Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ : ಸಿದ್ದರಾಮಯ್ಯ

ಪ್ರತಿಧ್ವನಿ

ಪ್ರತಿಧ್ವನಿ

March 23, 2023
Share on FacebookShare on Twitter

ಬೆಂಗಳೂರು: ಮಾ.23: ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ. ಜಾಹಿರಾತುಗಳ ಮೂಲಕ ಸುಳ್ಳು ಪ್ರಕಟಣೆಗಳನ್ನು ನಿರುದ್ಯೋಗಿ ಯುವಜನರಿಗೆ ಅವಮಾನ ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಹೆಚ್ಚು ಓದಿದ ಸ್ಟೋರಿಗಳು

Chetan Ahimsa : ಕುಸ್ತಿಪಟುಗಳ ಬಗ್ಗೆ ಏಕಿಷ್ಟು ಮೌನ?

Anil Kumble stands in support of wrestlers : ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಅನಿಲ್‌ ಕುಂಬ್ಳೆ..!

Minister HC Mahadevappa : ನಮ್ಮ ʼಗ್ಯಾರೆಂಟಿʼಯನ್ನು ನೋಡಿ ಜನ ಕಾಂಗ್ರೆಸ್ ಗೆ ಬಹುಮತ ನೀಡಿದ್ದಾರೆ ; ಸಚಿವ .ಹೆಚ್.ಸಿ.ಮಹದೇವಪ್ಪ

ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳಿಗೆÉ ಒಂದು ಗುಲಗಂಜಿಯಷ್ಟಾದರೂ ನಾಚಿಕೆ ಇದೆಯೆ ಎಂದು ನನಗೆ ಅನುಮಾನವಾಗಿದೆ. ಜನರ ತೆರಿಗೆ ಹಣವನ್ನು ಬಳಸಿ ಜಾಹಿರಾತುಗಳ ಮೂಲಕ ಸುಳ್ಳುಗಳನ್ನು ಮಾರಾಟ ಮಾಡುವ ಹೀನಾತಿಹೀನ ರಾಜಕೀಯವನ್ನು ಬಿಜೆಪಿ ಸರ್ಕಾರಗಳು ಮಾಡುತ್ತಿವೆ. ಕೋಟಿಗಟ್ಟಲೆ ವೆಚ್ಚದ ಜಾಹಿರಾತುಗಳನ್ನು ಪ್ರತಿನಿತ್ಯ ಬಿಡುಗಡೆ ಮಾಡಲಾಗುತ್ತಿದೆ.

ನಾನು ಜಾಹಿರಾತುಗಳನ್ನು ಕೊಡಬೇಡಿ ಎಂದು ಹೇಳುತ್ತಿಲ್ಲ. ಆದರೆ ಸತ್ಯಸಂಗತಿಗಳನ್ನು ಮಾತ್ರ ಜನರಿಗೆ ಹೇಳಿ ಎಂದಷ್ಟೆ ಆಗ್ರಹ ಮಾಡುತ್ತಿದ್ದೇನೆ. ನಿರುದ್ಯೋಗದ ವಿಷಯದಲ್ಲೂ ಹೀಗೆಯೆ ಆಗಿದೆ.

ರಾಜ್ಯ ಸರ್ಕಾರ ದಿನಾಂಕ 22-3-2023 ರಂದು ಯುಗಾದಿಯ ದಿನ ಬಿಡುಗಡೆ ಮಾಡಿರುವ ಜಾಹಿರಾತಿನಲ್ಲಿ 68.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿಕೊಂಡಿದೆ. ಹಾಗಿದ್ದರೆ ವಾಸ್ತವದಲ್ಲಿ ನಿರುದ್ಯೋಗ ಕಡಿಮೆಯಾಗಬೇಕಿತ್ತಲ್ಲ? ಆಗಿದೆಯಾ? ಎಲ್ಲಿ ಹುಡುಕಿದರೂ ಉದ್ಯೋಗ ಸಿಗುತ್ತಿಲ್ಲವೆಂದು ಲಕ್ಷಾಂತರ ಯುವಜನರು ಉದ್ಯೋಗ ಹುಡುಕುವುದನ್ನೆ ನಿಲ್ಲಿಸಿದ್ದಾರೆ.

