
ಮಡಿಕೇರಿ:ಕೊಡಗು ಜಿಲ್ಲೆಯಲ್ಲಿ ಸಾಗುವಳಿ ಮಾಡಲಾಗುತ್ತಿರುವ ‘ಸಿ’ ಮತ್ತು ‘ಡಿ’ ಭೂಮಿಯನ್ನು ರೈತರಿಂದ ಕಸಿದು ಅರಣ್ಯ ಇಲಾಖೆಗೆ ನೀಡಬಾರದು ಹಾಗೂ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ರೈತ ಹೋರಾಟ ಸಮಿತಿ ಹಾಗೂ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಸಾವಿರಾರು ಮಂದಿ ರೈತರು ಮಡಿಕೇರಿಯಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.

ನಗರದ ಫೀ.ಮಾ. ಕಾರ್ಯಪ್ಪ ವೃತ್ತದಿಂದ (ಸುದರ್ಶನ ವೃತ್ತ) ಆರಂಭಗೊoಡ ಪ್ರತಿಭಟನಾ ಮೆರವಣಿಗೆ ಜ. ತಿಮ್ಮಯ್ಯ ವೃತ್ತಕ್ಕೆ ಸಾಗಿ ಅನಂತರ ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ಅಜ್ಜಮಾಡ ದೇವಯ್ಯ ವೃತ್ತಕ್ಕೆ ತೆರಳಿತು. ಪ್ರತಿಭಟನಾನಿರತರು ಪ್ರತಿ ವೃತ್ತದಲ್ಲೂ ಮಾನವ ಸರಪಳಿ ರಚಿಸಿ ಸರಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿ ತಮ್ಮ ಅಸಮಾಧಾನ ಹೊರಹಾಕಿದರು. ಬಳಿಕ ಗಾಂಧಿ ಮೈದಾನದಲ್ಲಿ ಪ್ರತಿಭಟನಾಕಾರರು ಜಮಾವಣೆಗೊಂಡು ಬಹಿರಂಗ ಸಮಾವೇಶ ನಡೆಸಿದರು.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸೇರಿದಂತೆ ಜಿಲ್ಲೆಯ ಅನೇಕ ರೈತ ಸಂಘಗಳು, ಸಾಮಾಜಿಕ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ನೀಡಿದವು. ಪ್ರತಿಭಟನೆಯುದ್ದಕ್ಕೂ ಚೈತನ್ಯ ಕಳೆದುಕೊಳ್ಳದೆ, ಬಿಸಿಲ ಬೇಗೆಗೂ ಪರಿತಪಿಸದೆ ರೈತರು ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಒಕ್ಕೊರಲ ಆಗ್ರಹ ವ್ಯಕ್ತಪಡಿಸಿದರು.ಹಸಿರು ಶಾಲು, ಘೋಷಣೆಗಳ ಕೂಗುಮೆರವಣಿಗೆಯುದ್ದಕ್ಕೂ ರೈತರು ತಮ್ಮ ಹೆಗಲ ಮೇಲೆ ಹಸಿರು ಶಾಲು ಹಾಕಿ ಆಡಳಿತಕ್ಕೆ ಛಾಟಿ ಬೀಸಿದರು. ಜೊತೆಗೆ ಘೋಷಣೆಗಳನ್ನು ಮೊಳಗಿಸಿ ಎಚ್ಚರಿಕೆ ನೀಡಿದರು.
ಪ್ರಮುಖವಾಗಿ ಸಿ ಆ್ಯಂಡ್ ಡಿ ಭೂಮಿಯನ್ನು ಅರಣ್ಯ ಇಲಾಖೆಗೆ ಸುಪರ್ದಿಗೆ ನೀಡುವುದು, ಸೆಕ್ಷನ್ 4 ಅಧಿಸೂಚಿತ ಜಾಗವನ್ನು ಮೀಸಲು ಅರಣ್ಯವಾಗಿ ಪರಿವರ್ತಿಸುವುದಕ್ಕೆ ಪ್ರಬಲ ವಿರೋಧ ವ್ಯಕ್ತವಾಯಿತು. ಸರಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧದ ಬರಹಗಳುಳ್ಳ ಫಲಕ ಹಿಡಿದು ಸಾಗಿದ ರೈತರು ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಅರಣ್ಯ ಇಲಾಖೆಯಿಂದ ಕಿರುಕುಳ – ಮನುಸೋಮಯ್ಯ ಅಸಮಾಧಾನ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ, ಅರಣ್ಯ ಕಾಯಿದೆ ಅನುಷ್ಠಾನವಾದಗಲಿಂದಲೂ ಹೀಗಿರುವ ಸಮಸ್ಯೆಗಳಿವೆ. ಹಲವು ವರ್ಷಗಳಿಂದ ಅರಣ್ಯ ಇಲಾಖೆ ಜನರಿಗೆ ವಿನಾಕಾರಣ ತೊಂದರೆ ನೀಡುತ್ತ ಬಂದಿದೆ. ಇದು ಹುಡುಗಾಟದ ಹೋರಾಟವಲ್ಲ.
ಸರಕಾರಕ್ಕೆ ದೊಡ್ಡ ಸಂದೇಶ ನೀಡುವ ಉದ್ದೇಶವಾಗಿದೆ. ತಲತಲಾಂತರಗಳಿAದ ಸಾಗುವಳಿ ಮಾಡುತ್ತಿರುವ ಜಾಗವನ್ನು ಅರಣ್ಯ ಇಲಾಖೆ ಸುಪರ್ದಿಗೆ ನೀಡುವ ಕ್ರಮ ಅವೈಜ್ಞಾನಿಕ ಎಂದು ಕಿಡಿಕಾರಿದರು. ಈ ವಿಷಯದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ರೈತ ಪರ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಹಿಂದಿನ ಸರಕಾರವೂ ದಿಟ್ಟ ನಿರ್ಧಾರ ತೆಗೆದುಕೊಂಡಿಲ್ಲ. ಒಂದಲ್ಲ ಒಂದು ದಿನ ರೈತರು ಭೂಮಿ ಕಳೆದುಕೊಳ್ಳಬಹುದು. ಈ ಹಿನ್ನೆಲೆ ರೈತರು ಎಚ್ಚರವಹಿಸಬೇಕು. ಶಾಸಕರು ಕೂಡ ಅಧಿವೇಶನದಲ್ಲಿ ಮಾತನಾಡಿದ್ದಾರೆ. ಈ ಹಿಂದಿನ ಜನಪ್ರತಿನಿಧಿಗಳು ಕೂಡ ಧ್ವನಿಎತ್ತಿದ್ದಾರೆ. ಆದರೆ, ಸಮಸ್ಯೆ ಪರಿಹಾರವಾಗಿಲ್ಲ. ಬೆಳಗಾವಿಯಲ್ಲಿ ವಿಕಾಸಸೌಧದಲ್ಲಿ ಈ ಬಗ್ಗೆ ಮುಖ್ಯಮಂತ್ರಿಯೊAದಿಗೆ ಚರ್ಚಿಸಿ ಇದರ ಗಂಭೀರತೆ ತಿಳಿಸುವ ಪ್ರಯತ್ನ ಮಾಡಲಾಗಿದೆ. ಸೆಕ್ಷನ್ 4 ಅಧಿಸೂಚನೆ ವಿರುದ್ಧ ನ್ಯಾಯಾಂಗ ಹೋರಾಟ ಆಗಬೇಕಾಗಿದೆ. ತಾರ್ಕಿಕ ಅಂತ್ಯದ ತನಕ ನಾವೆಲ್ಲ ಹೋರಾಡಬೇಕು. ನ್ಯಾಯ ದೊರೆಯದಿದ್ದಲ್ಲಿ ಪ್ರಾಣತ್ಯಾಗ ಮಾಡಲು ಸಿದ್ಧವಿರಬೇಕು. 10 ಹೆಚ್.ಪಿ. ಪಂಪ್ ಸೆಟ್ ಉಚಿತ ವಿದ್ಯುತ್ ಬಗ್ಗೆ ಸ್ಪಷ್ಟ ನಿರ್ದೇಶನವಿಲ್ಲ. ಇತರ ಕಡೆಗಳಲ್ಲಿರುವಂತೆ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಜಿಲ್ಲೆಯ ರೈತರಿಗೆ ಒದಗಿಸಬೇಕು. ಸಿ-ಡಿ ಲ್ಯಾಂಡ್ ಹಾಗೂ ಸೆಕ್ಷನ್ 4 ವಿಷಯದಲ್ಲಿ ತಜ್ಞರ ಸಮಿತಿ ರಚನೆಯಾಗಿ ರೈತಪರ ವರದಿ ನೀಡಬೇಕು. ಶಾಸಕರೊಂದಿಗೆ ಸಂಸದರ ಜವಾಬ್ದಾರಿಯೂ ಹೆಚ್ಚಿದೆ ಎಂದರು. ಅಧಿಕಾರಿಗಳ ಎಡವಟ್ಟು ಸಮಸ್ಯೆಗೆ ಕಾರಣ – ಲೋಕೇಶ್ನಗರದ ಗಾಂಧಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ರೈತ ಹೋರಾಟ ಸಮಿತಿ ಸಂಚಾಲಕ ಕೆ.ಎಂ. ಲೋಕೇಶ್ ಮಾತನಾಡಿ, ಎಲ್ಲಾ ಸರಕಾರವನ್ನು ನಾವು ಗಮನಿಸಿದ್ದು, ಜನಪ್ರತಿನಿಧಿಗಳು ಗಟ್ಟಿಧ್ವನಿ ಮೊಳಗಿಸದಿರುವುದು ಸಮಸ್ಯೆ ಬಗೆಹರಿಯದಿರಲು ಕಾರಣವಾಗಿದೆ. ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಕಂದಾಯ ಹಾಗೂ ಅರಣ್ಯ ಇಲಾಖೆ ಮಾಡಿದ ಎಡವಿಟ್ಟಿನಿಂದ ಸಿ-ಡಿ ಲ್ಯಾಂಡ್ ವಿವಾದ ಎದುರಾಗಿದೆ. ಅರಣ್ಯಮಂತ್ರಿಗಳಿoದ ಸರಿಯಾದ ಸ್ಪಂದನ ದೊರೆಯದ ಹಿನ್ನೆಲೆ ಈ ಹೋರಾಟ ನಡೆಯುತ್ತಿದೆ. ಜಿಲ್ಲೆಯ ಶಾಸಕರು ಸದನದಲ್ಲಿ ಜನಪರವಾಗಿ ಧ್ವನಿಎತ್ತಿದಾರೆ ಆದರೆ, ಮಾತನಾಡಲು ಸಭಾಪತಿ ಹೆಚ್ಚಿನ ಸಮಯಾವಕಾಶ ನೀಡಿಲ್ಲ. ರಾಜ್ಯಕ್ಕೆ ಕುಡಿಯಲು ಕಾವೇರಿ ನೀರು ಬೇಕು. ಆದರೆ, ಮಾತನಾಡಲು ಮಾತ್ರ ಅವಕಾಶ ನೀಡುವುದಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು. ಸರ್ವೆಗೆ ಕ್ರಮವಹಿಸಿ – ದೀಪಕ್ರೈತ ಹೋರಾಟ ಸಮಿತಿ ಕಾನೂನು ಸಲಹೆಗಾರ ಬಿ.ಜೆ. ದೀಪಕ್ ಪ್ರಾಸ್ತಾವಿಕವಾಗಿ ಮಾತನಾಡಿ, ರೈತರು ಕಸ್ತೂರಿ ರಂಗನ್ ವರದಿ, ಸಿ-ಡಿ ಲ್ಯಾಂಡ್, ಸೆಕ್ಷನ್ 4 ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆಲ್ಲ ಅಧಿಕಾರಿಗಳ ಬೇಜವಾಬ್ದಾರಿ ಕಾರಣವಾಗಿದೆ. 1978ರ ಹೊರಡಿಸಿದ ಅಧಿಸೂಚನೆ ಪರಿಣಾಮ ಈ ಸಮಸ್ಯೆ ಉಂಟಾಗಿದೆ. ಸರಕಾರಿ ಕಡತಗಳಲ್ಲಿ ನಮ್ಮ ಭೂಮಿ ಸಿ-ಡಿ ಲ್ಯಾಂಡ್ ಎಂದು ನಮೂದಾಗಿದ್ದು, ನೈಜತೆ ಪರಿಶೀಲಿಸಿದ ನ್ಯಾಯಾಲಯಕ್ಕೆ ಅದೇ ವರದಿಯನ್ನು ನೀಡಲಾಗಿದೆ. ಇದೊಂದು ಅವೈಜ್ಞಾನಿಕ ನೀತಿಯಾಗಿದ್ದು, ರೈತರ ಜಾಗಕ್ಕೆ ಹಕ್ಕುಪತ್ರ ಒದಗಿಸಬೇಕೆಂಬ ಆದೇಶ ಆದೇಶವಾಗಿಯೇ ಉಳಿದಿದೆ. ಪುನರ್ ಪರಿಶೀಲಿಸಿ ಸರ್ವೆಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಮಿತಿಯ ಮುಖಂಡ ಬಗ್ಗನ ಅನಿಲ್ ಮಾತನಾಡಿ, ಎಲ್ಲಾ ಪಕ್ಷಗಳು ರೈತಪರವಿದ್ದರೂ ಸಮಸ್ಯೆ ಬಗೆಹರಿಯದಿರಲೂ ಕಾರಣವೇನು?. ಎಲ್ಲಾ ಪಕ್ಷ ಸೇರಿ 5 ಜಿಲ್ಲೆಗಳ ಬಂದ್ ಕರೆ ನೀಡಿ ಸರಕಾರದ ಗಮನ ಸೆಳೆದು ಸೆಕ್ಷನ್ 4, ಸಿ ಮತ್ತು ಡಿ ಲ್ಯಾಂಡ್ ಅರಣ್ಯ ಇಲಾಖೆ ಸುಪರ್ದಿಗೆ ನೀಡುವುದನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರುಗಳಾದ ಎಸ್.ಜಿ. ಮೇದಪ್ಪ, ಎಂ.ಪಿ. ಸುನಿಲ್ ಸುಬ್ರಮಣಿ, ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಪ್ರಮುಖರಾದ ನಾಪಂಡ ಮುತ್ತಪ್ಪ, ಭರತ್ ಶುಂಠಿ, ದಿನೇಶ್ ಕೆ.ಎಂ, ಮಿಥುನ್ ಹರಗ, ದಿವಾಕರ್ ಕೂತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ರೈತ ಹೋರಾಟಗಾರ ಎಂ.ಎಸ್.ನAದಕುಮಾರ್, ಕಿಸಾನ್ ಮೋರ್ಚಾ ರಾಜ್ಯಾಧ್ಯಕ್ಷ ಜಯರಾಮ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ರೈತ ಸಂಘಟನೆಯ ಹನಕೋಡು ಸುರೇಶ್ ಸತೀಶ್ ತಾಕೇರಿ, ಕೆ.ಟಿ. ಪರಮೇಶ್, ಹಸಿರು ಸೇನೆ ಅಧ್ಯಕ್ಷ ಶರತ್ ಕುಮಾರ್, ನಿವೃತ್ತ ತಹಶೀಲ್ದಾರ್ ಜಯರಾಮ್, ಸೋಮವಾರಪೇಟೆ ತಾಲೂಕು ಹೋರಾಟ ಮಿತಿ ಅಧ್ಯಕ್ಷ ಅರುಣ್ ಕೊತ್ನಾಳ್ಳಿ ಸೇರಿದಂತೆ ಇನ್ನಿತರರು ಹಾಜರಿದ್ದರು.
ಶಾಸಕ ಮಂತರ್ ಗೌಡ ಭಾಗಿ – ರೈತರಿಗೆ ಅಭಯ ಸಿಎಂ ನೇತೃತ್ವದಲ್ಲಿ ಸಭೆ ಭರವಸೆ.
ತನ್ನದೇ ಸರಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ ಎಂದು ತಿಳಿದಿದ್ದರೂ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಗಾಂಧಿ ಮೈದಾನದಲ್ಲಿ ನಡೆಯುತ್ತಿದ್ದ ಸಮಾವೇಶದಲ್ಲಿ ಭಾಗವಹಿಸಿ ಅಭಯ ನೀಡಿದರು. ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ಲಾಭಕ್ಕಿಂತ ರೈತಪರ ನಿಲ್ಲುವ ಆಸೆ ಹೊಂದಿದ್ದೇನೆ. ರಾಜಕೀಯ ಮಾಡಲು ಬೇರೆ ವೇದಿಕೆಗಳಿವೆ. ಜ. 3 ಅಥವಾ 4 ರಂದು ಜಂಟಿ ಸಭೆ ನಡೆಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಕಂದಾಯ ಹಾಗೂ ಅರಣ್ಯ ಇಲಾಖೆ ಸಚಿವರನ್ನು ಗಮನ ಸೆಳೆದಿದ್ದು, ಮಲೆನಾಡು ಭಾಗದ 36 ಶಾಸಕರನ್ನು ಸೇರಿಸಿ ಮುಖ್ಯಮಂತ್ರಿ ನೇತೃತ್ವದಲ್ಲಿ ಜಂಟಿ ಸಭೆ ನಡೆಸಲಾಗುವುದು.
ಈ ಮೂಲಕ ಪರಿಹಾರ ಕುರಿತು ಚರ್ಚೆ ನಡೆಸಲಾಗುವುದು ಎಂದರು. 1978 ರಿಂದಲೂ ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆ ಇದೆ. ಇದುವರೆಗೂ ಈ ಸಮಸ್ಯೆ ಪರಿಹಾರ ಕಂಡಿಲ್ಲ. ತಜ್ಞರ ಸಮಿತಿ ರಚನೆಗೂ ಕಂದಾಯ ಸಚಿವರು ಮುಂದಾಗಿದ್ದು, ರೈತರ ದಾರಿಯನ್ನು ಯಾರು ತಪ್ಪಿಸಬಾರದು. ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಹೋರಾಟ ಮುಂದುವರೆಯಬೇಕು. ಹಲವು ವರ್ಷಗಳಿಂದ ಕಚೇರಿಯಲ್ಲಿ ಕೂತು ಅಧಿಕಾರಿಗಳು ಆದೇಶ ಮಾಡಿದ್ದಾರೆ. ತನ್ನ ಅವಧಿಯಲ್ಲಿ ಈ ರೀತಿ ತಪ್ಪಾಗದಂತೆ ನೋಡಿಕೊಳ್ಳುತ್ತೇನೆ. ಮುಖ್ಯಮಂತ್ರಿ, ಕಂದಾಯ, ಅರಣ್ಯ ಇಲಾಖೆ ಸಚಿವರ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಂಸದರು ಕೂಡ ಈ ಬಗ್ಗೆ ಕೇಂದ್ರದ ಗಮನ ಸೆಳೆಯಬೇಕು. ರೈತನ ಮಗನಾಗಿ, ರೈತನಾಗಿ ಸದಾ ರೈತರೊಂದಿಗೆ ಇರುತ್ತೇನೆ. ವ್ಯವಸ್ಥಾಪನಾಧಿಕಾರಿ ಸ್ಥಳ ಪರಿಶೀಲಿಸಿ ವಾಸ್ತಾವಾಂಶ ವರದಿ ಸಲ್ಲಿಸಬೇಕು ಎಂದು ಹೇಳಿದರು.
ಉತ್ತರದಿಂದ ರೈತರ ದಂಡುಕೊಡಗಿನ ಉತ್ತರ ಭಾಗವಾದ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಿಂದ ರೈತರ ದಂಡು ಮಡಿಕೇರಿಗೆ ಹರಿದು ಬಂತು. ಸಿ ಮತ್ತು ಡಿ ಲ್ಯಾಂಡ್, ಸೆಕ್ಷನ್ 4 ವಿಚಾರದಲ್ಲಿ ಅತೀ ಹೆಚ್ಚು ಸೋಮವಾರಪೇಟೆ ಭಾಗದವರು ಬಾಧಿತರಾಗಿರುವ ಹಿನ್ನೆಲೆ ಆ ಭಾಗದ ಜನರೇ ಹೆಚ್ಚಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 30ಕ್ಕೂ ಹೆಚ್ಚು ಬಸ್‌ಗಳಲ್ಲಿ ಉತ್ತರ ಕೊಡಗು ಭಾಗದಿಂದ ಬಂದ ರೈತರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಜನದಟ್ಟಣೆ – ಟ್ರಾಫಿಕ್ ಜಾಮ್.
ಸಾಗರೋಪಾದರಿಯಲ್ಲಿ ಪ್ರತಿಭಟನೆಗೆ ರೈತರು ಬಂದ ಪರಿಣಾಮ ನಗರದಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿತು. ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ಸಾಗಿದ ಪರಿಣಾಮ ನಗರಕ್ಕೆ ಸಂಪರ್ಕ ಕಲ್ಪಿಸುವ ಇತರ ರಸ್ತೆಗಳಲ್ಲಿಯೂ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರಕ್ಕೆ ಸಮಸ್ಯೆಯಾಯಿತು. ಪೊಲೀಸ್ ಇಲಾಖೆ ಸಂಚಾರ ವ್ಯವಸ್ತೆ ಸರಿಪಡಿಸಲು ಪರದಾಡಬೇಕಾದ ಸ್ಥಿತಿಯೂ ಸೃಷ್ಟಿಯಾಯಿತು.
ಬಿ.ಜೆ.ಪಿ.ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ರೈತರನ್ನು ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ ರೈತರ ಸಮಸ್ಯೆಗಳಿಗೆ ಅಧಿಕಾರಿಗಳಿಂದ ಪರಿಹಾರ ದೊರಕುತ್ತಿಲ್ಲ. ಸಿ ಮತ್ತು ಡಿ ಲ್ಯಾಂಡ್ ಅರಣ್ಯಕ್ಕೆ ನೀಡುವುದು ಅಸಾಧ್ಯವಾಗಿದೆ. ಇದು ಮೀಸಲು ಅರಣ್ಯವಲ್ಲ. ಸಾಗುವಳಿ ಭೂಮಿಯಾಗಿದೆ. ನಮ್ಮ ಭೂಮಿಯನ್ನು ಅರಣ್ಯಕ್ಕೆ ವರ್ಗಾವಣೆ ಮಾಡುವ ಹುನ್ನಾರ ನಡೆಯುತ್ತಿದೆ. ಈ ಒಗ್ಗಟ್ಟು ಹೀಗೆ ಇರಬೇಕು.
ರೈತ ವಿರೋಧಿ ಆದೇಶವನ್ನು ಎಂದಿಗೂ ಒಪ್ಪಬಾರದು. ಬಿಜೆಪಿ ಸದಾ ರೈತರ ಜೊತೆಗಿರಲಿದೆ. ಸರಕಾರ ಈ ಬಗ್ಗೆ ಗಂಭಿರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. ಅರಣ್ಯ ಇಲಾಖೆಯೇ ಪ್ರತ್ಯೇಕ ಸರಕಾರ – ಧರ್ಮಜಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕಸ್ತೂರಿ ರಂಗನ್, ಮಾದವ್ ಗಾಡ್ಗಿಳ್ ವರದಿ, ಸಿ ಮತ್ತು ಡಿ ಲ್ಯಾಂಡ್ ಈ ರೀತಿ ಹತ್ತಹಲವು ಸಮಸ್ಯೆಗಳು ಜಿಲ್ಲೆಯ ಜನರನ್ನು ಕಾಡುತ್ತಿವೆ. ಕಸ್ತೂರಿ ರಂಗನ್ ವರದಿ ವಿರುದ್ಧ ಪಕ್ಷಾತೀತವಾಗಿ ಹೋರಾಡಿದ್ದೆವು.
ಇದೀಗ ಮತ್ತೇ ರೈತರಿಗೆ ಸಮಸ್ಯೆ ಉಂಟಾಗಿದೆ. ಅರಣ್ಯ ಇಲಾಖೆ ಪ್ರತ್ಯೇಕ ಸರಕಾರರ ರೀತಿ ಮೆರೆಯುತ್ತಿದೆ. ಈ ಹಿಂದೆ ಷರತ್ತು ವಿಧಿಸಿ ಲ್ಯಾಂಡ್ ಬ್ಯಾಂಕ್‌ಗೆ ಜಾಗ ನೀಡಲಾಗಿತ್ತು. ಇದನ್ನು ದುರುಪಯೋಗ ಮಾಡಿಕೊಂಡ ಅರಣ್ಯ ಇಲಾಖೆ ಇಂದು ನಮ್ಮ ಭೂಮಿಯನ್ನು ಕಬಳಿಸುವ ಕೆಲಸಕ್ಕೆ ಕೈ ಹಾಕಿದೆ. ಸಾಗುವಾಳಿದಾರರಿಗೆ ತೊಂದರೆಯಾಗದAತೆ ಪರಿಹಾರ ಸಿಗಬೇಕು.ಆಡಳಿತ ಪಕ್ಷದ ಜಿಲ್ಲಾಧ್ಯಕ್ಷನಾದರು ರೈತರಿಗೆ ಸಮಸ್ಯೆಯಾದಲ್ಲಿ ರೈತಪರ ನಿಲ್ಲುತ್ತೇನೆ ಎಂದು ಹೇಳಿದರು.
ಶಾಸಕರ ಮುಂದಾಳತ್ವದಲ್ಲಿ ಹೋರಾಡೋಣ – ವಿಶ್ವಜೆಡಿಎಸ್ ಪ್ರಭಾರ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ ಮಾತನಾಡಿ, ರೈತರಿಗೆ ದಿಕ್ಕು ಕಾಣದ ಸ್ಥಿತಿ ಇಂದು ಬಂದಿದೆ. ಕೊಡಗಿನ ಶಾಸಕರೊಂದಿಗೆ ಮಲೆನಾಡು ಭಾಗದ ಇತರ ಜನಪ್ರತಿನಿಧಿಗಳು ಧ್ವನಿಗೂಡಿಸಬೇಕಾಗಿತ್ತು. ಶಾಸಕರ ಮುಂದಾಳತ್ವದಲ್ಲಿ ಸರಕಾರದ ಗಮನಸೆಳೆಯಲು ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಹೋರಾಡೋಣ ಎಂದು ಕರೆ ನೀಡಿದರು.
ಎಲ್‌ಟಿಟಿ ರೀತಿ ವರ್ತಿಸುತ್ತಿರುವ ಅರಣ್ಯ ಇಲಾಖೆ – ಬೋಪಯ್ಯ ಕಿಡಿ:ಅರಣ್ಯ ಇಲಾಖೆ ಎಲ್‌ಟಿಟಿಯಂತೆ ರಾಜ್ಯದಲ್ಲಿ ವರ್ತಿಸುತ್ತಿದೆ ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಕಿಡಿಕಾರಿದರು. ಅರಣ್ಯ ಇಲಾಖೆಗೆ ಕಾನೂನು ಅನ್ವಯಿಸುವುದಿಲ್ಲ ಎಂಬ ಮನಸ್ಥಿತಿ ಇದೆ. ರೈತರು ಸಿ-ಡಿ ಲ್ಯಾಂಡ್, ಸೆಕ್ಷನ್ 4 ಬಗ್ಗೆ ಪ್ರಶ್ನಿಸಿದರೆ ಸುಪ್ರೀಂ ಕೋರ್ಟ್ ಆದೇಶ ತೋರಿಸಿ ದಿಕ್ಕು ತಪ್ಪಿಸಲಾಗುತ್ತಿದೆ. ಸೆಕ್ಷನ್ 4ರ ನಂತರ ಇತ್ಯರ್ಥಗೊಳಿಸುವ ಅಧಿಕಾರ ಕಂದಾಯ ಇಲಾಖೆಗೆ ಇರುತ್ತದೆ. ಅಂತಿಮ ಅಧಿಸೂಚನೆ ಸಕ್ಷನ್ 17ರ ನಂತರ ಜಿಲ್ಲಾಧಿಕಾರಿ ತೀರ್ಮಾನ ತೆಗೆದುಕೊಳ್ಳಬಹುದಾಗಿದೆ. ಕೆಲ ಅಧಿಕಾರಿಗಳೊಂದಿಗೆ ಸೇರಿ ಪರಿಸರ ಹೆಸರಿನಲ್ಲಿ ಪರಿಸರವಾದಿಗಳು ಜನರಿಗೆ ಕಿರುಕುಳ ನೀಡುತ್ತಿದ್ದಾರೆ. ಅಧಿಕಾರಿ ಹೇಳುವುದನ್ನೆ ಕೇಳಿದರೆ ಜನಪ್ರತಿನಿಧಿಗಳು ಯಾಕೆ ಇರಬೇಕು ಎಂದು ಪ್ರಶ್ನಿಸಿದರು.
ಯಾರಿಗೂ ಗೊತ್ತಾಗದ ರೀತಿಯಲ್ಲಿ ವ್ಯವಸ್ಥಾಪನ ಅಧಿಕಾರಿಯನ್ನು ನೇಮಿಸಲಾಗಿದೆ. ಮೊದಲು ಸ್ವಾಭಾವಿಕ ಹಾಗೂ ನೈಸರ್ಗಿಕ ಅರಣ್ಯ ಸರ್ವೆಯಾಗಬೇಕು. ಅರಣ್ಯ ಇಲಾಖೆ ಜನರಿಗೆ ನೀಡುತ್ತಿರುವ ಕಿರುಕುಳ ನೀಡುವುದು ನಿಲ್ಲಬೇಕು. ಸಾಗುವಳಿ ಮಾಡುವವರಿಗೆ ಹಕ್ಕುಪತ್ರ ನೀಡಬೇಕು. ಧ್ವನಿ ಎತ್ತದೆ ಹೋದರೆ ಬದುಕು ಹಾಳಾಗುತ್ತದೆ. ಭವಿಷ್ಯ ಬುಡಮೇಲಾಗುತ್ತದೆ. ಎಷ್ಟೆ ನೋಟಿಸ್ ಕೊಟ್ಟರು ಹೆದರದೆ ಒಗ್ಗಟ್ಟಿನಿಂದ ಮುಂದುವರೆಯೋಣ ಎಂದು ಕರೆ ನೀಡಿದರು.
ಜಿಲ್ಲಾಡಳಿತ ಮೂಲಕ ಮನವಿ ಸಲ್ಲಿಕೆಗಾಂಧಿ ಮೈದಾನದಲ್ಲಿ ಸಮಾವೇಶ ಬಳಿಕ ನಗರದ ಜಿಲ್ಲಾಡಳಿತ ಭವನ ಎದುರು ರೈತರು ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು. ಸ್ಥಳಕ್ಕೆ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ ಹಾಗೂ ಪ್ರಭಾರ ಜಿಲ್ಲಾಧಿಕಾರಿ ಆನಂದ್ ಪ್ರಕಾಶ್ ಮೀನಾ ಆಗಮಿಸಿ ರೈತರ ಸಮಸ್ಯೆ ಆಲಿಸಿ ಮನವಿ ಪತ್ರ ಸ್ವೀಕರಿಸಿದರು.
ಸಿ-ಡಿ ಸರ್ವೆಯನ್ನು ರದ್ದುಗೊಳಿಸಿ ಮರು ಸರ್ವೆ ಮಾಡಿ ರೈತರಿಗೆ ಜಾಗ ನೀಡಬೇಕು. ಯಾವುದೇ ಮಾಹಿತಿ ಇಲ್ಲದೆ ಮಾಡಿದ ಸೆಕ್ಷನ್ 4 ಅಡಿ ಮೀಸಲು ಅರಣ್ಯ ಪ್ರಸ್ತಾಪ ಕೈಬಿಡಬೇಕು.
- ವಾಸ್ತವತೆ ಅರಿಯದೆ ಡೀಮ್ಡ್ ಫಾರೆಸ್ಟ್ ಕಾಯ್ದೆಯನ್ನು ಕೈಬಿಡಬೇಕು.ಕಸ್ತೂರಿ ರಂಗನ್ ವರದಿ ತಿರಸ್ಕಾರ ಮಾಡಬೇಕು* ಊರುಉಡುವೆ, ದೇವರಕಾಡು, ಗೋಮಾಳ ಹೀಗೆ ಪೂರ್ವಿಕರು ಮೀಸಲಿಟ್ಟಿರುವ ಭೂಮಿ ಗ್ರಾಮದ ಅಧೀನಕ್ಕೆ ನೀಡಬೇಕು ನಮೂನೆ 50, 53, 57ರಡಿ ಹಕ್ಕುಪತ್ರ ವಿತರಿಸಬೇಕುನೆನೆಗುದಿಗೆ ಬಿದ್ದಿರುವ ದುರಸ್ತಿ ಕಡತಗಳನ್ನು ಶೀಘ್ರ ಸರಿಪಡಿಸಬೇಕು 94ಸಿ ದಾಖಲೆ ವಿತರಣೆಗೆ ಕ್ರಮವಹಿಸಬೇಕು10 ಹೆಚ್‌ಪಿ ತನಕದ ಮೋಟರ್ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಇದಗಿಸಬೇಕು











