ಆರಂಭಿಕ ಕೆ.ಎಲ್.ರಾಹುಲ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಸ್ಪೋಟಿಸಿದ ಆಕರ್ಷಕ ಅರ್ಧಶತಕದ ಫಲವಾಗಿ ಭಾರತ ಬಾಂಗ್ಲಾದೇಶಕ್ಕೆ 185 ರನ್ ಗುರಿ ನೀಡಿದೆ.
ಅಡಿಲೇಡ್ ಓವಲ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಕೆ.ಎಲ್.ರಾಹುಲ್ (50 ರನ್, 32 ಎಸೆತ, 3 ಬೌಂಡರಿ, 4 ಸಿಕ್ಸರ್), ಮಾಜಿ ನಾಯಕ ವಿರಾಟ್ ಕೊಹ್ಲಿ (64 ರನ್, 44 ಎಸೆತ, 8 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಫಲವಾಗಿ ಭಾರತ 6 ವಿಕೆಟ್ ನಷ್ಟಕ್ಕೆ 20 ಓವರ್ಗಳ ಕೋಟಾದಲ್ಲಿ 184 ರನ್ಗಳನ್ನು ಗಳಿಸಿದೆ.
ಬಾಂಗ್ಲಾದೇಶ ಪರ ಹಸನ್ ಮಹ್ಮದ್ (4-0-47-3), ಶಕೀಬ್ ಅಲ್ ಹಸನ್ (4-0-33-2) ಬಿಕೆಟ್ ಪಡೆದಿದ್ದಾರೆ.






