ಲಿವ್=ಇನ್-ರಿಲೇಷನ್ಶಿಪ್ನಲ್ಲಿದ್ದ ಪ್ರೇಯಸಿ ಶ್ರದ್ದಾ ವಾಲ್ಕರ್(26) ಹತ್ಯೆ ಪ್ರಕರಣ ಮಾಸುವ ಮುನ್ನವೇ ಮೆಹ್ರೌಲಿ ಹತ್ಯೆ ಪ್ರಕರಣವನ್ನ ಹೋಲುವ ಮೊತ್ತೊಂದು ಪ್ರಕರಣ ರಾಜಸ್ಥಾನದಲ್ಲಿ ವರದಿಯಾಗಿದೆ.
ತನ್ನ ಚಿಕ್ಕಮ್ಮನನ್ನ ಕೊಂದು ಆಕೆಯ ದೇಹದ ಭಾಗಗಳನ್ನ ತುಂಡು ತುಂಡಾಗಿ ಕತ್ತರಿಸಿ ದೆಹಲಿ ಹೆದ್ದಾರಿಯಲ್ಲಿ ಬಿಸಾಡಿರುವುದು ಪೊಲೀಸ್ ತನಿಖೆ ಮೂಲಕ ಬೆಳಕಿಗೆ ಬಂದಿದೆ.
ಆರೋಪಿ ಅನುಜ್ ಶರ್ಮಾ(33) ಅಲಿಯಾಸ್ ಅಚಿತ್ಯ ಗೋವಿಂದ್ ದಾಸ್ ಡಿಸೆಂಬರ್ 11ರಂದು ತನ್ನ ಚಿಕ್ಕಮ್ಮ ಸರೋಜ್ ಶರ್ಮಾ(65) ನನ್ನ ಸತ್ತಿಗೆಯಿಂದ ಹೊಡದು ಕೊಂದು ಪೊಲೀಸ್ ಠಾಣೆಗೆ ಕಾಣೆಯಾಗಿರುವ ಬಗ್ಗೆ ಸಂಬಂಧಿಕರ ಜೊತೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
![](https://pratidhvani.com/wp-content/uploads/2022/12/rajasthan--1024x576.jpg)
ಆರೋಪಿಯ ಚಲನವಲನವನ್ನ ಗಮನಿಸಿ ಸಂಶಯಗೊಂಡ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ವಿಚಾರ ಬೆಳಕಿಗೆ ಬಂದಿದ್ದ ತಪ್ಪೊಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ ಮತ್ತು ಡಿಸೆಂಬರ್ 11ರಂದು ತನ್ನ ಚಿಕ್ಕಮ್ಮನ ಶವವನ್ನ ಸೂಟ್ಕೇಶ್ನಲ್ಲಿ ಸಾಗಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆರೋಪಿ ಹತ್ಯೆ ನಡೆದ ದಿನ ಮನೆಯಲ್ಲಿ ಆಗಿದ್ದ ರಕ್ತದ ಕಲೆಯನ್ನು ತೊಳೆಯುತ್ತಿರುವುದನ್ನು ಆತನ ಸಂಬಂಧಿಕರು ಗಮನಿಸಿದ್ದು ಈ ಬಗ್ಗೆ ಪೊಲೀಸರ ಬಳಿ ತಮ್ಮ ಹೇಳಿಕೆಗಳನ್ನ ದಾಖಲಿಸಿದ್ದಾರೆ.
ಆರೋಪಿಯು ಶ್ರದ್ದಾ ವಾಲ್ಕರ್ ಹತ್ಯೆಯಿಂದ ಪ್ರೇರಣೆಗೊಂಡು ಈ ರೀತಿ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಮತ್ತು ದೇಹದ ಬಹುತೇಕ ಭಾಗಗಳನ್ನೆಲ್ಲಾ ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಪರಿಸ್ ಧೇಶ್ಮುಖ್ ತಿಳಿಸಿದ್ದಾರೆ.