ಶುಕ್ರವಾರ ಬಿಡುಗಡೆಯಾದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಒಂದೇ ದಿನದಲ್ಲಿ 12,847 ಕರೋನ ವೈರಸ್ ಸೋಂಕುಗಳು ಪತ್ತೆಯಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 4,32,70,577 ಕ್ಕೆ ಏರಿಯಾಗಿದೆ, ಸಕ್ರಿಯ ಪ್ರಕರಣಗಳು 63,063 ಕ್ಕೆ ಏರಿದೆ.
ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಅಂಕಿಅಂಶಗಳ ಪ್ರಕಾರ, 14 ಹೊಸ ಸಾವುಗಳನ್ನು ದಾಖಲಿಸಿದೆ, ಒಟ್ಟಾರೆ ಸಾವಿನ ಸಂಖ್ಯೆ 5,24,817 ಕ್ಕೆ ಏರಿಕೆಯಾಗಿದೆ.
ಸಕ್ರಿಯ ಪ್ರಕರಣಗಳು ಈಗ ಒಟ್ಟು ಸೋಂಕುಗಳ ಶೇಕಡಾ 0.15 ರಷ್ಟಿದ್ದರೆ, ದೇಶದ COVID-19 ಚೇತರಿಕೆ ದರವು ಶೇಕಡಾ 98.64 ತಷ್ಟಿದೆ ಎಂದು ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇನ್ನು ಸಾವಿನ ಪ್ರಮಾಣವು 1.21 ತಷ್ಟಿದೆ ಎಂದು ವರದಿಯಾಗಿದೆ.