ಭಾರತ-ನ್ಯೂಜಿಲೆಂಡ್ ವಿರುದ್ದದ ಎರಡನೇ ಏಕದಿನ ಪಂದ್ಯವು ಮಳೆಯ ಕಾರಣದಿಂದಾಗಿ ರದ್ದುಗೊಂಡಿದೆ.
ಸೆಡನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 4.5 ಓವ್‌ಗಳಿಗೆ 22 ರನ್ ಗಳಿಸಿದ ವೇಳೆ ಮಳೆ ಅಡಚಣೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು. ನಂತರ ಪಂದ್ಯವನ್ನ 29 ಓವರ್‌ಗಳಿಗೆ ಇಳಿಸಲಾಯಿತ್ತಾದರೂ ಭಾರತ 12.5 ಓವರ್‌ಗಳಲ್ಲಿ 89-1 ರನ್ ಗಳಿಸಿದ್ದ ವೇಳೆ ಮಳೆ ಶುರುವಾದ ಕಾರಣ ಪಂದ್ಯವನ್ನ ರದ್ದು ಮಾಡಲಾಯಿತು.
ನವಂಎಬರ್ 30 ಬುಧವಾರದಂದು ಕ್ರೈಸ್ಟ್‌ಚರ್ಚ್‌ನಲ್ಲಿ ಅಂತಿಮ ಏಕದಿನ ಪಂದ್ಯನಡೆಯಲಿದ್ದು ಭಾರತ ತಂಡ ಗೆದ್ದು ಸಮಲಬಲ ಸಾಧಿಸುವ ಹಂಬಲದಲ್ಲಿದೆ.
