ಪಹಲ್ಗಾಮ್ ಉಗ್ರರ ದಾಳಿಯ (Pahalgam terror attack) ನಂತರ ಇದೀಗ ಭಾರತ (India) ಕೈಗೊಳ್ಳುತ್ತಿರುವ ಒಂದೊಂದೇ ಕ್ರಮಗಳು ಪಾಕಿಸ್ತಾನಕ್ಕೆ (Pakistan) ಆತಂಕ ಹೆಚ್ಚಾದಂತೆ ಕಾಣುತ್ತಿದೆ.ಇನ್ನೆಲ್ಲಿ ಭಾರತ ತನ್ನ ಮೇಲೆ ಯುದ್ಧ ಶುರು ಮಾಡಿಬಿಡುತ್ತೋ ಅಂತ ಪಾಕಿಸ್ತಾನ ಕಂಗಾಲದಂತೆ ಕಾಣುತ್ತಿದೆ.

ಹೀಗಾಗಿ ಈ ಬಗ್ಗೆ ಸ್ವತಹ ಪಾಕಿಸ್ತಾನದ ಸಚಿವರಿಂದಲೆ ಹೇಳಿಕೆ ಬಿಡುಗಡೆಯಾಗಿದೆ.ಭಾರತ ಮುಂದಿನ 24- 36 ಗಂಟೆಯಲ್ಲಿ ಮಿಲಿಟರಿ ಆಪರೇಷನ್ (military Operation) ಮಾಡಲು ತೀರ್ಮಾನಿಸಿದೆ.ನಮಗೆ ನಮ್ಮ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿದೆ ಎಂದು ಪಾಕಿಸ್ತಾನದ ಸಚಿವ ಹೇಳಿಮೊಂಡಿದ್ದಾನೆ.

ಆದ್ರೆ ಮೊದಲು ಪೆಹಲ್ಗಾಮ್ ದಾಳಿಯ ಬಗ್ಗೆ ಮುಕ್ತವಾದ ಸ್ವತಂತ್ರ ಸಂಸ್ಥೆ ವಿಚಾರಣೆ ನಡೆಸಲಿ.ಪಾಕಿಸ್ತಾನ ಸಹ ಉಗ್ರರ ಚಟುವಟಿಕೆಯಿಂದ ತೊಂದರೆಗೀಡಾಗಿದೆ. ಈ ಹಿನ್ನಲೆ ಭಾರತ ಸುಖಾಸುಮ್ಮನೆ ಆರೋಪ ಮಾಡೊದು ಬೇಡ ಎಂದು ಈ ಸಚಿವ ಹೇಳಿದ್ದಾನೆ.
ಆ ಮೂಲಕ ಪಾಕಿಸ್ತಾನಕ್ಕೆ ಭಾರತದ ದಾಳಿಯ ಕುರಿತು ಯಾವ ರೀತಿ ಭಯ ಶುರುವಾಗಿದೆ ಎಂಬುದು ಪಾಕಿಸ್ತಾನದ ಈ ಸಚಿವನ ಹೇಳಿಕೆಯ ಮೂಲಕ ಪರೋಕ್ಷವಾಗಿ ಸಾಬೀತಾಗಿದ್ದು, ಭಾರತ ಮುಂದಿನ 36 ಗಂಟೆಗಳ ಒಳಗೆ ದಾಳಿ ಮಾಡುವ ಸಂಭವ ಹೆಚ್ಚಿದೆ .











