ಭಾರತೀಯ ಖ್ಯಾತ ಗಾಲ್ಫ್ ತಾರೆ ಅದಿತಿ ಅಶೋಕ್ ತನ್ನ ಗಾಲ್ಫ್ ಕಿಟ್ ಬ್ಯಾಗ್ ಕಾಣೆಯಾಗಿದೆ ಎಂದು ಟ್ವೀಟ್ ,ಮಾಡಿದ್ದಾರೆ.
ಡೆಫ್ಲಿಂಪಿಕ್ಸ್ ಚಾಂಪಿಯನ್ ಪ್ಯಾರಿಸ್‌ನ ಚಾರ್ಲ್ಸ್ ಡಿ ಗಾಲ್ ವಿಮಾನ ನಿಲ್ದಾಣದಿಂದ ವಿಮಾನದಲ್ಲಿ ತನ್ನ ಗಾಲ್ಫ್ ಬ್ಯಾಗ್ ಕಾಣೆಯಾಗಿದೆ ಎಂದು ಟ್ವೀಟ್ ಮಾಡಿರುವ ಅದಿತಿ ಅಶೋಕ್, ಕೂಡಲೇ ಕ್ರಮ ಕೈಗೊಂಡು ತಕ್ಷಣವೇ ಪ್ರತಿಕ್ರಿಯಿಸಲು ವಿಮಾನಯಾನ ಸಂಸ್ಥೆಯನ್ನು ಕೇಳಿದ್ದಾರೆ ಮತ್ತು ಮುಂಬರುವ ಪಂದ್ಯಾವಳಿಗೆ ತಕ್ಷಣವೇ ಗಾಲ್ಫ್ ಕಿಟ್ ಅಗತ್ಯವಿದೆ ಎಂದು ಹೇಳಿದ್ದಾರೆ.
ಹೌದು, ಈ ಕುರಿತು ಟ್ವೀಟ್ ಮಡಿರುವ ಅದಿತಿ ಅಶೋಕ್, “ನಿಮ್ಮ ತಕ್ಷಣದ ಪ್ರತಿಕ್ರಿಯೆ ಬೇಕು airfrance (ಏರ್ ಫ್ರಾನ್ಸ್) ನನ್ನ ಗಾಲ್ಫ್ ಬ್ಯಾಗ್ ಸಿಡಿಜಿ (ಚಾರ್ಲ್ಸ್ ಡಿ ಗಾಲ್ ವಿಮಾನ ನಿಲ್ದಾಣದಿಂದ) ವಿಮಾನದಲ್ಲಿ ಕಾಣೆಯಾಗಿದೆ. ನಾನು ಈಗಾಗಲೇ DM ನಲ್ಲಿ ಬ್ಯಾಗ್ ಟ್ಯಾಗ್ ವಿವರಗಳನ್ನು ಹಂಚಿಕೊಂಡಿದ್ದೇನೆ. ನನಗೆ ಗಾಲ್ಫ್ ಟೂರ್ನಾಮೆಂಟ್ ಇರುವುದರಿಂದ ತಕ್ಷಣಕ್ಕೆ ಅವಶ್ಯಕತೆ ಇದೆ. ತಕ್ಷಣ ಪ್ರತಿಕ್ರಿಯಿಸಿ ಮತ್ತು ನಾಳೆಯೊಳಗೆ ನನ್ನ ಬ್ಯಾಗ್ ಬರುವುದನ್ನು ಖಚಿತಪಡಿಸಿಕೊಳ್ಳಿ. #MissingGolfBag,” ಭಾರತೀಯ ಗಾಲ್ಫ್ ತಾರೆ ಅದಿತಿ ಅಶೋಕ್ ಟ್ವೀಟ್ ಮಾಡಿದ್ದಾರೆ.