ಭಾರತ ಹಾಗೂ ಕೆನಡಾ (IND vs CAN) ಮಧ್ಯೆ ಇಂದು ಪಂದ್ಯ ನಡೆಯಬೇಕಿತ್ತು. ಆದರೆ, ವರುಣ ಅಡ್ಡಿ ಪಡಿಸಿದ್ದಾನೆ.
ಇದೊಂದು ಔಪಚಾರಿಕ ಪಂದ್ಯವಾಗಿತ್ತು. ಆದರೆ, ಒಂದೇ ಒಂದು ಎಸೆತ ಕಾಣದೆ ರದ್ದಾಗಿದೆ. ಈ ಪಂದ್ಯದಲ್ಲಿ ಟಾಸ್ ಕೂಡ ನಡೆಯಲು ಸಾಧ್ಯವಾಗದ ಕಾರಣ ಎರಡು ಬಾರಿ ಫೀಲ್ಡ್ ಪರಿಶೀಲಿಸಿದ ಅಂಪೈರ್ ಪಂದ್ಯ ರದ್ದುಗೊಳಿಸಿದರು.
ಭಾರತ ತಂಡ ಈಗಾಗಲೇ ಎ ಗುಂಪಿನಿಂದ ಸೂಪರ್ 8 ಸುತ್ತಿಗೆ ಪ್ರವೇಶಿಸಿದೆ. ಪಂದ್ಯದ ರದ್ದತಿಯಿಂದ ತಂಡದ ಸ್ಥಾನದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ ಕೆನಡಾ ವಿರುದ್ಧ ಭಾರತ ತಂಡದಲ್ಲಿ ಹೊಸಬರಿಗೆ ಅವಕಾಶ ಸಿಗುವ ಸಾಧ್ಯತೆ ಇತ್ತು. ಆದರೆ, ಬೆಂಚ್ ಸಾಮರ್ಥ್ಯ ಪರೀಕ್ಷಿಸಲು ಉತ್ತಮ ಅವಕಾಶ ಇಲ್ಲದಂತಾಯಿತು. ಭಾರತ ತಂಡ ಮುಂದಿನ ಪಂದ್ಯವನ್ನು ಸೂಪರ್ 8 ಸುತ್ತಿನಲ್ಲಿ ಆಡಲಿದೆ. ಅಲ್ಲಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಫ್ಘಾನಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ಜೂನ್ 20 ರಂದು ನಡೆಯಲಿದೆ.
ಎರಡನೇ ಪಂದ್ಯವನ್ನು ಗ್ರೂಪ್ ಡಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡದ ವಿರುದ್ಧ ಆಡಲಿದೆ. ಬಾಂಗ್ಲಾದೇಶ ಅಥವಾ ನೆದರ್ಲೆಂಡ್ಸ್, ಈ ಎರಡರಲ್ಲಿ ಒಂದು ತಂಡವಾಗಿರಲಿದೆ. ಇದಲ್ಲದೇ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧವೂ ಪಂದ್ಯ ಆಡಲಿದೆ. ಈ ಪಂದ್ಯ ಜೂನ್ 24 ರಂದು ನಡೆಯಲಿದೆ.
ಗ್ರೂಪ್ ಹಂತದಲ್ಲಿ ಭಾರತ ತಂಡವು ಸತತ ಮೂರು ಪಂದ್ಯಗಳನ್ನು ಗೆದ್ದಿತ್ತು. ನಾಲ್ಕನೇ ಪಂದ್ಯ ಮಳೆಗೆ ಯಾಹುತಿಯಾಗಿದೆ.