ಭಾರತ ಹಿಂದೂ ರಾಷ್ಟ್ರವಾಗಿದ್ದು, ಇಲ್ಲಿ ಇರುವ ದೇವರು ಒಂದೇ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಬೆಂಗಳೂರಿಗೆ ಬುಧವಾರ ಭೇಟಿ ನೀಡಿದ್ದ ಅವರು, ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವೇಚ್ಛಾಚಾರ ವಿಶ್ವದಲ್ಲಿ ಬಹುದೊಡ್ಡ ಸಮಸ್ಯೆಯನ್ನು ಉಂಟು ಮಾಡಿದೆ. ಭಾಷೆ ಹಾಗೂ ಪೂಜೆಗಳು ಬೇರೆ ಬೇರೆ. ಆದರೆ ಸಮಸ್ಯೆಗಳು ಒಂದೇ ಆಗುತ್ತವೆ. ಶಿಕ್ಷೆಯಿಂದ ಬದಲಾವಣೆ ಅಸಾಧ್ಯ. ಬದುಕುವುದಕ್ಕಾಗಿ ಜೀವಿಸುವುದು ವ್ಯರ್ಥ. ಪರೋಪಕಾರಕ್ಕಾಗಿ ಬದುಕುವುದೇ ಶ್ರೇಷ್ಟ ಎಂದು ಅವರು ಹೇಳಿದರು.

ಆಧ್ಯಾತ್ಮಿಕ ಭಾರತ ಮಾತ್ರವೇ ಪ್ರಪಂಚದ ಸರ್ವಶ್ರೇಷ್ಟ ಭಾರತ. ಭಾರತ ಹಿಂದೂ ರಾಷ್ಟವಾಗಿದ್ದು, ಇಲ್ಲಿರುವ ದೇವರು ಒಂದೇ ಆಗಿದೆ. ಕೆಲವರು ಗೊಂದಲ ಮೂಡಿಸುತ್ತಾರೆ. ಸತ್ಯ, ಕರುಣೆ, ಪ್ರೇಮ ಭಾರತದ ಆತ್ಮವಾಗಬೇಕಿದೆ. ಒಳ್ಳೆಯ ಕೆಲಸ ಮಾಡಲು ಯಾರ ಅಂಜಿಕೆ, ಅಣತಿ ಬೇಕಿಲ್ಲ ಎಂದು ತಿಳಿಸಿದರು.






