ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರ (Pahalgam terror attack) ಭಾರತ ಪಾಕಿಸ್ತಾನದ (Pakistan) ವಿರುದ್ಧ ಪ್ರತೀಕಾರಕ್ಕೆ ಮುಂದಾಗಿದ್ದು, ಯಾವ ಕ್ಷಣದಲ್ಲಿ ಏನಾಗುತ್ತೋ ಎಂಬ ಭಯದಲ್ಲಿ ಪಾಕಿಸ್ತಾನ ದಿನ ದೂಡುತ್ತಿದೆ. ಹೀಗಾಗಿ ಪಾಕಿಸ್ತಾನ ಮಾಧ್ಯಮಗಳು ಭಾರತದ ಕಡೆ ನಿಗಾ ವಹಿಸಿವೆ.

ಇಸ್ರೇಲ್ ನ (Israel) ಮೊಸಾದ್ ಟೀಮ್ ಭಾರತದ ಜೊತೆಗೆ ಕೆಲಸ ಮಾಡ್ತಿದೆ. 25 ಮಂದಿಯ ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ಟೀಮ್ ಅಡ್ವಾನ್ಸ್ಡ್ ಟೆಕ್ ಜೊತೆಗೆ ಭಾರತದ ಜೊತೆಗೆ ಕೆಲಸ ಮಾಡುತ್ತಿದೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ.

ಹೌದು ಪಾಕಿಸ್ತಾನದಲ್ಲಿ ಸಮಸ್ಯೆ ಸೃಷ್ಟಿಸಲು ಭಾರತ ಇಸ್ರೇಲ್ ಕೆಲಸ ಮಾಡುತ್ತಿದೆ ಎಂದ ಪಾಕಿಸ್ತಾನದ ಸಾಮಾ ಟಿವಿ ವರದಿ ಮಾಡಿದೆ. ಭಾರತ ಐರನ್ ಡೋಮ್ ಟೆಕ್ನಾಲಜಿ ಅನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಪಾಕ್ ಮಾಧ್ಯಮ ಸಾಮಾ ಟಿವಿ ವರದಿ ಮಾಡಿದ್ದು, ಸದ್ಯ ಪಾಕಿಸ್ತಾನಕ್ಕೆ ಕನಸಿನಲ್ಲೂ ಭಾರತದ್ದೇ ಚಿಂತೆಯಾಗಿದೆ.