಗ್ರಾಂಟ್, ಇತ್ಯಾದಿಯ ಮೂಲಕ ನೆರವು ನೀಡುತ್ತಾರೆ. 2022ರಲ್ಲಿ ಪೆನ್‌ ಪ್ರೆಸೆಂಟ್ಸ್ ಎಂಬ ಕಾರ್ಯಕ್ರಮದಡಿ ನನಗೆ ಬಾನು ಮುಷ್ತಾಕ್ ಅವರ ಕಥೆಗಳ ಒಂದು ಸಾಂಪಲ್ ಅನುವಾದಿಸಲು ಒಂದು ಸಣ್ಣ ಗ್ರಾಂಟ್ ಸಿಕ್ಕಿತ್ತು. 12 ಅನುವಾದದ ಸಾಂಪಲ್ ಗಳ ಶಾರ್ಟ್ಲಿಸ್ಟ್ ನಲ್ಲಿ ನನ್ನ ಅನುವಾದ 6 ಅನುವಾದಗಳಲ್ಲಿ ಒಂದಾಗಿ ಆಯ್ಕೆಯಾಯಿತು. ಕನ್ನಡ ಕೃತಿಯೊಂದಕ್ಕೆ ಈ ಗ್ರಾಂಟ್ ಸಿಕ್ಕಿದು ಅದೇ ಮೊದಲು.

ಪೆನ್ ಪ್ರೆಸೆಂಟ್ಸ್ ಗ್ರಾಂಟ್ ಸಿಕ್ಕಿದ ಮೇಲೆ ಬಾನು ಅವರ ಕಥೆಗಳ ಅನುವಾದದ ಬಗ್ಗೆ ಪ್ರಕಾಶಕರಲ್ಲಿ ಒಂದಿಷ್ಟು ಆಸಕ್ತಿ ಮೂಡಿತ್ತು. ಪೆಂಗ್ವಿನ್ ರಾಂಡಮ್ ಹೌಸ್ ನವರು ಭಾರತದಲ್ಲಿ ಈ ಅನುವಾದವನ್ನು ಪ್ರಕಟಿಸಲು ಮುಂದಾದರು. ಅಷ್ಟರಲ್ಲಿ ಬ್ರಿಟನ್ ನಲ್ಲಿರುವ ‘ಆಂಡ್ ಅದರ್ ಸ್ಟೋರೀಸ್’ ಎಂಬ ಪ್ರಕಾಶಕರು ಯುಕೆ ಮತ್ತು ಯುಎಸ್ ನಲ್ಲಿ ಇದನ್ನು ಪಬ್ಲಿಶ್ ಮಾಡಲು ಮುಂದಾದರು.

PEN Translates ಎಂಬುದು ಇಂಗ್ಲಿಷ್ ಪೆನ್ ಅವರ ಅನುವಾದಕ್ಕೆ ಸಂಬಂಧಪಟ್ಟ ಮುಖ್ಯ ಕಾರ್ಯಕ್ರಮ. ಇದರಡಿಯಲ್ಲಿ ಇಂಗ್ಲೆಂಡಿನಲ್ಲಿ ಅನುವಾದಿತ ಪುಸ್ತಕಗಳನ್ನು ಪಬ್ಲಿಶ್ ಮಾಡಲು ಅಲ್ಲಿರುವ ಪ್ರಕಾಶಕರಿಗೆ ಆರ್ಥಿಕ ನೆರವು ನೀಡುತ್ತಾರೆ. ಪ್ರಪಂಚದ ಅದೆಷ್ಟೋ ಭಾಷೆಗಳಿಂದ ಅನುವಾದಗೊಂಡ ನೂರಾರು ಪುಸ್ತಕಗಳು ಸ್ಪರ್ಧೆಯಲ್ಲಿ ಇರುತ್ತವೆ. ಈ ಬಾರಿ 16 ಗೆದ್ದ ಪುಸ್ತಕಗಳಲ್ಲಿ ನಾನು ಅನುವಾದಿಸಿದ ಪುಸ್ತಕವೂ ಒಂದು. ಮೂಲ ಭಾಷೆ ಕನ್ನಡದಿಂದ ಅನುವಾದಿಸಿದ ಕೃತಿಗೆ ಪ್ರಶಸ್ತಿ ಸಿಕ್ಕಿರುವುದು ಇದೇ ಮೊದಲ ಬಾರಿ ಎಂಬುದು ನನಗೆ ತುಂಬಾ ಹೆಮ್ಮೆಯ ವಿಷಯ.

ಮುಖ್ಯವಾಗಿ, ಈ ಪ್ರಶಸ್ತಿಯಿಂದ ನನಗಾಗಲಿ, ಬಾನುರವರಿಗಾಗಲಿ ಯಾವುದೇ ಸಂಭಾವನೆಯಾಗಲಿ, ಉಳಿದ ರೀತಿಯ ಯಾವುದೇ ಪ್ರೈಜ್ ಆಗಲಿ ಸಿಕ್ಕಿಲ್ಲ. ಅದೆಲ್ಲ ನಮ್ಮ ಪ್ರಕಾಶಕರಿಗೆ ಸಿಕ್ಕ ನೆರವು. ಆದರೆ ಅನುವಾದಕ್ಕೆ ಸಿಕ್ಕ ಈ ಅವಾರ್ಡ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತುಂಬಾ ಗೌರವವಿದೆ, ಮಾನ್ಯತೆ ಇದೆ.

* ಪತ್ರಕರ್ತೆಯಾಗಿ, ಬರಹಗಾರ್ತಿಯಾಗಿ, ಇಂಗ್ಲಿಷ್‌ ಸಾಹಿತ್ಯದೊಂದಿಗೆ ಒಡನಾಡಿದವರು. ಕನ್ನಡ ಸಾಹಿತ್ಯವನ್ನು ಅನುವಾದಿಸುವ ಯೋಚನೆ ಮಾಡಿದ್ದು ಹೇಗೆ ಮತ್ತು ಏಕೆ?

ನಿಜ ಹೇಳಬೇಕಾದರೆ  ನಾನು  ಅನುವಾದ ಮಾಡಬೇಕೆಂಬ  ಯಾವುದೇ ಆಲೋಚನೆಗಳನ್ನು  ಮಾಡಿಕೊಂಡವಳಲ್ಲ. 2012 ರಲ್ಲಿ ‘ಈ ಹಿಂದೂ’ ಪತ್ರಿಕೆಯಲ್ಲಿ  ಕೊಡಗಿನ ಗೌರಮ್ಮ  ಅವರ  ಶತಮಾನೋತ್ಸವದ ಬಗ್ಗೆ  ಒಂದು ಲೇಖನವನ್ನು ಓದಿದಾಗ  ಅನಿಸಿತ್ತು.  ನಾನು  ಕೊಡಗಿನಲ್ಲಿ  ಹುಟ್ಟಿ ಬೆಳೆದವಳು.  ಗೌರಮ್ಮ ಅವರ  ಹೆಸರನ್ನು  ಕೇಳಿದ್ದನಾದರೂ  ಅವರ ಬಗ್ಗೆ ಹೆಚ್ಚಾಗಿ ತಿಳಿ ದಿರಲಿಲ್ಲ. ಕನ್ನಡ ಸಾಹಿತ್ಯ ಲೋಕದಲ್ಲಿಯೂ ಸಹ  ಅವರ ಬಗ್ಗೆ  ಹೆಚ್ಚು  ಚರ್ಚೆಯಾಗು ತ್ತಿರಲಿಲ್ಲ  ಎಂದೆನಿಸಿ , ಅವರ ಕಥೆಗಳನ್ನು  ಅನುವಾದಿಸಿದರೆ  ಹೇಗಿರಬಹುದು  ಎಂಬ ಆಲೋಚನೆ  ಮೂಡಿತು.   ನನಗೆ ಅನುವಾದದ ಬಗ್ಗೆ ಒಂದಿಷ್ಟು ಅರಿವಿರಲಿಲ್ಲ. ಆ ಮೊದಲ ಆಲೋಚನೆಯಿಂದ ಹಿಡಿದು ಕೊಡಗಿನ ಗೌರಮ್ಮನವರ 21 ಕಥೆಗಳ ಕಲೆಕ್ಷನ್ ಬರುವಷ್ಟರಲ್ಲಿ ಸರಿಯಾಗಿ ಒಂದು ದಶಕ ಕಳೆದು ಹೋಯಿತು. ಆ ಪುಸ್ತಕ ಪ್ರಕಟವಾಗುವ ಹಾದಿಯಲ್ಲಿರಬೇಕಾದರೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದವರು ಶಿವರಾಮ ಕಾರಂತರ ‘ ಅದೇ ಊರು, ಅದೇ ಮರ’ ಕಾದಂಬರಿಯನ್ನು ಅನುವಾದಿಸುವ ಕೆಲಸ ಒಪ್ಪಿಸಿದರು. ಹೀಗಾಗಿ ನಾನು ನೆನೆಸಿದ ನನ್ನ ಮೊದಲ ಅನುವಾದಿತ ಪುಸ್ತಕ, ಗೌರಮ್ಮನವರ ಕಥಾಸಂಕಲನ ನನ್ನ ಎರಡನೆಯ ಪುಸ್ತಕವಾಗಿ ಹೊರ ಬಂತು.

ಕಾರಂತರ ಕಾದಂಬರಿಯನ್ನು ಅನುವಾದಿಸಲು ನಾನು ತುಂಬಾ ಹಿಂಜರಿದಿದ್ದೆ. ಕಾರಂತರಂತಹ ಲೇಖಕರ ಕೃತಿ, ಅದರ ಜೊತೆ ನನಗೆ ಅನುವಾದ ಮಾಡುವ ಯಾವುದೇ ಅನುಭವವಿರಲಿಲ್ಲ ಎಂಬುದು ಹಿಂಜರಿಕೆಗೆ ಕಾರಣವಾಗಿತ್ತು. ಈಗ ನಾನು ಅನುವಾದಿಸಿದ್ದನ್ನು ಓದಿದರೆ ಪ್ರತಿ ಎರಡನೇ ಸಾಲಿನಲ್ಲಿ ತಿದ್ದುಪಡಿ ಮಾಡಬೇಕಾದಂತಹ ಅಂಶಗಳು ಎದ್ದು ಕಾಣುತ್ತವೆ, ಇನ್ನಷ್ಟು ಸರಿಯಾಗಿ ಮಾಡಬಹುದಿತ್ತು ಎಂದೆನಿಸುತ್ತದೆ. ಆದರೆ ಅದೊಂದು ಒಳ್ಳೆಯ ಅನುಭವ, ಕೆಲವೇ ತಿಂಗಳಲ್ಲಿ ನನಗೆ ಅನುವಾದದ ಬಗ್ಗೆ ಅದೆಷ್ಟೋ ವಿಷಯಗಳನ್ನು ಕಲಿಸಿ ಬಿಟ್ಟಿತು. ಮುಂದೆ ಯಾವಾಗಲಾದರೂ ಈ ಅನುವಾದವನ್ನು ಎಡಿಟ್ ಮಾಡಬೇಕೆಂಬ ಆಸೆ ಇದೆ.

* ನಿಮ್ಮ ಒಂದು ಬರಹ ‘ಕಮಿಂಗ್ ಟು ಕನ್ನಡ’ದಲ್ಲಿ, ‘ Coming (back) to Kannada has been a rush of adrenaline over waves of feelings’ ಎಂದು ಹೇಳಿದ್ದಿರಿ. ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ ಭಾಷೆಗೆ ಒಯ್ಯುವ ಪ್ರಕ್ರಿಯೆಯ ಆದ ಅನುಭವ ಹೇಗಿತ್ತು?