ನಿರುದ್ಯೋಗದ ಬಗ್ಗೆ ಅಧಿಕೃತವಾಗಿ ಹಲವು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಅದರಲ್ಲಿ ಮುಖ್ಯವಾಗಿ ಸಿಎಂಐಇ (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ) ಕೂಡ ಒಂದು.. ಈ ಸಂಸ್ಥೆಯು ಬಿಡುಗಡೆ ಮಾಡಿರುವ ದಾಖಲೆಗಳನ್ನು ನೋಡಿದರೆ ರಾಜ್ಯದ ನಿರುದ್ಯೋಗದ ಪ್ರಮಾಣ ಭಯ ಹುಟ್ಟಿಸುತ್ತದೆ.

ಸಿಎಂಐಇ ಸಂಸ್ಥೆ ಪ್ರತಿ ದಿನದ ನಿರುದ್ಯೋಗದ ಪ್ರಮಾಣವನ್ನು ಬಿಡುಗಡೆ ಮಾಡುವ ಜತೆಗೆ ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ಸಮಗ್ರವಾದ ಉದ್ಯೋಗ ಮತ್ತು ನಿರುದ್ಯೋಗದ ಚಿತ್ರಣಗಳನ್ನು ನೀಡುತ್ತದೆ. ಈ ಸಂಸ್ಥೆಯ ಅಂಕಿಅಂಶಗಳನ್ನು ಸರ್ಕಾರದ ಇಲಾಖೆಗಳು ಹಾಗೂ ಮಾಧ್ಯಮಗಳು ಬಳಸುತ್ತವೆ.

ಹಾಗಾಗಿ ಈ ಸಂಸ್ಥೆಯ ಅಂಕಿಅಂಶಗಳಿಗೆ ಅಧಿಕೃತತೆ ಇದೆ. ಸಿಎಂಐಇ ಸಂಸ್ಥೆಯ ಪ್ರಕಾರ 2022 ರಲ್ಲಿ ಕಾರ್ಮಿಕರ ಪಾಲ್ಗೊಳ್ಳುವಿಕೆಯ ಒಟ್ಟಾರೆ ಪ್ರಮಾಣವು ಶೇ.37.88 ರಷ್ಟಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ ಒಟ್ಟು ದುಡಿಮೆ ಮಾಡಲು ಬಯಸುವವರ ಸಂಖ್ಯೆ 2.49 ಕೋಟಿ ಎಂದು ಅಂದಾಜು ಮಾಡಿದ್ದಾರೆ. ಆದರೆ, ಯಾವುದೊ ಒಂದು ಉದ್ಯೋಗ ಲಭಿಸಿರುವುದು ಕೇವಲ 2.1 ಕೋಟಿ ಜನರಿಗೆ ಮಾತ್ರ. ಸುಮಾರು 30 ಲಕ್ಷ ಜನರಿಗೆ ಯಾವ ಉದ್ಯೋಗವೂ ಇಲ್ಲದೆ ಪರದಾಡುತ್ತಿದ್ದಾರೆ.

ಉದ್ಯೋಗವೇ ಸಿಗುತ್ತಿಲ್ಲವೆಂದು ಉದ್ಯೋಗಕ್ಕಾಗಿ ಹುಡುಕಾಟ ನಿಲ್ಲಿಸಿರುವವರ ಸಂಖ್ಯೆ 23.71 ಲಕ್ಷ. ಉದ್ಯೋಗ ಸಿಗುತ್ತದೆ ಎಂಬ ಭರವಸೆಯನ್ನು ಕಳೆದುಕೊಂಡಿರುವ ಯುವಶಕ್ತಿಗೆ ಬಿಜೆಪಿ ಸರ್ಕಾರಗಳು ಏನು ಮಾಡಿವೆ? 67.9 ಲಕ್ಷ ಉದ್ಯೋಗ ಸೃಷ್ಟಿಸಿದ್ದೇವೆ ಎಂದು ಹೇಳಿಕೆ ನೀಡುವವರು ಯಾವ ಯಾವ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಮಾಡಿದ್ದೇವೆ ಎಂದೂ ಸಹ ಹೇಳಬೇಕಲ್ಲ?

ಈ ಕುರಿತು ಅಧಿಕೃತ ದಾಖಲೆಗಳನ್ನು ಬಿಡುಗಡೆ ಮಾಡಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ಉದ್ಯೋಗಕ್ಕಾಗಿ ಹುಡುಕಾಟ ಮಾಡುತ್ತಿರುವವರು ಮತ್ತು ಉದ್ಯೋಗವನ್ನು ಹುಡುಕಿ ಹುಡುಕಿ ಬೇಸತ್ತು ಹುಡುಕಾಟ ನಿಲ್ಲಿಸಿರುವವರನ್ನು ಒಟ್ಟಾಗಿ ಸೇರಿಸಿದರೆ ಅದನ್ನು ಗ್ರೇಟರ್ ಅನ್‍ಎಂಪ್ಲಾಯ್‍ಮೆಂಟ್ ರೇಟ್ ಎಂದು ಕರೆಯುತ್ತಾರೆ.

ಈ ಗ್ರೇಟರ್ ಅನ್‍ಎಂಪ್ಲಾಯ್‍ಮೆಂಟ್ ದರವು 2022 ರ ಏಪ್ರಿಲ್‍ನಿಂದ ಡಿಸೆಂಬರ್‍ವರೆಗೆ ಶೇ. 11.73 ರಷ್ಟಿದೆ. ನಗರ ಪ್ರದೇಶದಲ್ಲಿ ಇದರ ಪ್ರಮಾಣ 15.12 ರಷ್ಟು ಇದೆ. ಇದೇ ಅವಧಿಯಲ್ಲಿ ಮಹಿಳೆಯರಲ್ಲಿ ಗ್ರೇಟರ್ ಅನ್‍ಎಂಪ್ಲಾಯ್‍ಮೆಂಟ್ ದರವು ಶೇ.58.55 ರಷ್ಟಿದೆ. ನಿರುದ್ಯೋಗದ ಪ್ರಮಾಣ ಈಗ ಮಾತ್ರ ಹೆಚ್ಚಾಗಿದೆಯಾ, ಹಿಂದೆಯೂ ಇದೇ ಸ್ಥಿತಿ ಇತ್ತೇ ಎನ್ನುವುದನ್ನು ಪರಿಶೀಲಿಸಲಿಕ್ಕಾಗಿ ನಾನು ಸಿಎಂಐಇ ಸಂಸ್ಥೆಯವರು ಬಹಿರಂಗಪಡಿಸಿದ 2018 ರ ಜನವರಿಯಿಂದ ಏಪ್ರಿಲ್‍ವರೆಗಿನ ನಮ್ಮ ಸರ್ಕಾರದ ಅವಧಿಯ ಅಂಕಿ ಅಂಶಗಳನ್ನು ಗಮನಿಸಿದೆ.

2017-2018 ರಲ್ಲಿ ಕಾರ್ಮಿಕರ ಪಾಲ್ಗೊಳ್ಳುವಿಕೆಯ ಪ್ರಮಾಣವು ಶೇ.46.7 ರಷ್ಟಿತ್ತು. ಇದಕ್ಕೆ ಹೋಲಿಸಿದರೆ 2022ರ ಸೆಪ್ಟೆಂಬರ್‍ವರೆಗಿನ ಡಿಸೆಂಬರ್ ಅವಧಿಯಲ್ಲಿ ಶೇ.37.88 ಕ್ಕೆ ಕಾರ್ಮಿಕರ ಪಾಲ್ಗೊಳ್ಳುವಿಕೆ ಪ್ರಮಾಣವು ಕುಸಿತ ಕಂಡಿದೆ. 2018 ರಲ್ಲಿ ಗ್ರೇಟರ್ ಅನ್‍ಎಂಪ್ಲಾಯಿಂಟ್ ದರವು 4.42ರಷ್ಟಿತ್ತು. ಅದು 2022 ರಲ್ಲಿ 11.73 ರಷ್ಟಿದೆ. ನಮ್ಮ ಸರ್ಕಾರದ ಅವಧಿಗೆ ಹೋಲಿಸಿದರೆ ಶೇ.7.3 ರಷ್ಟು ನಿರುದ್ಯೋಗ ಹೆಚ್ಚಾಗಿದೆ.

2018ರಲ್ಲಿ ನಗರ ಪ್ರದೇಶದ ಗ್ರೇಟರ್ ಅನ್‍ಎಂಪ್ಲಾಯಿಂಟ್ ದರವು ಶೇ.6.18 ರಷ್ಟಿತ್ತು. 2022 ರ ಕಡೆಯ ನಾಲ್ಕು ತಿಂಗಳುಗಳಲ್ಲಿ ಈ ಪ್ರಮಾಣವು ಶೇ.12ಕ್ಕೆ ಏರಿಕೆ ಕಂಡಿದೆ. ನಮ್ಮ ಸರ್ಕಾರದ ಅವಧಿಗೆ ಹೋಲಿಸಿದರೆ ಶೇ.8.49 ರಷ್ಟು ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದ ನಿರುದ್ಯೋಗದಲ್ಲಿ 2018 ರಲ್ಲಿ ಶೇ.3.31 ರಷ್ಟಿತ್ತು. 2022 ರಲ್ಲಿ ಇದು 9.22.ಕ್ಕೆ ಹೆಚ್ಚಳವಾಗಿದೆ.

ಮಹಿಳೆಯರ ನಿರುದ್ಯೋಗದ ವಿಚಾರದಲ್ಲಿ ನೋಡುವುದಾದರೆ 2018 ರಲ್ಲಿ ಗ್ರೇಟರ್ ಅನ್ ಎಂಪ್ಲಾಯಿಂಟ್ ದರವು ಶೇ.16.46 ರಷ್ಟಿದ್ದರೆ, 2022ರ ಸೆಪ್ಟೆಂಬರ್‍ನಿಂದ ಡಿಸೆಂಬರ್‍ವರೆಗೂ ಶೇ.58.55 ಕ್ಕೆ ಏರಿಕೆಯಾಗಿದೆ. ಅಂದರೆ ಶೇ.42 ರಷ್ಟು ಹೆಚ್ಚಳ ಕಂಡಿದೆ. ದೇಶದ ಮಹಿಳೆಯರ ಸರಾಸರಿ ನಿರುದ್ಯೋಗ ಪ್ರಮಾಣವು ಶೇ.28 ರಷ್ಟಿದೆ. ಆದರೆ ಕರ್ನಾಟಕದಲ್ಲಿ ಶೇ.58.55 ರಷ್ಟಿದೆ. ಇದನ್ನು ಪ್ರಗತಿ, ಬೆಳವಣಿಗೆ ಎಂದು ಕರೆಯಲು ಸಾಧ್ಯವೆ? ಮಹಾಪತನವನ್ನು ಮಹಾ ಬೆಳವಣಿಗೆ ಎಂದು ಹೇಳುವ ಆತ್ಮವಂಚಕತನ ಬೊಮ್ಮಾಯಿಯವರ ಸರ್ಕಾರಕ್ಕೆ ಯಾಕೆ ಬಂದಿದೆ?

ಈ ಮಟ್ಟದ ಭಯಾನಕ ಸ್ಥಿತಿ ರಾಜ್ಯದಲ್ಲಿದ್ದರೂ ಸಹ ರಾಜ್ಯ ಸರ್ಕಾರವು ವಾಸ್ತವ ಸಂಗತಿಗಳ ಮೇಲೆ ಜಾಹಿರಾತುಗಳ ಹೊದಿಕೆ ಹಾಕಿ ಸತ್ಯವನ್ನು ಮರೆಮಾಚಿ ನಿರುದ್ಯೋಗವನ್ನು ಕಡಿಮೆ ಮಾಡಿದ್ದೇವೆ, 67.9 ಲಕ್ಷ ಯುವಕರಿಗೆ ಉದ್ಯೋಗ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿ ಜನರನ್ನು ವಂಚಿಸಿದೆ. ಈ ಕುರಿತು ಬೊಮ್ಮಾಯಿಯವರ ಸರ್ಕಾರ ಸ್ಪಷ್ಟವಾದ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಮತ್ತು ಈ ಮಹಾ ಸುಳ್ಳಿನ ಕುರಿತು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ
ರಾಜಕೀಯ

ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

by Prathidhvani
May 27, 2023
Former Prime Minister HD DeveGowda | ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಭಾಗಿ
Top Story

Former Prime Minister HD DeveGowda | ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಭಾಗಿ

by ಪ್ರತಿಧ್ವನಿ
May 28, 2023
ಅನ್ಯಧರ್ಮದ ಯುವತಿ ಜೊತೆ ಸ್ನೇಹ : ಹಿಂದೂ ಪರ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ
ಕರ್ನಾಟಕ

ಅನ್ಯಧರ್ಮದ ಯುವತಿ ಜೊತೆ ಸ್ನೇಹ : ಹಿಂದೂ ಪರ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ

by Prathidhvani
May 26, 2023
Prisoner beat jailers for mutton curry : ಮಟನ್ ಕರಿಗಾಗಿ ಜೈಲರ್‌ಗಳಿಗೆ ಹೊಡೆದ ಕೈದಿ..!
Top Story

Prisoner beat jailers for mutton curry : ಮಟನ್ ಕರಿಗಾಗಿ ಜೈಲರ್‌ಗಳಿಗೆ ಹೊಡೆದ ಕೈದಿ..!

by ಪ್ರತಿಧ್ವನಿ
May 29, 2023
Actor Dhanush and Baba Ramdev : ನಟ ಧನುಷ್ ಮತ್ತು ಬಾಬಾ ರಾಮ​ದೇವ್ ಫೋಟೋ ಸಖತ್‌ ವೈರಲ್..!
Top Story

Actor Dhanush and Baba Ramdev : ನಟ ಧನುಷ್ ಮತ್ತು ಬಾಬಾ ರಾಮ​ದೇವ್ ಫೋಟೋ ಸಖತ್‌ ವೈರಲ್..!

by ಪ್ರತಿಧ್ವನಿ
May 30, 2023
Next Post
‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಬೇಕು’ : ಮುಸ್ಲಿಂ ವ್ಯಕ್ತಿಯ ವಿಡಿಯೋ ವೈರಲ್​

‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಬೇಕು’ : ಮುಸ್ಲಿಂ ವ್ಯಕ್ತಿಯ ವಿಡಿಯೋ ವೈರಲ್​

ಕಾಫಿನಾಡಿನಲ್ಲಿ ಕಾಂಗ್ರೆಸ್​ಗೆ ವಲಸಿಗರಿಂದ ಹೆಚ್ಚಿದ ಸಂಕಷ್ಟ : ಮಿತಿಮೀರಿದ ಬಂಡಾಯದ ಕೂಗು

ಕಾಫಿನಾಡಿನಲ್ಲಿ ಕಾಂಗ್ರೆಸ್​ಗೆ ವಲಸಿಗರಿಂದ ಹೆಚ್ಚಿದ ಸಂಕಷ್ಟ : ಮಿತಿಮೀರಿದ ಬಂಡಾಯದ ಕೂಗು

ಬಾದಾಮಿ ಕ್ಷೇತ್ರದತ್ತ ಸಿದ್ದರಾಮಯ್ಯ ಪ್ರವಾಸ : ಬಾದಾಮಿ ಜನತೆಯಲ್ಲಿ ಚಿಗುರೊಡೆದ ಉತ್ಸಾಹ

ಬಾದಾಮಿ ಕ್ಷೇತ್ರದತ್ತ ಸಿದ್ದರಾಮಯ್ಯ ಪ್ರವಾಸ : ಬಾದಾಮಿ ಜನತೆಯಲ್ಲಿ ಚಿಗುರೊಡೆದ ಉತ್ಸಾಹ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist