ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳಾದ ಡೇವಿಡ್ ಮಿಲ್ಲರ್(59 ರನ್, 46 ಎಸೆತ, 4 ಬೌಂಡರಿ, 3 ಸಿಕ್ಸರ್), ಎಡೆನ್ ಮರ್ಕ್ರಂ (52 ರನ್, 41 ಎಸೆತ, 6 ಬೌಂಡರಿ, 1 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ 19.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 137 ರನ್ ಗಳಿಸುವ ಮೂಲಕ T-20 ವಿಶ್ವಕಪ್ನಲ್ಲಿ ಭಾರತದ ಅಜೇಯ ಓಟಕ್ಕೆ ಬ್ರೇಕ್ ಬಿದ್ದಿದೆ.
ಪರ್ತ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕರ ವೈಫಲ್ಯದ ಹೊರತಾಗಿಯೂ ಸೂರ್ಯಕುಮಾರ್ ಯಾದವ್( 68 ರನ್, 40 ಎಸೆತ, 6 ಬೌಂಡರಿ, 3 ಸಿಕ್ಸರ್) ಅರ್ಧಶತಕದ ಫಲವಾಗಿ ಭಾರತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್‌ಗಳನ್ನು ಗಳಿಸಿತ್ತು.
ಭಾರತದ ಪರ ಬೌಲರ್ಗಳಾದ ಭುವನೇಶ್ವರ್ ಕುಮಾರ್ (3.4-0-21-0), ಹರ್ಶ್ದೀಪ್ ಸಿಂಗ್ (4-0-25-2), ಮೊಹಮ್ಮದ್ ಶಮಿ (4-0-13-1), ಹಾರ್ದಿಕ್ ಪಾಂಡ್ಯ (4-0-29-1) ಹಾಗೂ ಆರ್.ಅಶ್ವಿನ್ (4-0-43-1) ವಿಕೆಟ್ ಕಬಳಿಸಿದ್ದಾರೆ.