ನಾನು ಮೊದಲೇ ಹೇಳಿದ ಹಾಗೆ, ನಾನು ಕನ್ನಡದ ಪುಸ್ತಕಗಳನ್ನು ಹೆಚ್ಚಾಗಿ ಓದಿ ಬೆಳೆದವಳಲ್ಲ. ಸ್ಕೂಲಿನಿಂದ ಕಾಲೇಜಿನ ತನಕವೂ ಕನ್ನಡ ಕಲಿತಿದ್ದರು ನನಗೆ ಕನ್ನಡ ಭಾಷೆಯ ಮೇಲಿನ ಹಿಡಿತ ಇರಲಿಲ್ಲ. ಈಗಲೂ ವಿಶೇಷವಾಗಿದೆ ಎಂದು ಹೇಳಲಾರೆ. ನಾನು ಅನುವಾದ ಗಳನ್ನು ಮಾಡುತ್ತಾ ಇರಬೇಕಾದರೆ ಗಮನಿಸಿದ ಮೊದಲ ಅಂಶ ಏನೆಂದರೆ ಕನ್ನಡದ ಜೊತೆಗಿನ ಒಡನಾಟ ಹೆಚ್ಚುತ್ತಾ ಹೋಗುತ್ತಿರುವುದು. ನಾನು ಕನ್ನಡದಲ್ಲಿ ಓದುವುದು, ಕನ್ನಡದಲ್ಲಿ ಆಲೋಚಿಸುವುದು, ಕನ್ನಡ ಶಬ್ದಗಳನ್ನು ಮೊದಲಿಗೆ ಗಿಂತ ಹೆಚ್ಚಾಗಿ ಬಳಸುವುದು ಹೆಚ್ಚುತ್ತಾ ಹೋಯಿತು. ಅದೆಷ್ಟೋ ದಶಕಗಳ ನಂತರ ಕನ್ನಡಕ್ಕೆ ಹತ್ತಿರವಾಗುತ್ತಿದ್ದೇನೆ ಎಂಬ ಆ ಭಾವನೆ ನನ್ನನ್ನು ಮೊದಮೊದಲು ತುಂಬಾ ಭಾವುಕಳನ್ನಾಗಿ ಮಾಡತೊಡಗಿತ್ತು. ನಾನು ಕನ್ನಡದಿಂದ ಇಂಗ್ಲೀಷ್ ಗೆ ಅನುವಾದಿಸುವ ಈ ಪ್ರಕ್ರಿಯೆ ಒಂದು ಸೆಲ್ಫಿಶ್ ಆಕ್ಟ್ ಅನಿಸುತ್ತದೆ, ಕನ್ನಡವನ್ನು ಬೇರೆ ಭಾಷೆಯವರಿಗೆ ಪರಿಚಯಿಸುವುದರ ಜೊತೆಗೆ ನಾನು ನನ್ನ ಭಾಷೆಗೆ ಹತ್ತಿರವಾಗುತ್ತಿದ್ದೇನೆ.

* ಬಾನು ಮುಷ್ತಾಕ್ ಅವರ ಕತೆಗಳನ್ನು ಅನುವಾದಕ್ಕ ಆಯ್ಕೆ ಮಾಡಿಕೊಳ್ಳಲು ನಿರ್ದಿಷ್ಟ ಕಾರಣವಿತ್ತ? ಹೇಗಿತ್ತು ಅನುವಾದದ ಅನುಭವ?

ಒಂದೆರಡು ವರ್ಷಗಳ ಹಿಂದೆ ನನ್ನ ಸ್ನೇಹಿತರೊಬ್ಬರು, ಬಾನು ಅವರ ಸಣ್ಣ ಕಥೆಗಳನ್ನು ಅನುವಾದಿಸುವ ಆಸಕ್ತಿ ಇದೆಯೇ ಎಂದು ಕೇಳಿದ್ದರು. ಅಲ್ಲಿಯವರೆಗೆ ಕೆಲವೊಂದು ಅವರ ಕಥೆಗಳನ್ನು ಓದಿದ್ದೆ ಏನಾದರೂ ಅವರ ಎಲ್ಲಾ ಕಥೆಗಳನ್ನು ನಾನು ಓದಿರಲಿಲ್ಲ. ಓದಲು ಪ್ರಾರಂಭಿಸಿದಾಗ ಅವರ ಕಥೆಗಳಲ್ಲಿರುವ ವೈಶಿಷ್ಟ್ಯತೆ, ಅವರ ಭಾಷೆ, ಸೆನ್ಸ್ ಆಫ್ ಹ್ಯೂಮರ್ ಮತ್ತು ಆ ಕಥೆಗಳಲ್ಲಿರುವ ರೆಲೆವೆನ್ಸ್ ನನಗೆ ತುಂಬಾ ಇಷ್ಟವಾದವು. Translation, like writing, is a political act. ಅವರ ಕಥೆಗಳಲ್ಲಿರುವ ಸಾಮಾಜಿಕ ಪ್ರಜ್ಞೆ, ಫೆಮಿನಿಸಂ, ರಾಜಕೀಯ, ಇತ್ಯಾದಿ ನನ್ನ ಕಾಳಜಿಗಳು ಸಹ. ನನಗೆ ಇದು ಬಹಳ ಮುಖ್ಯ. ಲೇಖಕರ ದೃಷ್ಟಿಕೋನ ಮತ್ತು ನಾನು ನಂಬುವ ಪಾಲಿಟಿಕ್ಸ್ ಹೊಂದಿಕೆಯಾಗದಿದ್ದರೆ ನಾನು ಬಹುಶಃ ಆಕೃತಿಯನ್ನು ಅನುವಾದಿಸಲು ಸಮರ್ಥವಲ್ಲ. ಬಾನು ಅವರ ಕಥೆಗಳನ್ನು ಅನುವಾದಿಸುವುದು ತುಂಬಾ ಒಳ್ಳೆಯ ಅನುಭವವಾಗಿತ್ತು. ಅವರ ವಿಶಿಷ್ಟ ಉರ್ದು, ಅರೆಬಿಕ್, ಸ್ಥಳೀಯ ಕನ್ನಡ ಭಾಷೆಯೊಂದೆಯಲ್ಲ, ಅವರ ವೈಯಕ್ತಿಕ ಪರಿಚಯ, ಒಡನಾಟ ನನಗೆ ಒಂದು ಬಹಳ ದೊಡ್ಡ ಕಲಿಕೆಯಾಗಿ ಉಳಿದುಕೊಂಡಿದೆ.

* ಇತ್ತೀಚೆಗೆ ಕನ್ನಡದ ಕೆಲವು ಕೃತಿಗಳು ಇಂಗ್ಲಿಷ್‌ಗೆ ಅನುವಾದವಾಗುತ್ತಿವೆ. ಇದು ಬಹಳ ಮುಖ್ಯವಾದ ಬೆಳವಣಿಗೆ. ಆದರೆ ಕನ್ನಡದ ಬಹಳ ಮುಖ್ಯವಾದ ಕೃತಿಗಳು ಇಂಗ್ಲಿಷ್‌ಗೆ ಅನುವಾದವಾಗಬೇಕು. ಇದು ಇನ್ನು ಸಾಧ್ಯವಾಗಿಲ್ಲ. ಅನುವಾದಕ್ಕೆ ಮೂಲ ಬರವಣಿಗೆಗೆ ಸಿಗುವ ಮನ್ನಣೆ ಸಿಗುವುದಿಲ್ಲ ಎಂಬ ಕಾರಣವೇನಾದರೂ ಇದೆಯೇ?

ಬಹಳ ಒಳ್ಳೆಯ ಪ್ರಶ್ನೆ. ಕನ್ನಡದಿಂದ ಬೇರೆ ಭಾಷೆಗಳಿಗೆ, ಅದರಲ್ಲೂ, ಇಂಗ್ಲಿಷ್ ಭಾಷೆಗೆ ಅನುವಾದಿಸುವವರ ಸಂಖ್ಯೆ ಕಡಿಮೆ ಇದ್ದು, ಹೊರಬರುವ ಅನುವಾದಗಳು ಸಹ ಒಳ್ಳೆಯ ಗುಣಮಟ್ಟದವು ಆಗಿರುವುದಿಲ್ಲ ಎಂಬ ಮಾತು ನಾನೂ ಕೇಳಿದ್ದೇನೆ. ಇಲ್ಲಿ ಹಲವು ಸಮಸ್ಯೆಗಳನ್ನು ನಾವು ಗಮನಿಸಬೇಕು. ಮೊದಲನೆಯದಾಗಿ, ನಮ್ಮ ಅದೆಷ್ಟೋ ಸಾಹಿತಿಗಳಲ್ಲಿಯೇ ಅನುವಾದದ ಬಗ್ಗೆ, ಅನುವಾದಕರ ಬಗ್ಗೆ ಒಂದು ರೀತಿಯ ಕೀಳರಿಮೆ ಇದೆ. ಯಾರು ಯಾವ ಕೃತಿಯನ್ನು ಹೇಗೆ ಅನುವಾದಿಸಬೇಕೆಂಬ ಗೇಟ್ ಕೀಪಿಂಗ್  ಇರುವಾಗ ಅನುವಾದದ ಅಭ್ಯಾಸ ಮಾಡಬಹುದೇ ಎಂಬ ಆಲೋಚನೆ ಮಾಡುವುದೇ ಕಷ್ಟ. ಅನುವಾದದ ರೈಟ್ಸ್ ಪಡೆದುಕೊಂಡರೆ ಮುಂದೆ ಕೆಲಸ ಶುರು ಮಾಡಲು ಯಾವುದೇ ರೀತಿಯ ಆರ್ಥಿಕ ನೆರವು ಇರುವುದಿಲ್ಲ. ಹೀಗಾಗಿ ಅನುವಾದವನ್ನು ಒಂದು ವೃತ್ತಿಯಾಗಿ ಕಟ್ಟಿಕೊಳ್ಳುವುದು ನಮ್ಮ ದೇಶದಲ್ಲಿಯೇ ಅಸಾಧ್ಯ. ಬೇರೆ ಯಾವುದೋ ವೃತ್ತಿಯಲ್ಲಿ ಇದ್ದುಕೊಂಡು ಅನುವಾದವನ್ನು ಒಂದು ಲೇಬರ್ ಆಫ್ ಲವ್  ಎಂದು ಕೈಗೆತ್ತಿಕೊಳ್ಳಬೇಕಷ್ಟೇ. ಇದರಿಂದಾಗಿ ಅನುವಾದಕರ ಸಂಖ್ಯೆಯು ಹೆಚ್ಚಾಗುವುದಿಲ್ಲ, ಮತ್ತು ಗುಣಮಟ್ಟದಲ್ಲಿ ಏರಿಕೆಯಾಗುವುದು ಕಷ್ಟ.

ಇವೆಲ್ಲ ಅಡಚಣೆಗಳನ್ನು ದಾಟಿ, ಒಂದು ಕೃತಿಯನ್ನು ಅನುವಾದಿಸಿ ಅದು ಪಬ್ಲಿಶ್ ಆಗಿ ಸ್ವಲ್ಪ ಮಟ್ಟಿಗೆ ಗಮನ ಸೆಳೆದರೆ, ನಮ್ಮಲ್ಲಿ ಅದನ್ನು ಪ್ರೋತ್ಸಾಹಿಸುವುದರ ಬದಲಾಗಿ ಅದನ್ನು ಕಡೆಗಣಿಸುತ್ತಾರೆ. ಅನುವಾದಕರ ಹೆಸರನ್ನು ಗುರುತಿಸುವಲ್ಲಿ ಮುಜುಗರ ಪಡುತ್ತಾರೆ. ಅನುವಾದಿಸಿದ ಕೃತಿ ಮೂಲಕೃತಿಯಿಂದ ಬಂದರು ಅದಕ್ಕೆ ಬೇರೆ ಒಂದು ಅಸ್ತಿತ್ವವಿರುತ್ತದೆ. ಇದು ಮೊಟ್ಟಮೊದಲನೆಯದಾಗಿ ಸಾಹಿತಿಗಳೇ ಗುರುತಿಸಬೇಕಾದುದು. ಹೀಗೆ ಗುರುತಿಸಿದರೆ ಅವರ ಓದುಗರಲ್ಲಿಯೂ ಅನುವಾದದ ಬಗ್ಗೆ, ಅದರ ಮಹತ್ವದ ಬಗ್ಗೆ ಅರಿವು ಮೂಡುತ್ತದೆ. Tolstoy, Marquez, ಇತ್ಯಾದಿ ಲೇಖಕರ ಅದ್ಭುತ ಕೃತಿಗಳನ್ನು ನಮ್ಮಲ್ಲಿ ಹೆಚ್ಚಿನವರು ಮೂಲ ಭಾಷೆಯಲ್ಲಿ ಓದಿರಲಾರರು. ಆ ಕೃತಿಗಳಲ್ಲ ನಮಗೆ ಅನುವಾದಿಸಿ ಇಂಗ್ಲಿಷ್ ನಲ್ಲಿ ಬಂದವು. ಅನುವಾದಕರು ಇರಲಿಲ್ಲವೆಂದರೆ ನಮಗೆ ಅದೆಷ್ಟೋ ಕೃತಿಗಳ ಪರಿಚಯವಿರುತ್ತಿರಲಿಲ್ಲ, ನಮ್ಮ ಬೌದ್ಧಿಕ ಜಗತ್ತು ಅದೆಷ್ಟೋ ಕುಬ್ಜ ವಾಗಿ  ಉಳಿದುಬಿಡುತ್ತಿತ್ತು.

ದೀಪಾ ಭಾಸ್ತಿ-1

ಜೈಪುರ ಸಾಹಿತ್ಯೋತ್ಸವದ ಗೋಷ್ಠಿಯೊಂದರಲ್ಲಿ ಲೇಖಕಿ, ಅನುವಾದಕಿ ದೀಪಾ ಭಾಸ್ತಿ

Tags: #[pratidhvanidigitalEditorsGovernment of KarnatakaMinistry of Central Information and Broadcasting
Previous Post

ತಂದೆ ಮೂಗಿನಲ್ಲಿ ರಕ್ತಸ್ರಾವ ಆಗಲು ಕಾರಣವೇನು?

Next Post

ಕನ್ನಡಸಾಹಿತ್ಯದಒಡನಾಟದಬಗ್ಗೆಹೇಳಿ.. ಕನ್ನಡದನಿಮ್ಮನೆಚ್ಚಿನಲೇಖಕರುಯಾರು? ಯಾಕೆ?

Related Posts

ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ – ದೊಡ್ಡ ಸಮಾರಂಭಗಳಿಗೆ ಎಸ್‌ಒಪಿ ರಚನೆ
Top Story

ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ – ದೊಡ್ಡ ಸಮಾರಂಭಗಳಿಗೆ ಎಸ್‌ಒಪಿ ರಚನೆ

by Chetan
July 2, 2025
0

ಚಿನ್ನಸ್ವಾಮಿ ಕ್ರೀಡಾಂಗಣದ (Chinnaswamy stadium) ಕಾಲ್ತುಳಿತ ದುರಂತದ (Stamped case) ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ರಾಜ್ಯದಲ್ಲಿ ದೊಡ್ಡ ಮಟ್ಟದ ಸಮಾರಂಭಗಳಿಗೆ ಎಸ್‌ಒಪಿ (SOP) ರಚನೆ ಮಾಡಿ...

Read moreDetails
ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

July 2, 2025
ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

July 2, 2025
ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

July 2, 2025
ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

July 2, 2025
Next Post
ಕನ್ನಡಸಾಹಿತ್ಯದಒಡನಾಟದಬಗ್ಗೆಹೇಳಿ.. ಕನ್ನಡದನಿಮ್ಮನೆಚ್ಚಿನಲೇಖಕರುಯಾರು? ಯಾಕೆ?

ಕನ್ನಡಸಾಹಿತ್ಯದಒಡನಾಟದಬಗ್ಗೆಹೇಳಿ.. ಕನ್ನಡದನಿಮ್ಮನೆಚ್ಚಿನಲೇಖಕರುಯಾರು? ಯಾಕೆ?

Recent News

ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ – ದೊಡ್ಡ ಸಮಾರಂಭಗಳಿಗೆ ಎಸ್‌ಒಪಿ ರಚನೆ
Top Story

ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ – ದೊಡ್ಡ ಸಮಾರಂಭಗಳಿಗೆ ಎಸ್‌ಒಪಿ ರಚನೆ

by Chetan
July 2, 2025
ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 
Top Story

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

by Chetan
July 2, 2025
ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 
Top Story

ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

by Chetan
July 2, 2025
ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 
Top Story

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

by Chetan
July 2, 2025
ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.
Top Story

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

by ಪ್ರತಿಧ್ವನಿ
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ – ದೊಡ್ಡ ಸಮಾರಂಭಗಳಿಗೆ ಎಸ್‌ಒಪಿ ರಚನೆ

ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ – ದೊಡ್ಡ ಸಮಾರಂಭಗಳಿಗೆ ಎಸ್‌ಒಪಿ ರಚನೆ

July 2, 2025
ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada