ಬೆಂಗಳೂರಿನಲ್ಲಿ ದಿನೇ ದಿನೇ ಮಾಲಿನ್ಯ ಹೆಚ್ಚಳವಾಗ್ತಾನೆ ಇದೆ. ಇದರ ಬಗ್ಗೆ ಯಾರು ಕೂಡಾ ಗಮನಹರಿಸ್ತಿಲ್ಲ. ಆದರೆ ಮಾಲಿನ್ಯದಿಂದ ಮಹಿಳೆಯರು ಸಮಸ್ಯೆಗೊಳಗಾಗ್ತಿದ್ದಾರೆ. ಇವ್ರ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ಹಾಗಾದ್ರೆ ಯಾವ ರೀತಿ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ..?
ಮಹಿಳೆಯರಲ್ಲಿ ಫಲವಂತಿಕೆ ಅನ್ನೋದು ಕಡಿಮೆಯಾಗ್ತಿದೆ. ಮೊದಲೆಲ್ಲ ಮಹಿಳೆಯರಿಗೆ ಮಕ್ಕಳಾಗದಿರುವ ಸಮಸ್ಯೆ ಕಡಿಮೆ ಇತ್ತು. ಆದ್ರೆ ಈಗ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಾಗಿರೋದ್ರಿಂದ ಈ ಸಮಸ್ಯೆ ಉಲ್ಬಣವಾಗಿದೆ. ಮಹಿಳೆಯರ ಫಲವಂತಿಕೆ ಮೇಲೆ ದೊಡ್ಡ ಹೊಡೆತ ಕೊಟ್ಟಿದೆ. ದಿನ ನಿತ್ಯ ವಾಹನಗಳಿಂದ ಬರುವ ಹೊಗೆ ಸೇವಿಸೋದ್ರಿಂದ ಬಹಳ ಎಫೆಕ್ಟ್ ಎಂತಿದ್ದಾರೆ ವೈದ್ಯರು. ಬೆಂಗಳೂರಿನಲ್ಲಿ ಶೇ. 20 ರಿಂದ 25% ರಷ್ಟು ಬಂಜೆತನ ಪ್ರಮಾಣ ಏರಿಕೆಯಾಗಿದ್ದು, ಒತ್ತಡದಿಂದಲೂ ಫರ್ಟಿಲಿಟಿ ರೇಟ್ ಇಳಿಕೆಯಾಗ್ತಿದೆ.
TFR (total fertility rate) ಬಗ್ಗೆ ವೈದ್ಯರು ತೀವ್ರ ಕಳವಳ ವ್ಯಕ್ತಪಡಿಸ್ತಿದ್ದು, 1992ರಿಂದ TFR ಪ್ರಮಾಣದಲ್ಲಿ ಕುಸಿತ ಕಂಡಿದೆ. 1992-93ರಲ್ಲಿ 2.65 ಇದ್ದ TFR ಪ್ರಮಾಣ ಇಳಿಕೆಯಾಗಿದ್ದು, 13 ವರ್ಷಗಳಲ್ಲಿ 2.1 ಕ್ಕೆ ಇಳಿಕೆ ಕಂಡಿದೆ.ಇನ್ನು 2030ರಲ್ಲಿ 1.5 ರಷ್ಟು ಫಲವಂತಿಕೆ ಇಳಿಯುವ ಬಗ್ಗೆ ಕಳವಳ ವ್ಯಕ್ತಪಡಿಸ್ತಿದ್ದಾರೆ. ಪ್ರತಿ 5 ಹೆಣ್ಣುಮಕ್ಕಳಲ್ಲಿ ಒಬ್ಬ ಯುವತಿಯಲ್ಲಿ ಫಲವಂತಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಫಲವಂತಿಕೆಯಿಂದ ಗರ್ಭಕೋಶಕ್ಕೂ ಕೂಡ ತೊಂದರೆಯಾಗ್ತಿದೆ.
ಫಲವಂತಿಕೆ ಕಡಿಮೆಗೆ ಬೇರೆ ಕಾರಣಗಳೇನು.?
- ಜೀವನ ಶೈಲಿಯಿಂದ ಫಲವಂತಿಕೆ ಮೇಲೆ ಪರಿಣಾಮ
- ಬದಲಾಗುತ್ತಿರುವ ಆಹಾರ ಪದ್ಧತಿ
- ಹಾರ್ಮೋನ್ಸ್ಗಳಲ್ಲಿ ಏರುಪೇರುಗಳಿಂದ ಬಂಜೆತನ
ಹೀಗೆ ಪರಿಸರ ಮಾಲಿನ್ಯ ಜೊತೆಗೆ ಈ ಕಾರಣಗಳು ಕೂಡಾ ಸೇರ್ಪಡೆಯಾಗಿವೆ. ಹೀಗಾಗಿ ಪರಿಸರ ಮಾಲಿನ್ಯ ತಡೆಯಬೇಕು. ಮಹಿಳೆಯರು ಹೆಚ್ಚು ಹಣ್ಣು ತರಕಾರಿ ಸೇವನೆ ಮಾಡಬೇಕು. ಜಂಕ್ ಫುಡ್ಗಳನ್ನು ಕಡಿಮೆ ಮಾಡಬೇಕು. ಮುಟ್ಟಿನ ಸಮಸ್ಯೆ ಬಂದಾಗ ಚಿಕಿತ್ಸೆ ಪಡೆಯಬೇಕು. ಬೊಜ್ಜು ಬಾರದಂತೆ ನೋಡಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡ್ತಿದ್ದಾರೆ. ಒಟ್ಟಿನಲ್ಲಿ ಮಹಿಳೆಯರ ಮೇಲೆ ಈ ವಾಯು ಮಾಲಿನ್ಯ ಜೊತೆಗೆ ನಮ್ಮ ಕೆಲ ಜೀವನ ಶೈಲಿಯು ಬಹಳ ಪರಿಣಾಮ ಬೀರ್ತಿದ್ದು, ಸಾಧ್ಯವಾದಷ್ಟರ ಮಟ್ಟಿಗೆ ಈ ಮಾಲಿನ್ಯವನ್ನು ಕಡಿಮೆ ಮಾಡಬೇಕಿದೆ. ಇಲ್ಲವಾದ್ರೆ ಮುಂದಿನ ದಿನದಲ್ಲಿ ಜನರ ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ.