• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಉತ್ಕೃಷ್ಟತೆಯ ಕೊರತೆಯಲ್ಲಿ ವಿಶ್ವವಿದ್ಯಾಲಯಗಳು..

ನಾ ದಿವಾಕರ by ನಾ ದಿವಾಕರ
April 28, 2023
in ಅಂಕಣ
0
ಉತ್ಕೃಷ್ಟತೆಯ ಕೊರತೆಯಲ್ಲಿ ವಿಶ್ವವಿದ್ಯಾಲಯಗಳು..
Share on WhatsAppShare on FacebookShare on Telegram

ಮೂಲ : ಪುಲಾಪ್ರೆ ಬಾಲಕೃಷ್ಣನ್‌

ADVERTISEMENT

Falling Short of Excellence – ಇಂಡಿಯನ್‌ ಎಕ್ಸ್‌ಪ್ರೆಸ್‌ 26-04-2023

ಅನುವಾದ : ನಾ ದಿವಾಕರ

ಇತ್ತೀಚಿನ ತಮ್ಮ ಲೇಖನವೊಂದರಲ್ಲಿ ಉನ್ನತ ಶಿಕ್ಷಣ ಇಲಾಖೆಯ ನಿವೃತ್ತ ಕಾರ್ಯದರ್ಶಿ ಆರ್‌ ಸುಬ್ರಮಣ್ಯಂ ಭಾರತದ ವಿಶ್ವವಿದ್ಯಾಲಯಗಳು ಏಕೆ ಹಿಂದುಳಿಯುತ್ತಿವೆ ಎಂಬ ವಿಚಾರವನ್ನು ಪ್ರಸ್ತಾಪಿಸಿದ್ದರು. ನಾಗರಿಕ ಸೇವಾಧಿಕಾರಿಗಳು ಸಾರ್ವಜನಿಕವಾಗಿ ವ್ಯಕ್ತಪಡಿಸುವ ಅಭಿಪ್ರಾಯಗಳು ಮುಖ್ಯವಾಗುವುದು ಏಕೆಂದರೆ ಅಧಿಕಾರಿ ವರ್ಗಗಳು ಭಾರತದ ಉನ್ನತ ಶಿಕ್ಷಣದ ಸಾರ್ವಜನಿಕ ಸಂಸ್ಥೆಗಳ ಕಾರ್ಯನಿರ್ವಹಣೆಯ ಮೇಲೆ ಮಹತ್ವದ ಪ್ರಭಾವವನ್ನು ಬೀರುತ್ತವೆ. ಭಾರತದಲ್ಲಿ ವಿಶ್ವಮಟ್ಟದ ವಿಶ್ವವಿದ್ಯಾಲಯಗಳನ್ನು ರೂಪಿಸಬೇಕಾದರೆ ಉತ್ತಮ ನಾಯಕತ್ವ ಅಗತ್ಯ ಎನ್ನುವುದನ್ನು ಗುರುತಿಸುತ್ತಾರೆ.  ಇದೇ ಗುರಿಯನ್ನು ಯುಜಿಸಿ ( ಪರಿಭಾವಿತ ವಿಶ್ವವಿದ್ಯಾಲಯಗಳೆಂದು ಪರಿಭಾವಿಸಲಾಗುವ ಉತ್ಕೃಷ್ಟ ಸಂಸ್ಥೆಗಳ) ನಿಯಂತ್ರಣ ಕಾಯ್ದೆ 2017ರಲ್ಲೂ ವ್ಯಕ್ತಪಡಿಸಲಾಗಿದೆ.  ಈ ಬಗ್ಗೆ ಯಾವುದೇ ತಕರಾರು ಇರಲು ಸಾಧ್ಯವಿಲ್ಲ. ಆದರೆ ಇಲ್ಲಿ ಎರಡು ಅಂಶಗಳು ಮುಖ್ಯವಾಗುತ್ತವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ನಿಯಂತ್ರಣದಲ್ಲಿರುವಂತಹ ವಿಶ್ವವಿದ್ಯಾಲಯಗಳಿಗೆ ಮುಖ್ಯಸ್ಥರನ್ನು ನೇಮಕ ಮಾಡುವಾಗ ಬೌದ್ಧಿಕವಾಗಿ ಉತ್ಕೃಷ್ಟರೆಂದು ಸಾಬೀತುಪಡಿಸಿದವರನ್ನು ನೇಮಿಸುತ್ತವೆಯೇ ? ವಾಸ್ತವ ಎಂದರೆ ಇಂತಹ ನೇಮಕಾತಿಗಳಲ್ಲಿ ಎಲ್ಲಕ್ಕಿಂತಲೂ ಹೆಚ್ಚಾಗಿ ನೇಮಕಗೊಳ್ಳುವವರ ರಾಜಕೀಯ ನಿಷ್ಠೆಯೇ ಮುಖ್ಯ ಮಾನದಂಡವಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಿಗೆ ನೇಮಿಸಲ್ಪಟ್ಟ ಮುಖ್ಯಸ್ಥರನ್ನು ಗಮನಿಸಿದಾಗ, ಉತ್ಕೃಷ್ಟ ಬೌದ್ಧಿಕ ಸಾಧನೆ ಅಥವಾ ಸಾಮರ್ಥ್ಯ ಹೊಂದಿರುವವರನ್ನು ಗುರುತಿಸುವುದು ಕಷ್ಟವಾಗುತ್ತದೆ. ಕೆಲವು ಅಪವಾದಗಳನ್ನು ಹೊರತುಪಡಿಸಿದರೆ, ದೇಶದಲ್ಲಿರುವ ಸಾವಿರಾರು ಖಾಸಗಿ ಶೈಕ್ಷಣಿಕ ಸಂಸ್ಥೆಗಳು ಉತ್ತಮ ದಾಖಲೆಗಳನ್ನು ಹೊಂದಿಲ್ಲ. ಎರಡನೆ ಅಂಶವೆಂದರೆ ಅತ್ಯುತ್ತಮ ನಾಯಕತ್ವ ಗುಣ ಇರುವವರೂ ಸಹ ಬಾಹ್ಯದಿಂದ ಹೇರಲಾಗುವ ಕಠಿಣ ನಿಯಮಗಳಿಂದ ನಿಯಂತ್ರಿಸಲ್ಪಡುವುದರಿಂದ ಹೆಚ್ಚಿನ ಸಾಧನೆ ಮಾಡಲಾಗುವುದಿಲ್ಲ. ಭಾರತದ ಉನ್ನತ ಶಿಕ್ಷಣದ ವಾತಾವರಣದಲ್ಲಿ ಈ ನಿಯಮಗಳು ಸರ್ವತ್ರ ಯುಜಿಸಿ ಮಾರ್ಗದರ್ಶನಗಳಲ್ಲಿಯೇ ಅಡಗಿವೆ.

