ಆರಂಭಿಕರಾದ ಸ್ಮೃತಿ ಮಂದಾನ ಮತ್ತು ಶೆಫಾಲಿ ಶರ್ಮ ಅವರ ಅಜೇಯ ಜೊತೆಯಾಟದ ನೆರವಿನಿಂದ ಭಾರತ ವನಿತೆಯರ ತಂಡ 10 ವಿಕೆಟ್ ಗಳಿಂದ ಶ್ರೀಲಂಕಾ ವನಿತೆಯರ ತಂಡವನ್ನು ಸೋಲಿಸಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0ಯಿಂದ ವಶಪಡಿಸಿಕೊಂಡಿದೆ.
ಪಲ್ಲೆಕಲ್ಲೆಯಲ್ಲಿ ಸೋಮವಾರ ನಡೆದ 2ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವನ್ನು 50 ಓವರ್ ಗಳಲ್ಲಿ 173 ರನ್ ಗಳಿಗೆ ಆಲೌಟ್ ಮಾಡಿದ ಭಾರತ ತಂಡ 25.4ಓವರ್ ಗಳಲ್ಲಿ ವಿಕೆಟ್ ಕಳೆದುಕೊಳ್ಳದೇ ಜಯಭೇರಿ ಬಾರಿಸಿತು.

ಶೆಫಾಲಿ ಶರ್ಮ 71 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 71 ರನ್ ಗಳಿಸಿದರೆ, ಸ್ಮೃತಿ ಮಂದಾನ 83 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 94 ರನ್ ಬಾರಿಸಿ ಔಟಾಗದೇ ಉಳಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ರಿಕುಲ್ ಸಿಂಗ್ ದಾಳಿಗೆ (28/4) ದಾಳಿಗೆ ತತ್ತರಿಸಿತು. ಆಮಾ ಕಾಂಚಾನ (47), ನೀಲಾಕ್ಷಿ ಡಿಸಿಲ್ವಾ (32) ಅನುಷಾ ಸಂಜೀವಿನಿ (25) ತಕ್ಕಮಟ್ಟಿಗೆ ಪ್ರದರ್ಶನ ನೀಡಿದರು.