ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್ ಸಹಿತ 222 ರನ್ಗಳ ಗೆಲುವನ್ನು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಮೊದಲ ಇನಿಂಗ್ಸ್ ಎಂಟು ವಿಕೆಟ್ ನಷ್ಟಕ್ಕೆ 574 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಕೇವಲ 174 ರನ್ ಗಳಿಗೆ ತನ್ನೆಲ್ಲ ವಿಕೇಟ್ ಕಳೆದುಕೊಂಡಿತು.
ಭಾರತದ ಪರವಾಗಿ ರವಿಂದ್ರ ಜಡೇಜಾ ಐದು ವಿಕೆಟ್ ಹಾಗೂ ಬುಮ್ರಾ ಹಾಗೂ ಅಶ್ವಿನ್ ಅವರು ತಲಾ ಎರಡು ವಿಕೆಟ್ ಗಳನ್ನು ಪಡೆದರು. ಮೊಹಮ್ಮದ್ ಶಮಿ ಎರಡು ವಿಕೆಟ್ ಕಬಳಿಸುವ ಮೂಲಕ ಭಾರತದ ಗೆಲುವಿಗೆ ಕಾರಣಕರ್ತರಾದರು.
ಶ್ರೀಲಂಕಾ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಪಾತುಮ್ ನಿಸಂಕ ಅರ್ಧಶತಕ ಪೂರೈಸಿದರು. ಆದರೆ ಶ್ರೀಲಂಕಾದ ಇತರ ಬ್ಯಾಟರ್ಗಳು ಅವರಿಗೆ ಉತ್ತಮ ಜೊತೆಯಾಟ ನೀಡಲೇಇಲ್ಲ. ಪಾತುಮ್ ನಿಸಂಕ ಇತ್ತ ಉತ್ತಮ ಆಟ ಆಡುತ್ತಿದ್ದರೆ ಅತ್ತ ಶ್ರೀಲಂಕಾ ಇನ್ನೊಂದು ತುದಿಯಲ್ಲಿ ವಿಕೆಟ್ ಕಳೆದುಕೊಳ್ಳುತ್ತಲೇ ಇತ್ತು.
ಕೇವಲ ಮೂರೇ ದಿನಕ್ಕೆ ಟೆಸ್ಟ್ ಪಂದ್ಯ ಮುಕ್ತಾಯವಾಗಿದ್ದು ರೋಹಿತ್ ಶರ್ಮಾ ಸಹ ಈ ಅನಿರೀಕ್ಷಿತ ಗೆಲುವಿಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇಂದಿನ ಗೆಲುವು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರಿಗೆ ನೀಡಿದ ಕೊಡುಗೆ ಎಂದೇ ಬಣ್ಣಿಸಲ್ಪಟ್ಟಿದೆ.