ಭಾರತದ ವಿಶ್ವವಿದ್ಯಾಲಯಗಳು ಜಾಗತಿಕ ಸ್ತರದಲ್ಲಿ ಸ್ಪರ್ಧಾತ್ಮಕ ನೆಲೆಯಲ್ಲಿ ಸೆಣಸಬೇಕಾದರೆ, ಆಳ್ವಿಕೆಯಲ್ಲಿ ಕೆಲವು ವಿಶ್ವ ಮಾನದಂಡಗಳನ್ನು ಅಳವಡಿಸಿಕೊಳ್ಳುವುದೂ ಅತ್ಯವಶ್ಯ. ಈ ನಿಟ್ಟಿನಲ್ಲಿ ಭಾರತ ಹೇಗೆ ಜಾಗತಿಕ ಮಟ್ಟದ ಮಾನದಂಡಗಳಿಂದ ಹೊರತಾಗಿದೆ ಎನ್ನುವುದನ್ನು ಸೂಚಿಸಲು ಬಯಸುತ್ತೇನೆ.

ಬೋಧಕ ವರ್ಗವು ಎಲ್ಲ ಕಡೆಯಲ್ಲೂ ಬೋಧಿಸುವುದು ಮತ್ತು ಸಂಶೋಧನೆ ನಡೆಸುವುದು ಸಾಮಾನ್ಯ ಸಂಗತಿಯಾಗಿರುತ್ತದೆ.  ಆದರೆ ಭಾರತದಲ್ಲಿ ಈ ಎರಡೂ ಕ್ಷೇತ್ರಗಳ್ಳಿನ ಸಾಧನೆಗಳು ವೃತ್ತಿಪರ ಪರಿಷ್ಕರಣೆಗೆ ಒಳಗಾಗುವುದಿಲ್ಲ. ಬೋಧನೆಯ ಕ್ಷೇತ್ರದಲ್ಲಿ ನಮಗೆ ಏನು ಬೇಕು ಎನ್ನುವ ಪರಿವೆ ನಮಗಿದೆ. ಕೋರ್ಸ್‌ಗಳನ್ನು ವಿದ್ಯಾರ್ಥಿಗಳೇ ಅವುಗಳ ವಸ್ತು ಮತ್ತು ವೈಖರಿಯ ಮೌಲ್ಯಮಾಪನ ಮಾಡಬೇಕು. ಅಂತಹ ಮೌಲ್ಯ ಮಾಪನಗಳನ್ನೇ ಸಂಪೂರ್ಣವಾಗಿ ಅವಲಂಬಿಸುವುದನ್ನು ನಾವು ಅಪೇಕ್ಷಿಸುವುದಿಲ್ಲವಾದರೂ, ಅವುಗಳು ಬೋಧನೆಯನ್ನು ಅಳೆಯಲು ನಿರ್ಣಾಯಕ ಸಾಧನಗಳಾಗುತ್ತವೆ. ವಿದ್ಯಾರ್ಥಿ ಮೌಲ್ಯಮಾಪನ ಇಲ್ಲದಿರುವುದರಿಂದಲೇ, ಭಾರತದ ಬಹುತೇಕ ಸಂಸ್ಥೆಗಳಲ್ಲಿ ಬೋಧಕರು ಕಳಪೆಯಾಗಿ ಕಾರ್ಯನಿರ್ವಹಿಸಿದರೂ, ಬೋಧನೆಯನ್ನೇ ಮಾಡದಿದ್ದರೂ ತಪ್ಪಿಸಿಕೊಳ್ಳುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಾರೆ. ಸಂಶೋಧನೆಯ ಮೌಲ್ಯ ಮಾಪನ ಕಠಿಣ ಕೆಲಸವಾಗಿದ್ದು, ಪ್ರಸ್ತುತ ಅನುಸರಿಸಲಾಗುತ್ತಿರುವ ವಿಧಾನಗಳು ಜಾಗತಿಕವಾಗಿಯೂ ಪ್ರಶ್ನಾರ್ಹವಾಗಿಯೇ ಕಾಣುತ್ತವೆ. ಆದರೆ ಸ್ಪಷ್ಟವಾಗಿ ಹೇಳುವುದಾದರೆ  ಪ್ರಸ್ತುತ ಭಾರತದ ವಿಶ್ವವಿದ್ಯಾಲಯಗಳಲ್ಲಿ ಯುಜಿಸಿ ರೂಪಿಸಿರುವ ಬೌದ್ಧಿಕ ಸಾಧನೆಯ ಸೂಚಿಗಳನ್ನಾಧರಿಸಿದ ಮೌಲ್ಯಮಾಪನ ವಿಧಾನ (ಎಪಿಐ) ಸರಿಪಡಿಸಲಾಗದಷ್ಟು ಪ್ರಮಾದಗಳಿಂದ ಕೂಡಿದೆ.

ಪ್ರಕಟಿತ ಸಂಶೋಧನಾ ಪ್ರಬಂಧಗಳನ್ನು ಅದು ಎಲ್ಲಿ ಪ್ರಕಟವಾಗಿದೆ ಎನ್ನುವುದನ್ನು ಆಧರಿಸಿ ಶ್ರೇಣೀಕರಿಸುವುದು ತಪ್ಪು ಮಾದರಿಯಾಗಿದ್ದು, ಇದರಿಂದ ಸಂಶೋಧನೆಯು ಜ್ಞಾನ ಉತ್ಪಾದನೆಯ ಮೇಲೆ ಬೀರಿರಬಹುದಾದ ಪ್ರಭಾವವನ್ನು ಅಳೆಯಲು ಸಾಧ್ಯವಾಗುವುದಿಲ್ಲ. ಸಂಶೋಧನೆಯ ಫಲಿತಾಂಶಗಳನ್ನು ಅಂಕಿಗಳ ಮೂಲಕ ಶ್ರೇಣೀಕರಿಸುವುದನ್ನು ಕೈಬಿಟ್ಟು ಇನ್ನೂ ಹೆಚ್ಚಿನ ಸಮಗ್ರ ಧೋರಣೆಯನ್ನು ಅನುಸರಿಸಬೇಕಿದೆ. ಮೇಲಾಗಿ, ಎಪಿಐ ಪದ್ಧತಿಯ ವ್ಯಾಪ್ತಿಯಲ್ಲಿ ಪರಿಗಣಿಸಲಾಗುವ ಕೆಲವು ಚಟುವಟಿಕೆಗಳನ್ನು ಬೌದ್ಧಿಕ ಉತ್ಪನ್ನಗಳ ಮೌಲ್ಯಮಾಪನದಲ್ಲಿ ಪರಿಗಣಿಸಬೇಕೇ ಎನ್ನುವುದೂ ಸ್ಪಷ್ಟವಾಗಿಲ್ಲ. ಇದಲ್ಲದೆ ಈ ಶ್ರೇಣೀಕರಣವೇ ಭಾರತದ ವಿಶ್ವವಿದ್ಯಾಲಯಗಳ ಮೇಲೆ, ಅವುಗಳ ಸಮಯ ಹಾಗೂ ಸಂಪನ್ಮೂಲಗಳ ಮೇಲೆ ಅಪಾರ ಹೊರೆಯಾಗಿ ಪರಿಣಮಿಸಿವೆ. ಬೌದ್ಧಿಕ ಸಾಧನೆಗಳ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಜಾಗತಿಕ ಮಟ್ಟದ ಅತ್ಯುತ್ತಮ ವಿಧಾನಗಳು ಎಲ್ಲರಿಗೂ ತಿಳಿದಿದ್ದು, ಇದರಲ್ಲಿ ಅತ್ಯುತ್ತಮ ಅಂಶಗಳನ್ನು ಭಾರತ ಆಯ್ಕೆ ಮಾಡಿಕೊಳ್ಳಬೇಕಿದೆ. ಭಾರತದ ಬೌದ್ಧಿಕ ವಲಯವು ಅಂತಾರಾಷ್ಟ್ರೀಯ ಸ್ತರದಲ್ಲಿ ಸಮಾನ ನೆಲೆಯಲ್ಲಿ ಸ್ಪರ್ಧಿಸಬೇಕಾದರೆ ಇದು ಅತ್ಯವಶ್ಯ. ಭಾರತದ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಫಲಿತಾಂಶಗಳಲ್ಲಿ ನಿರ್ಣಾಯಕವಾಗಿ ಕಾಣುವುದು ಅನುದಾನದ ಪ್ರಮಾಣವಲ್ಲ ಬದಲಾಗಿ ಸಂಶೋಧನೆಯನ್ನು ನಿಯಂತ್ರಿಸುವ ನಿಯಮಗಳು.  ಕೆಲವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಾತ್ರವೇ ಅನುದಾನ ವ್ಯತ್ಯಾಸ ಉಂಟುಮಾಡುತ್ತದೆ. 

ಸುಧಾರಣೆಯ ಹಾದಿಯಲ್ಲಿ ಅಡ್ಡಿಯಾಗುವಂತಹ ಹಾಲಿ ಚಟುವಟಿಕೆಗಳ ಮತ್ತೊಂದು ಕ್ಷೇತ್ರ ಎಂದರೆ ಅಧ್ಯಯನ ಕೋರ್ಸ್‌ಗಳಿಗೆ ಪ್ರವೇಶ ಹಾಗೂ ಬೋಧಕರ ನೇಮಕಾತಿಯಲ್ಲಿ. ವಿದ್ಯಾರ್ಥಿಗಳ ಪ್ರವೇಶಾತಿ ಹಾಗೂ ಬೋಧಕರ ನೇಮಕಾತಿ ಎರಡೂ ಸಹ ಪೂರ್ವದಲ್ಲಿ ಅಧ್ಯಯನ ಮಾಡಿದ ವಿಷಯ ಹಾಗೂ ಪಡೆದ ಶ್ರೇಣಿ ಇವರೆಡರ ಕನಿಷ್ಠ ಅರ್ಹತೆಯನ್ನು ಅಪೇಕ್ಷಿಸುತ್ತದೆ. ಈ ವಿಷಯದಲ್ಲಿ ಯುಜಿಸಿ ಬೌದ್ಧಿಕ ಮಂಡಲಿಗಳಿಗೆ ಜವಾಬ್ದಾರಿ ವಹಿಸಿ, ಬೋಧಕರ ಆಯ್ಕೆಯಲ್ಲಿ ಬಾಹ್ಯ ಮೇಲ್ವಿಚಾರಣೆ ಇರುವಂತೆ ಎಚ್ಚರವಹಿಸಬೇಕಿದೆ. ಜಾಗತಿಕವಾಗಿ ನೋಡಿದಾಗ, ಈ ವಿಚಾರಗಳಲ್ಲಿ ಭಾರತದ ವಿಶ್ವವಿದ್ಯಾಲಯಗಳು ಕಠಿಣ ನಿಯಮಗಳ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವುದನ್ನು ಗುರುತಿಸಬಹುದು.  ಇದರಿಂದ ಪ್ರತಿಭಾ ಪಲಾಯನವಾಗುವುದನ್ನು, ಪ್ರತಿಭೆಯು ಪಶ್ಚಿಮ ರಾಷ್ಟ್ರಗಳ ವಿಶ್ವವಿದ್ಯಾಲಯಗಳೆಡೆಗೆ ಸಾಗುವುದನ್ನು ಗುರುತಿಸಬಹುದು. ನಿಯಂತ್ರಣ ಮತ್ತು ಆಳ್ವಿಕೆ ಇವೆರಡರ ನಡುವೆ ಇರುವ ವ್ಯತ್ಯಾಸವನ್ನು ಗಮನಿಸಲು ಇರುವ ಒಂದು ಮಾರ್ಗ ಎಂದರೆ, ನಿಯಂತ್ರಣ ಮಾರ್ಗವು ನಿರ್ಬಂಧಕವಾಗಿರುತ್ತದೆ, ಗುರಿ ತಲುಪಲು ನಿಯಂತ್ರಣ ಸಾಧಿಸಲೆತ್ನಿಸಲಾಗುತ್ತದೆ ಆದರೆ ಆಳ್ವಿಕೆಯ ಮಾರ್ಗದಲ್ಲಿ ಪ್ರಸ್ತುತ ಸ್ಥಿತ್ಯಂತರಗಳಲ್ಲಿ ಸುಧಾರಣೆಗಳನ್ನು ಅಳವಡಿಸಲು ಯೋಚಿಸಲಾಗುತ್ತದೆ. ವಸಾಹತು ಶಾಹಿಯಲ್ಲೇ ಉಗಮಿಸಿರುವ ಭಾರತದ ಅನೇಕ ಸಾರ್ವಜನಿಕ ಸಂಸ್ಥೆಗಳು ನಿಯಮಗಳನ್ನಾಧರಿಸಿದ ಅಧಿಕಾರಶಾಹಿಯ ನಿಯಂತ್ರಣದತ್ತಲೇ ಹೆಚ್ಚಿನ ಒಲವು ತೋರುತ್ತವೆ. ಹಾಗಾಗಿ ಗುಣಮಟ್ಟ ಸುಧಾರಿಸುವ ಬದಲಾವಣೆಗಳಿಗೆ ಹೆಚ್ಚಿನ ಉತ್ತೇಜನ ದೊರೆಯುವುದಿಲ್ಲ.

ಸುಬ್ರಮಣ್ಯಂ ಅವರು ತಮ್ಮ ಪ್ರಬಂಧದಲ್ಲಿ ಸೂಕ್ತವಾಗಿ ಹೇಳಿರುವಂತೆ ಭೌತಿಕ ಮೂಲ ಸೌಕರ್ಯಗಳೇ ಅತ್ಯುತ್ಕೃಷ್ಟ ಕೇಂದ್ರಗಳನ್ನು ಸೃಷ್ಟಿಸಲಾಗುವುದಿಲ್ಲ. ಜಾಗತಿಕ ಸಂಸ್ಥೆಗಳಿಗೆ ಹೋಲಿಸಿದರೆ ಭಾರತದ ವಿಶ್ವವಿದ್ಯಾಲಯಗಳು ಕಳಪೆ ಮಟ್ಟದಲ್ಲಿರುವುದರಲ್ಲಿ ನಿಯಮ ನಿಬಂಧನೆಗಳ ಪಾತ್ರವನ್ನು ನಾನು ಒತ್ತಿ ಹೇಳುತ್ತೇನೆ.  ಆದರೆ ಇವೆರಡೂ ಅಂಶಗಳಿಂದಾಚೆಗೂ ಕೆಲವು ವಿಚಾರಗಳಿದ್ದರೂ ಅವುಗಳನ್ನು ಸ್ಪಷ್ಟವಾಗಿ ವಿಷದೀಕರಿಸಲಾಗುವುದಿಲ್ಲ. ಆದರೆ ಗುರುತಿಸುವುದು ಸುಲಭ. ಈ ಹುರುಪಿನೊಂದಿಗೇ ವಿಶ್ವವಿದ್ಯಾಲಯಗಳನ್ನೂ ಸ್ಥಾಪಿಸಲಾಗಿದೆ. ವಿಶ್ವವಿದ್ಯಾಲಯಗಳು ಮೂಲತಃ ಜ್ಞಾನದ ಪ್ರಸರಣ ಹಾಗೂ ಅನುಸರಣೆಯ ಉದ್ದೇಶವನ್ನೇ ಹೊಂದಿರುತ್ತವೆ. ಇದು ಸಾಧ್ಯವಾಗಬೇಕಾದರೆ ಅನಿರ್ಬಂಧಿತ ಮುಕ್ತ ವಾಕ್‌ ಸ್ವಾತಂತ್ರ್ಯ ಅತ್ಯವಶ್ಯ. ಹಾಗೆಯೇ ತಮ್ಮದೇ ಆಯ್ಕೆಯ ಸಂಶೋಧನೆಯ ಅನುಸರಣೆಯೂ ಸಹ ಅವಶ್ಯ. ಈ ಅನುಸರಣೆ ಪ್ರಜಾಸತ್ತಾತ್ಮಕ ನಿಯಮಗಳನ್ನು ಉಲ್ಲಂಘಿಸದಂತಿರಬೇಕಾಗುತ್ತದೆ. ವಿಶ್ವವಿದ್ಯಾಲಯದ ಈ ಗುಣಲಕ್ಷಣವನ್ನು ಪ್ರಭುತ್ವದ ಸೈದ್ಧಾಂತಿಕ ಬೇಕು ಬೇಡಗಳ ಬಂಧಿಯಾಗಿಸಕೂಡದು.

ಪಶ್ಚಿಮ ದೇಶಗಳ ವಿಶ್ವವಿದ್ಯಾಲಯಗಳು ಬಹುಮಟ್ಟಿಗೆ ಪ್ರಭುತ್ವದ ಹಸ್ತಕ್ಷೇಪದಿಂದ ಮುಕ್ತವಾಗಿರುತ್ತವೆ. ಸರ್ಕಾರಗಳ ಅನುದಾನ ಪಡೆದರೂ ಸಹ ಈ ಮುಕ್ತತೆಯನ್ನು ಹೊಂದಿರುವುದರಿಂದಲೇ ಈ ವಿಶ್ವವಿದ್ಯಾಲಯಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಕಾರಣಕ್ಕಾಗಿಯೇ ಭಾರತದ ಯುವ ಸಮೂಹ ಈ ವಿಶ್ವವಿದ್ಯಾಲಯಗಳತ್ತ ಧಾವಿಸುತ್ತದೆ. ಭಾರತದ ವಿಶ್ವವಿದ್ಯಾಲಯಗಳು ಅತಿಯಾದ ಒತ್ತಡಗಳನ್ನು ಎದುರಿಸುತ್ತವೆ. ಇವುಗಳನ್ನು ನಿರ್ವಹಿಸುವ ರಾಜಕೀಯ ವರ್ಗವು, ದೇಶದಿಂದ ಅತ್ಯಂತ ಪ್ರತಿಭಾವಂತರು ಹೊರಹೋಗುತ್ತಿರುವುದರಿಂದ ಉಂಟಾಗುವ ಸಂಭಾವ್ಯ ಅಪಾಯವನ್ನು ಮನಗಾಣದಾಗಿದ್ದಾರೆ. ವಿಶ್ವವಿದ್ಯಾಲಯಗಳಿಗೆ ಮೌಲ ಸೌಕರ್ಯಗಳಾಗಲೀ, ಕಠಿಣ ನಿಬಂಧನೆಗಳಾಗಲೀ ಮುಖ್ಯವಾಗುವುದಿಲ್ಲ ಬದಲಾಗಿ ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದಾಗ ಮಾತ್ರವೇ ವಿಶ್ವವಿದ್ಯಾಲಯಗಳು ಜ್ಞಾನದ ಉತ್ಪಾದನೆಯಲ್ಲಿ ಅತ್ಯುತ್ಕೃಷ್ಟತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ.

( ಮೂಲ ಲೇಖಕರು ಅರ್ಥಶಾಸ್ತ್ರದ ಪ್ರಾಧ್ಯಾಪಕರು ಅಶೋಕ ವಿಶ್ವವಿದ್ಯಾಲಯ, ಸೀನಿಯರ್‌ ಫೆಲೋ ಐಐಎಂ ಕಲ್ಲಿಕೋಟೆ )

Tags: Academic Performance IndicatorsBJPCongress PartyGlobal best practicesGloballyIndia’s public institutionsIndia’s universitiesIndia’s youth flockleadershippolitical class ignoresUGCUGC guidelinesನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪ
Previous Post

ಜೆಡಿಎಸ್​​ನಿಂದ ನನಗೆ ಮೋಸವಾಗಿದೆ: ಮುಳಬಾಗಿಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆದಿ ನಾರಾಯಣ

Next Post

ಕಾಂಗ್ರೆಸ್ ನೂರು ವರ್ಷದ ಸಂಸ್ಕೃತಿಯನ್ನು ಗಾಳಿಗೆ ತೂರಿದ್ದಾರೆ ಸಿಎಂ ಬೊಮ್ಮಾಯಿ

Related Posts

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
0

ಸರ್ಕಾರಿ ಶಾಲಾ ಕಾಲೇಜು ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ...

Read moreDetails

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

October 12, 2025
Next Post
ಕಾಂಗ್ರೆಸ್ ನೂರು ವರ್ಷದ ಸಂಸ್ಕೃತಿಯನ್ನು ಗಾಳಿಗೆ ತೂರಿದ್ದಾರೆ ಸಿಎಂ ಬೊಮ್ಮಾಯಿ

ಕಾಂಗ್ರೆಸ್ ನೂರು ವರ್ಷದ ಸಂಸ್ಕೃತಿಯನ್ನು ಗಾಳಿಗೆ ತೂರಿದ್ದಾರೆ ಸಿಎಂ ಬೊಮ್ಮಾಯಿ

Please login to join discussion

Recent News

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
Top Story

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada