ಪೆನ್ ಡ್ರೈವ್ (Pendrive) ಪ್ರಕರಣದಲ್ಲಿ ಜೋರಾಗಿ ಸದ್ದು ಮಾಡುತ್ತಿರುವ ಆಡಿಯೋ ಪ್ರಕರಣದಿಂದ ಮೈತ್ರಿ ನಾಯಕರು ಎಚ್ಚೆತ್ತುಕೊಂಡಿದ್ದಾರೆ. ಜೆಡಿಎಸ್ (JDS) ಹಾಗೂ ದೇವೇಗೌಡರ (Devegowda) ಮೇಲೆ ಪಿತೂರಿ ಮಾಡಿದ ರೀತಿಯಲ್ಲಿ ಮಾತನಾಡಿದ ಆಡಿಯೋ ಬಹಿರಂಗ ಮಾಡಲಾಗಿದೆ. ಆಡಿಯೋದಲ್ಲಿ ಮಾಜಿ. ಸಿಎಂ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಪಿತೂರಿ ಮಾಡಲಾಗಿದೆ. ಹೀಗಾಗಿ ವಿಪಕ್ಷ ನಾಯಕರ ಆರ್ ಆಶೋಕ್ (R Ashok) ದೇವೇಗೌಡರನ್ನ ಭೇಟಿಯಾದ ವೇಳೆ ಜೆಡಿಎಸ್ ಜೊತೆಗೆ ನಿಲ್ಲುವಂತೆ ದೇವೇಗೌಡರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.
ಹಾಸನ ಸಂಸದ ಪೆನ್ಡ್ರೈವ್ ಕೇಸ್ನಲ್ಲಿ ಹೈರಾಣಾಗಿದ್ದ ಜೆಡಿಎಸ್ ನಾಯಕರಿಗೆ, ಶಿವರಾಮೇಗೌಡ- ದೇವರಾಜೇಗೌಡರ (Shivaramegowda-Devarajegowda) ಆಡಿಯೋದಿಂದ ಹೊಸ ಅಸ್ತ್ರ ಸಿಕ್ಕಂತಾಗಿದೆ.ಆ ಆಡಿಯೋದಲ್ಲಿ ಸರ್ಕಾರದ ಪಾತ್ರ ಇರುವುದರ ಬಗ್ಗೆ ಹಾಗೂ ದೇವೇಗೌಡರ ಆತ್ಮಹತ್ಯೆ ಬಗ್ಗೆ ಶಿವರಾಮೇಗೌಡ ಮಾತನಾಡಿದ್ದು, ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಜೆಡಿಎಸ್ ಬೃಹತ್ ಹೋರಾಟ ನಡೆಸಲು ಪ್ಲಾನ್ ರೂಪಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ
ಆ ಮೂಲಕ ಪ್ರಜ್ವಲ್ (prajwal revanna) ಕೇಸ್ನಿಂದ ಕುಗ್ಗಿದ ಜೆಡಿಎಸ್ ಮತ್ತೆ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡಲು ಮುಂದಾಗಿದ್ದು,ರಾಜಕೀಯ ದ್ವೇಷಕ್ಕಾಗಿ ಡಿಕೆಶಿ ಪೆನ್ಡ್ರೈವ್ ಬಿಡುಗಡೆ ಮಾಡಿಸಿದ್ದಾರೆ ಎಂದು ಬಿಂಬಿಸಲು ಪ್ಲಾನ್ ರೂಪಿಸಿದೆ.