ಅತಿಥೇಯ ನ್ಯೂಜಿಲೆಂಡ್ ವಿರುದ್ದ ಮಂಗಳವಾರ ನಡೆದ ಅಂತಿಮ T-20 ಪಂದ್ಯದಲ್ಲಿ ಸಮಬಲ ಸಾಧಿಸುವ ಮೂಲಕ ಭಾರತ ಸರಣಿಯನ್ನು ಗೆದ್ದಿದೆ.
ಮಳೆಭಾದಿತ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ವೇಗಿಗಳಾದ ಹರ್ಷ್ದೀಪ್ ಸಿಂಗ್(4-0-37-4) ಹಾಗೂ ಮೊಹಮ್ಮದ್ ಸಿರಾಜ್ (4-0-17-4) ದಾಳಿಗೆ ನಲುಗಿ 19.4 ಓವರ್ಗಳಲ್ಲಿ 160 ರನ್ಗಳಿಗೆ ಸರ್ವಪತನವಾಯಿತ್ತು.
ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ 9 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 75 ರನ್ಗಳನ್ನು ಗಳಿಸಿತ್ತು ಮತ್ತು ಈ ವೇಳೆಗೆ ಮಳೆ ಕಾಡಿದ ಕಾರಣ ಡಿಎಲ್ಎಸ್ ಮೂಲಕ ಭಾರತ ಸಮಬಲ ಸಾಧಿಸಿತ್ತು ಮತ್ತು T-20 ಸರಣಿಯನ್ನು ವಶಪಡಿಸಿಕೊಂಡಿತ್ತು.