• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಅನಗತ್ಯ ವಿವಾದದ ಸುಳಿಯಲ್ಲಿ ಇಂಡಿಯಾ-ಭಾರತ – ಭಾಗ 2

ನಾ ದಿವಾಕರ by ನಾ ದಿವಾಕರ
September 10, 2023
in ಅಂಕಣ, ಅಭಿಮತ
0
ಅಂಕಣ | ಅನಗತ್ಯ ವಿವಾದದ ಸುಳಿಯಲ್ಲಿ ಇಂಡಿಯಾ-ಭಾರತ – ಭಾಗ 1
Share on WhatsAppShare on FacebookShare on Telegram

ದೇಶದ ಹೆಸರೂ ಸಹ ಭಾವನಾತ್ಮಕ ರಾಜಕಾರಣದ ಒಂದು ಅಸ್ತ್ರವಾಗುತ್ತಿರುವುದು ವಿಷಾದಕರ

ADVERTISEMENT

–ನಾ ದಿವಾಕರ

ಇಂಡಿಯಾ-ಭಾರತ ಸಾಂವಿಧಾನಿಕ ಬಿಕ್ಕಟ್ಟುಗಳು

ಇಂಡಿಯಾ ಎಂಬ ಪದದ ಮೂಲ ಧಾತುವನ್ನು ಅರೇಬಿಕ್‌ ಅಥವಾ ಪರ್ಷಿಯನ್‌ ಮೂಲದಲ್ಲಿ ಕಾಣಬಹುದು. ಇಂಡಸ್‌ ಎಂದು ಕರೆಯಲಾಗುತ್ತಿದ್ದ ಸಿಂಧು ನದಿಯ ದಕ್ಷಿಣ ಅಥವಾ ಪೂರ್ವಕ್ಕೆ ಇದ್ದ ಭೂ ಪ್ರದೇಶವನ್ನು ಇಂಡಿಯಾ ಎಂದು ಕರೆಯಲಾಗುತ್ತಿತ್ತು.  ಆಫ್ಘಾನ್‌ ಮತ್ತು ಮುಘಲರ ಆಳ್ವಿಕೆಯಲ್ಲಿ ಭಾರತೀಯ ಉಪಖಂಡದ ಉತ್ತರ ಭೂಪ್ರದೇಶಗಳನ್ನು ಹಿಂದುಸ್ತಾನ್‌ ಎಂದೇ ಕರೆಯಲಾಗುತ್ತಿತ್ತು.  ಆನಂತರ ಬ್ರಿಟೀಷ್‌ ವಸಾಹತು ಆಳ್ವಿಕೆಯಲ್ಲಿ ಇಡೀ ಭೂಪ್ರದೇಶವನ್ನು ಇಂಡಿಯಾ ಎಂದು ಗುರುತಿಸಲಾಯಿತು.  ಇದೇ ಸಂದರ್ಭದಲ್ಲಿ ಭಾರತದ ಪ್ರಾಚೀನ ನಾಗರಿಕತೆಯ ಪುನರುತ್ಥಾನವನ್ನು ಬಯಸಿದ್ದ ಕೆಲವು ವಿದ್ವಾಂಸರು, ಗುಂಪುಗಳು ವಿದೇಶಿಯರು ನೀಡಿದ ಈ ಹೆಸರನ್ನು ಒಪ್ಪಲು ನಿರಾಕರಿಸಲಾರಂಭಿಸಿದ್ದರು. ಆ ಸಂದರ್ಭದಲ್ಲೇ ಭರತ ಖಂಡ ಎಂಬ ಮೂಲಧಾತುವಿನಿಂದ ಉಗಮಿಸಿದ ಭಾರತ್‌ ಎಂಬ ಪದವೂ ಚಾಲ್ತಿಗೆ ಬಂದಿತ್ತು.  ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಮುಂತಾದವರು ಹೆಚ್ಚು ಸಮನ್ವಯದ ಸಂಕೇತವಾಗಿ ಹಿಂದ್‌ ಪದವನ್ನು ಬಳಸುವಂತೆ ಆಗ್ರಹಿಸಿದ್ದರು. ಈಗಲೂ ಸಹ ಜೈ ಹಿಂದ್‌ ಎಂಬ ಪದವನ್ನು ಭಾವನಾತ್ಮಕವಾಗಿ ಬಳಸಲಾಗುತ್ತಿದೆ.  Indus ಅಥವಾ ಸಿಂಧೂ ನದಿಯ ಚಾರಿತ್ರಿಕ ಅಸ್ಮಿತೆಯ ಹಿನ್ನೆಲೆಯಲ್ಲಿ ಬ್ರಿಟೀಷ್‌ ವಸಾಹತು ಸರ್ಕಾರ ಇಂಡಿಯಾ ಎಂಬ ಹೆಸರನ್ನು ಚಾಲ್ತಿಗೆ ತಂದಿತ್ತು. ಈಗ ಇದನ್ನು ನಿರಾಕರಿಸುವುದೆಂದರೆ ನಾವು ಸಿಂಧೂ ನದಿಯೊಡನೆ ಇರುವ ಪಾರಂಪರಿಕ ಸಂಬಂಧವನ್ನು ತೊಡೆದುಹಾಕಿದಂತೆಯೇ ಆಗುತ್ತದೆ.

ಈಗ ನರೇಂದ್ರ ಮೋದಿ ಸರ್ಕಾರ ಮತ್ತು ಸಂಘಪರಿವಾರ ಭಾರತ ಎಂಬ ಹೆಸರನ್ನೇ ಅಧಿಕೃತವಾಗಿ ಬಳಸುವ ಇರಾದೆ ತೋರುತ್ತಿದೆ. ಜಿ-20 ಶಿಖರ ಶೃಂಗಸಭೆಯ ಆಹ್ವಾನ ಪತ್ರಿಕೆಯಲ್ಲಿ President of Bharat ಎಂದು ಬಳಸಿರುವುದು ಇದನ್ನೇ ಸೂಚಿಸುತ್ತದೆ. ಇನ್ನು ಮುಂದೆ ಆಂತರಿಕವಾಗಿ ಆಂಗ್ಲಭಾಷೆಯ ಪತ್ರ ವ್ಯವಹಾರ ಹಾಗೂ ದಾಖಲೆಗಳಲ್ಲೂ ಸಹ ಇಂಡಿಯಾ ಬದಲು ಭಾರತ ಎಂದು ಬಳಸುವ ಸಾಧ್ಯತೆಗಳಿವೆ. ಆದರೆ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಹೀಗೆ ಮಾಡುವುದೇ ಆದರೆ ಅಧಿಕೃತವಾಗಿ ಇಂಡಿಯಾ ಎಂಬ ಹೆಸರನ್ನು ತೆಗೆದುಹಾಕಿ ಭಾರತ ಎಂದು ಸಂವಿಧಾನ ತಿದ್ದುಪಡಿಯ ಮೂಲಕ ದಾಖಲಿಸಬೇಕಾಗುತ್ತದೆ. ಇದಕ್ಕೆ ರಾಜ್ಯಗಳ ಪ್ರತಿರೋಧವೂ ವ್ಯಕ್ತವಾಗುವ ಸಾಧ್ಯತೆಗಳಿವೆ. ಲೋಕಸಭೆಯ ಮಾಜಿ ಮುಖ್ಯ ಕಾರ್ಯದರ್ಶಿ ಪಿ.ಡಿ.ಟಿ. ಆಚಾರ್ಯ ಅವರ ಅಭಿಪ್ರಾಯದಲ್ಲಿ ಸರ್ಕಾರವು ಒಂದು ವೇಳೆ ಸದನದಲ್ಲಿ ನಿರ್ಣಯ ಮಂಡಿಸುವ ಮೂಲಕ ಈ ರೀತಿಯ ಬದಲಾವಣೆಗೆ ಬಯಸಿದರೆ ಅದು ಕಾರ್ಯಸಾಧುವಾಗುದಿಲ್ಲ.

ಅಧಿಕೃತ ಹೆಸರನ್ನು ʼಇಂಡಿಯಾʼ ದಿಂದ ʼಭಾರತʼ ಎಂದು ಬದಲಾಯಿಸಬೇಕಾದರೆ ಸಂವಿಧಾನದ ಅನುಚ್ಛೇದ 1ರ ತಿದ್ದುಪಡಿ ಅವಶ್ಯವಾಗುತ್ತದೆ. ನಂತರ ಇಂಡಿಯಾ ಎಂದು ಎಲ್ಲೆಲ್ಲಿ ಬಳಸಲಾಗಿದೆಯೋ ಅಲ್ಲೆಲ್ಲಾ ಭಾರತ ಎಂದು ನಮೂದಿಸಬೇಕಾಗುತ್ತದೆ. ತತ್ಪರಿಣಾಮವಾಗಿ ಎಲ್ಲ ಅನುಚ್ಛೇದಗಳಲ್ಲೂ ಈ ಬದಲಾವಣೆ ಮಾಡಬೇಕಾಗುತ್ತದೆ. ಇದು ವಿದೇಶಗಳೊಡಗಿನ ವ್ಯವಹಾರಗಳಲ್ಲಿ ಮತ್ತು ದಾಖಲೆಗಳಲ್ಲೂ ಸಹ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತದೆ ಎಂದು ಪಿ.ಡಿ.ಟಿ. ಆಚಾರ್ಯ ಹೇಳುತ್ತಾರೆ. 2016ರಲ್ಲಿ ನ್ಯಾಯಮೂರ್ತಿ ಯು.ಯು.ಲಲಿತ್‌ ಮತ್ತು ಟಿ.ಎಸ್‌ ಠಾಕೂರ್‌ ಅವರನ್ನೊಳಗೊಂಡ ಸುಪ್ರೀಂಕೋರ್ಟ್‌ ಪೀಠವೂ ಸಹ ನಿರಂಜನ್‌ ಭಟ್ವಾಲ್‌ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸುತ್ತಾ “ ಭಾರತ ಅಥವಾ ಇಂಡಿಯಾ, ನೀವು ಭಾರತ್‌ ಎಂದು ಕರೆಯಲು ಬಯಸಿದರೆ ಹಾಗೆಯೇ ಮಾಡಿ, ಇತರರು ಇಂಡಿಯಾ ಎನ್ನಲು ಬಯಸಿದರೆ ಹಾಗೆ ಮಾಡಲಿ ” ಎಂದು ಹೇಳಿತ್ತು. ಆದರೆ ಅಧಿಕೃತವಾಗಿ ಇಂಡಿಯಾ ಹೆಸರನ್ನು ತೆಗೆದುಹಾಕಿ ಭಾರತ್‌ ಎಂದು ಹೆಸರಿಸುವ ಅವಶ್ಯಕತೆ ಇಲ್ಲ ಎಂದೂ ಸ್ಪಷ್ಟವಾಗಿ ಹೇಳಿತ್ತು.

ಚುನಾವಣಾ ರಾಜಕಾರಣ

ಈ ವಾಸ್ತವಗಳ ನಡುವೆಯೂ ಇಂಡಿಯಾ ಮತ್ತು ಭಾರತ‌ ಪದಬಳಕೆಯ ನಡುವೆ ಏರ್ಪಟ್ಟಿರುವ ವಾಗ್ವಾದಗಳ ಹಿಂದೆ ಚುನಾವಣಾ ರಾಜಕಾರಣದ ಛಾಯೆ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. 2024ರ ಮಹಾ ಚುನಾವಣೆಗಳಿಗೂ ಮುನ್ನ ಸಾಮಾನ್ಯ ಜನತೆಯ ಮುಂದಿಡಲು ಪಾಕಿಸ್ತಾನ, ರಾಮಮಂದಿರ, ಆರ್ಟಿಕಲ್‌ 370, ತ್ರಿವಳಿ ತಲಾಖ್‌, ಏಕರೂಪ ನಾಗರಿಕ ಸಂಹಿತೆ ಹೀಗೆ ಯಾವುದೇ ಭಾವನಾತ್ಮಕ ವಿಚಾರಗಳು ಹೆಚ್ಚು ಉಪಯುಕ್ತವಾಗುವುದಿಲ್ಲ. ಇದರಲ್ಲಿ ಕೆಲವು ವಿಷಯಗಳು ತಮ್ಮ ಅಸ್ತಿತ್ವ ಮತ್ತು ಪ್ರಸ್ತುತತೆಯನ್ನು ಕಳೆದುಕೊಂಡಿವೆ. ಈ ದೃಷ್ಟಿಯಿಂದ ನೋಡಿದಾಗ ಬಿಜೆಪಿ ʼಇಂಡಿಯಾʼ ಹೆಸರನ್ನು ಬದಲಿಸಿ ʼಭಾರತʼ ಎಂದು  ನಾಮಕರಣ ಮಾಡುವ ಆಲೋಚನೆಯನ್ನು ಹೊಂದಿರಬಹುದು. ತನ್ಮೂಲಕ ಸಾಮಾನ್ಯ ಜನರ ನಡುವೆ ʼ ಭಾರತ ʼ ಎಂಬ ಪದದ ಬಗ್ಗೆ ಇರುವ ಭಾವನಾತ್ಮಕ ಸಂಬಂಧವನ್ನು ಬಳಸಿಕೊಳ್ಳಬಹುದು. ಆದರೆ ಈಗಾಗಲೇ ವ್ಯಾಪಕವಾಗಿ ಬಳಕೆಯಲ್ಲಿರುವ ಭಾರತ ದೇಶದ ಯಾವುದೇ ಮೂಲೆಯಲ್ಲೂ ಅಪಥ್ಯ ಎನಿಸಿಕೊಂಡಿಲ್ಲ. ಹಾಗಾಗಿ ಬಿಜೆಪಿಯ ಈ ಭಾವನಾತ್ಮಕ ರಾಜಕಾರಣ ಫಲಕಾರಿಯಾಗದೆಯೂ ಹೋಗಬಹುದು.

ಪಿತೃಪ್ರಧಾನತೆ ಮತ್ತು ಊಳಿಗಮಾನ್ಯ ಧೋರಣೆಯ ಗಂಡಾಳ್ವಿಕೆಯ ಲಕ್ಷಣಗಳೇ ಬಹುಸಂಖ್ಯಾತವಾದಿ ಸಂಸದೀಯ ಬಹುಮತದ ಆಳ್ವಿಕೆಯನ್ನೂ ಆವರಿಸುವುದರಿಂದ, ಈ ಹೆಸರು ಬದಲಾವಣೆಯ ರಾಜಕಾರಣ ಮತ್ತಷ್ಟು ರೋಚಕ ತಿರುವುಗಳನ್ನು ಪಡೆದುಕೊಂಡರೂ ಅಚ್ಚರಿಪಡಬೇಕಿಲ್ಲ. ಸದ್ಯಕ್ಕೆ ಸಂವಿಧಾನವೇ ಹೇಳಿರುವಂತೆ  “ ಇಂಡಿಯಾ-ಅಂದರೆ ಭಾರತ ” ಎಂಬ ಅಧಿಕೃತ ಮಾನ್ಯತೆ ಪಡೆದಿರುವ ಸಂಬೋಧನೆ ಮತ್ತು ಬಳಕೆಯೇ ಚಾಲ್ತಿಯಲ್ಲಿರುವಾಗ ಈಗ ಎದ್ದಿರುವ ವಾಗ್ಯುದ್ಧ ಅನಗತ್ಯ ಎಂದೇ ಹೇಳಬಹುದು.

-೦-೦-೦

Tags: BharatBJPIndiaಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಸಿದ್ದರಾಮಯ್ಯ
Previous Post

ಬರ ಘೋಷಣೆಗೆ ಮುಹೂರ್ತ ನೋಡುತ್ತಿದ್ದೀರಾ ; ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ

Next Post

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ : ಬಸವರಾಜ ಬೊಮ್ಮಾಯಿ

Related Posts

ಈ ಸ್ವರ ಸಾಮ್ರಾಜ್ಞಿಗೂ ಸಾಟಿ ಯಾರೂ ಇಲ್ಲ
ಅಂಕಣ

ಈ ಸ್ವರ ಸಾಮ್ರಾಜ್ಞಿಗೂ ಸಾಟಿ ಯಾರೂ ಇಲ್ಲ

by ಪ್ರತಿಧ್ವನಿ
April 15, 2026
0

ನಾ ದಿವಾಕರ ಹಂ ದೋನೋ ಚಿತ್ರದ “ ಅಭೀ ನಾ ಜಾವೋ ಚೋಡ್‌ ಕರ್‌ ”, ಯಾದೋಂಕಿ ಬಾರಾತ್‌ ಚಿತ್ರದ “ ಚುರಾಲಿಯಾ ಹೈ ತುಮ್‌ ನೆ...

Read moreDetails
ಭಾರತದ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ: ಸವಾಲುಗಳು ಮತ್ತು ಸಾಧ್ಯತೆಗಳು.

ಭಾರತದ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ: ಸವಾಲುಗಳು ಮತ್ತು ಸಾಧ್ಯತೆಗಳು.

April 15, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್‌ ಎಲ್ಲಿದ್ದಾರೆ ?

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್‌ ಎಲ್ಲಿದ್ದಾರೆ ?

April 14, 2026
ಒಳದನಿಗೆ ಜೀವತುಂಬಿದ ʼ ಪ್ರತಿಧ್ವನಿ ʼ ಯೊಡನೆ- ನಾ ದಿವಾಕರ  ಲೇಖನ

ಒಳದನಿಗೆ ಜೀವತುಂಬಿದ ʼ ಪ್ರತಿಧ್ವನಿ ʼ ಯೊಡನೆ- ನಾ ದಿವಾಕರ  ಲೇಖನ

April 13, 2026
Next Post
ವಿದ್ಯುತ್​ ದರ ಹೆಚ್ಚಳ ವಿಚಾರ : ಕಾಂಗ್ರೆಸ್​ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಆಕ್ರೋಶ

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ : ಬಸವರಾಜ ಬೊಮ್ಮಾಯಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada