• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

Covid19: ಮೋದಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದ ಅಂತರಾಷ್ಟ್ರೀಯ ಮಾಧ್ಯಮಗಳು

Any Mind by Any Mind
April 26, 2021
in ದೇಶ, ವಿದೇಶ
0
Covid19: ಮೋದಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದ ಅಂತರಾಷ್ಟ್ರೀಯ ಮಾಧ್ಯಮಗಳು
Share on WhatsAppShare on FacebookShare on Telegram

ವ್ಯಕ್ತಿ ಚಿತ್ರಣಕ್ಕೆ ಬಹಳಷ್ಟು ಪ್ರಾಮುಖ್ಯತೆ ಕೊಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ, ಈಗ ಅಂತರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಛೀಮಾರಿ ಹಾಕುತ್ತಿವೆ. ಭಾರತದಲ್ಲಿ ಕೋವಿಡ್‌ ನಿರ್ವಹಣೆ ಮಾಡವಲ್ಲಿ ಪದೇ ಪದೇ ಎಡವುತ್ತಿರುವ ಕೇಂದ್ರ ಸರ್ಕಾರದ ಇಇಮೇಜ್‌ʼ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಳಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ʼವಿಶ್ವ ಗುರುʼ ಸ್ಥಾನದಿಂದ ಭಾರತದ ಕೋವಿಡ್‌ ಸಂಕಷ್ಟದ ಖಳನಾಯಕನಂತೆ ಪ್ರಧಾನಿ ಮೋದಿ ಬಿಂಬಿತರಾಗಿರುವುದು ಬಿಜೆಪಿಯ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ADVERTISEMENT

Modi leads India out of lockdown and into a Covid apocalypse, ‘This Is Hell.’ Prime Minister Modi’s Failure to Lead Is Deepening India’s COVID-19 Crisis, World’s Biggest Covid Crisis Threatens Modi’s Grip on India, Modi leads India into Viral Apocalypse ಮುಂತಾದ ತಲೆಬರಹಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿಯವರ ಕಾರ್ಯಕ್ಷಮತೆ ಹಾಗೂ ಕೋವಿಡ್‌ ನಿರ್ವಹಣೆಯ ತಂತ್ರಗಾರಿಕೆಯನ್ನು ಪ್ರಶ್ನಿಸಿವೆ.

ಲಂಡನ್‌ ಮೂಲದ ಖ್ಯಾತ ಮಾಧ್ಯಮ ಸಂಸ್ಥೆ The Times ವರದಿಗೆ, Modi flounders in India’s gigantic second wave ಎಂದು ತಲೆಬರಹ ನೀಡಲಾಗಿದೆ. ಭಾರತದಲ್ಲಿ ಪ್ರತಿದಿನ ಯಾವ ರೀತಿ ಮೂರು ಲಕ್ಷಕ್ಕೂ ಮಿಕ್ಕಿ ಪ್ರಕರಣಗಳು ದಾಖಲಾಗುತ್ತಿವೆ ಎಂಬ ಕುರಿತಾಗಿ ವಿಸ್ತೃತವಾಗಿ ಪ್ರಕಟಿಸಲಾಗಿದೆ. ಇದರೊಂದಿಗೆ ಕೋವಿಡ್‌ 2ನೇ ಅಲೆಯ ಸಂದರ್ಭದಲ್ಲಿ ಸರ್ಕಾರ ಸ್ಪಂದಿಸಿದ ರೀತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಢಿದೆ.

The World is watching @narendramodi Prime Minister Narendra Modi depicted in "Australian Financial Review" by cartoonist David Rowe: Death Rides A Pale Elephant! pic.twitter.com/QMUU2UVAmX

— ParanjoyGuhaThakurta (@paranjoygt) April 25, 2021

The system has collapsed: India’s descent into Covid hell, ಎಂದು The Guardian ವರದಿ ಮಾಡಿದೆ. ಭಾರತದ ಚಿತಾಗಾರಗಳ ಪ್ರಸ್ತುತ ಪರಿಸ್ಥಿತಿಯ ಚಿತ್ರದೊಂದಿಗೆ ಪ್ರಕಟವಾದ ಈ ವರದಿಯು, ಭಾರತದ ಬಹುತೇಕರು ಕೋವಿಡ್‌ ವಿರುದ್ದ ಜಯ ಸಾಧಿಸಿದ ಭ್ರಮೆಯಲ್ಲಿ ಇದ್ದರು ಎಂದು ಹೇಳಿದೆ. “ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಖಾಲಿಯಾಗುತ್ತಿದ್ದರೆ, ಶವಾಗಾರಗಳಲ್ಲಿ ಮೃತದೇಹಗಳ ಸಂಖ್ಯೆ ಹೆಚ್ಚಾಗುತ್ತಿದೆ,” ಎಂದಿದೆ.

ಇನ್ನು ʼThe Australianʼನಲ್ಲಿ ಬಂದಿರುವಂತಹ ವರದಿಯನ್ನು ಟ್ವೀಟ್‌ ಮಾಡಿರುವ ಬಿಜೆಪಿ ನಾಯಕ ಸುಬ್ರಹ್ಮಣಿಯನ್‌ ಸ್ವಾಮಿ, ಅಂತರಾಷ್ಟ್ರೀಯ ಮಾಧ್ಯಮಗಳು ಹೊಗಳದಾಗ ಪ್ರಧಾನ ಮಂತ್ರಿಯವರ ಕಾರ್ಯಲಯ ಶ್ರದ್ದೆಯಿಂದ ಅವುಗಳನ್ನು ರೀಟ್ವೀಟ್‌ ಮಾಡಿತ್ತು. ಈಗ ಆಸ್ಟ್ರೇಲಿಯಾದವರು ಹೇಳುತ್ತಿರುವಂತೆ ಅಂತರಾಷ್ಟ್ರೀಯ ಮಾಧ್ಯಮಗಳು ಹೇಳುತ್ತಿವೆ. ಇದು ವಾಸ್ತಾವಿಕ ಸತ್ಯ, ಎಂದು ಬರೆದುಕೊಂಡಿದ್ದಾರೆ.

For a PMO which meticulously got re tweeted in Indian Media as in TNTV etc foreign praise, now note foreign media coverage world wide is as this Australian says: this is reality check for us pic.twitter.com/KusKCQwX0B

— Subramanian Swamy (@Swamy39) April 26, 2021

ದೇಶದಲ್ಲಿ ಕರೋನಾ ಸೋಂಕು ತನ್ನ ನಾಗಾಲೋಟ ಮುಂದುವರೆಸಿದ ಕಾರಣಕ್ಕೆ ಸಂಪೂರ್ಣ ಪ್ರಪಂಚದ ದೃಷ್ಟಿ ಭಾರತದ ಮೇಲೆ ಬಿದ್ದಿತ್ತು. ದಿನದಿಂದ ದಿನಕ್ಕೆ ದಾಖಲೆ ಪ್ರಮಾಣದ ಹೊಸ ಪ್ರಕರಣಗಳು ದಾಖಲಾಗುತ್ತಿರುವುದು ಕೇವಲ ಭಾರತೀಯರಿಗೆ ಅಷ್ಟೇ ಅಲ್ಲ, ವಿಶ್ವಕ್ಕೇ ಆತಂಕದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಸರ್ಕಾರದ ವೈಫಲ್ಯಕ್ಕೆ ಹಾಗೂ ಪ್ರಚಾರಪ್ರಿಯ ನಾಯಕರ ಅಧಿಕಾರದ ತೆವಲಿಗೆ ದೇಶದ ಜನರು ಬಲಿಯಾಗುತ್ತಿದ್ದಾರೆ.

ಈ ಹಿಂದೆ ಬ್ರೆಜಿಲ್‌ನಲ್ಲಿ ಕರೋನಾ ಸೋಂಕು ಉಲ್ಬಣಗೊಂಡಾಗ, ಅಂತರಾಷ್ಟ್ರೀಯ ಮಾಧ್ಯಮಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದವು. ಈಗ ಅದೇ ಪರಿಸ್ಥಿತಿ ಭಾರತಕ್ಕೆ ಬಂದಿದೆ. ಅನೇಕ ದೇಶಗಳು ಭಾರತದ ವಿಮಾನ ಸೇವೆಗಳನ್ನು ನಿರ್ಬಂಧಿಸಿವೆ. ಭಾರತೀಯರನ್ನು ದೇಶದ ಒಳಗೆ ಸೇರಿಸುವುದಿಲ್ಲ ಎಂದು ಹೇಳಿವೆ. ಕೆಲವು ರಾಷ್ಟ್ರಗಳು ಭಾರತಕ್ಕೆ ಪ್ರವಾಸ ಕೈಗೊಳ್ಳಬೇಡಿ ಎಂದು ಹೇಳಿದೆ.

ಇದರೊಂದಿಗೆ, ಇಂತಹ ಸಂಕಷ್ಟದ ಸಮಯದಲ್ಲಿ ಕುಂಭ ಮೇಳದ ಆಯೋಜನೆಯನ್ನು ಕೂಡಾ ಟೀಕಿಸಿರುವ ಮಾಧ್ಯಮಗಳು, ಲಕ್ಷಾಂತರ ಜನರು ಮಾಸ್ಕ್‌ಗಳಿಲ್ಲದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಕುಂಭ ಮೇಳದಲ್ಲಿ ಪಾಲ್ಗೊಂಡ ಚಿತ್ರಗಳು ಪ್ರಕಟವಾಗಿದ್ದವು. ಇಂತಹ ಧಾರ್ಮಿಕ ಮೇಳವನ್ನು ರದ್ದುಪಡಿಸಲು ಸಾಧ್ಯವಾಗದ ಸರ್ಕಾರದ ಹೇಡಿತನವನ್ನು ಪ್ರಶ್ನಿಸಿದ್ದವು.

ಭಾರತದಿಂದ ವಿಶೇಷ ವರದಿಗಳನ್ನು ಪ್ರಕಟಿಸುತ್ತಿರುವ Sky News ವರದಿಗಾರ್ತಿ ಅಲೆಕ್ಸ್‌ ಕ್ರೋವ್‌ಫೋರ್ಡ್‌ ಅವರು, ದೆಹಲಿಯಲ್ಲಿ ರೋಗಿಗಳು ಆಕ್ಸಿಜನ್‌ಗಾಗಿ ಬೇಡುತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ.

“ನಾವು ಇಲ್ಲಿ ಬಂದ ಕೆಲವು ಗಂಟೆಗಲು ಮಾತ್ರವಾಗಿವೆ, ಈಗಾಗಲೇ ಅರ್ಧ ಡಜನ್‌ ಜನರು ಚಿಕಿತ್ಸೆಗಾಗಿ ಕಾಯುತ್ತಲೇ ಪ್ರಾಣ ಕಳೆದುಕೊಂಡಿದ್ದಾರೆ,” ಎಂದಿದ್ದಾರೆ.

'We've only been here a few hours and have seen half a dozen people die while they wait for treatment.'

India has recorded more than 332,000 #COVID19 cases in a single day.@AlexCrawfordSky reports from Delhi, where people are "begging for oxygen."https://t.co/2DIoxqdjOz pic.twitter.com/x95QVRYtXG

— Sky News (@SkyNews) April 23, 2021

ಒಟ್ಟಿನಲ್ಲಿ, ದೇಶದಲ್ಲಿ ಕೋವಿಡ್‌ ತನ್ನ ಕಬಂಧ ಬಾಹುಗಳನ್ನು ಮತ್ತಷ್ಟು ಬಿಗಿಗೊಳಿಸುತ್ತಿದ್ದ ಸಂದರ್ಭದಲ್ಲಿ ನಮ್ಮ ದೇಶದ ನಾಯಕರು ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಈಗ ಪರಿಸ್ಥಿತಿ ಕೈಮೀರಿದ ನಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ದೋಷಾರೋಪಣೆಯ ಕೆಸರೆರಚಾಟ ನಡೆಯುತ್ತಿದೆ. ಆಕ್ಸಿಜನ್‌ ಕೊರತೆ, ಕೋವಿಡ್‌ ಲಸಿಕೆಗಳ ಕೊರತೆ, ರೆಮ್‌ಡೆಸಿವೀರ್‌ ಔಷಧಿಯ ಕೊರತೆ, ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆಯಿಂದ ಜನರು ಸಾವನ್ನಪ್ಪುತ್ತಿದ್ದಾರೆ. ಕರ್ನಾಟಕದಲ್ಲಿ ಹೊಸ ಸ್ಮಶಾನಗಳನ್ನು ಉದ್ಘಾಟಿಸುವ ಕೆಲಸ ನಡೆಯುತ್ತಿದೆ. ಈ ಮೊದಲೇ ಹೊಸ ಆಸ್ಪತ್ರೆಗಳ ಉದಘಾಟನೆಯನ್ನು ಮಾಡಿದ್ದರೆ, ಇಂದು ಈ ಪರಿಸ್ಥಿತಿ ಖಂಡಿತವಾಗಿಯೂ ಬರುತ್ತಿರಲಿಲ್ಲ. 

Previous Post

ಕೋವಿಡ್‌ 2ನೇ ಅಲೆಗೆ ತತ್ತರಿಸಿರುವ ಭಾರತಕ್ಕೆ ನೆರವು ಘೋಷಿಸಿದ ಅಮೇರಿಕಾ: ಕನ್ನಡದಲ್ಲಿ ಟ್ವೀಟ್‌ ಮಾಡಿದ ರಾಯಭಾರಿ ಕಚೇರಿ

Next Post

ರಾಜ್ಯಾದ್ಯಂತ 14 ದಿನ ಕೋವಿಡ್ ಕರ್ಫ್ಯೂ: ಲಿಕ್ಕರ್‌ಗೆ ಇಲ್ಲ ಬ್ರೇಕ್

Related Posts

Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
0

ಹಾಸನ ಜಿಲ್ಲೆಯ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ರಾಜ್ಯದಲ್ಲಿ ಮೂರು ಸಾವಿರ ಅಕ್ರಮ ಪಂಪ್ ಸೆಟ್ ಗಳ ಸಕ್ರಮ ಕೃಷಿ ಫೀಡರ್ ಗಳನ್ನು ಸೌರೀಕರಣಗೊಳಿಸಿ ರೈತರ...

Read moreDetails

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025
Next Post
ರಾಜ್ಯಾದ್ಯಂತ 14 ದಿನ ಕೋವಿಡ್ ಕರ್ಫ್ಯೂ: ಲಿಕ್ಕರ್‌ಗೆ ಇಲ್ಲ ಬ್ರೇಕ್

ರಾಜ್ಯಾದ್ಯಂತ 14 ದಿನ ಕೋವಿಡ್ ಕರ್ಫ್ಯೂ: ಲಿಕ್ಕರ್‌ಗೆ ಇಲ್ಲ ಬ್ರೇಕ್

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada