ಈ ಬಾರಿ ಯಾಕಿ RCB ನಸೀಬು ಸರಿ ಇಲ್ಲ ಅನ್ಸುತ್ತೆ. ಇನ್ನು ಐಪಿಎಲ್ (IPL 2025) ಸರಣಿ ಆರಂಭವಾಗಿಲ್ಲ. ಆದ್ರೆ ಅದಾಗಲೇ ಅಭಿಮಾನುಗಳು RCB ಮ್ಯಾನೇಜ್ಮೆಂಟ್ ವಿರುದ್ಧ ಸಾಲು ಸಾಲು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಐಪಿಎಲ್ 2025 ರ ಬಿಡ್ಡಿಂಗ್ ವೇಳೆ ಸರಿಯಾದ ಆಟಗಾರರನ್ನು ಬಿಡ್ ಮಾಡಲಿಲ್ಲ ಎಂಬ ಅಸಮಾಧಾನ ಇನ್ನು ಅಭಿಮಾನಿಗಳಲ್ಲಿದೆ. ಈ ಮಧ್ಯೆ ಈಗ RCB ಮ್ಯಾನೇಜ್ಮೆಂಟ್ ಮತ್ತೊಂದು ಯಡವಟ್ಟಿಂದ ಕನ್ನಡ ಅಭಿಮಾನಿಗಳು ಕೆರಳಿದ್ದಾರೆ.
ಹೌದು, ಸೋಶಿಯಲ್ ಮೀಡಿಯಾದಲ್ಲಿ (Social media) RCB ಹಿಂದಿ ಟ್ವಿಟ್ ಪೇಜ್ ಸದ್ದು ಮಾಡ್ತಿದೆ. ಇದಕ್ಕೆ ಕನ್ನಡ ಪರ ಹೋರಾಟಗಾರರು, ಅಭಿಮಾನಿಗಳು ಹಿಂದಿ ಟ್ವಿಟ್ ಪೇಜ್ (Rcb hindi tweet page) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಆಕ್ರೋಶ ಹೊರಹಾಕಿರುವ ಅಭಿಮಾನಿಗಳು, ನಾವು RCB ಗೆ ಬೆಂಬಲ ಕೊಡ್ತಿರೋದು ಬೆಂಗಳೂರು ಅನ್ನೋ ಹೆಸರಿಗೆ ಮಾತ್ರ. ಹಾಗಾಗಿ ಆದಷ್ಟು ಬೇಗ RCB ಹಿಂದಿ ಟ್ವಿಟ್ ಪೇಜ್‌ನ್ನು ಡಿಲೀಟ್ ಮಾಡುವಂತೆ ಆಗ್ರಹಿಸಿದ್ದಾರೆ.