ಇತ್ತೀಚೆಗೆ ಸಂದರ್ಶನ ಒಂದರಲ್ಲಿ ತಮಿಳುನಾಡಿನ (Tamilnadu) ಮಾಜಿ ಸಿಎಂ ದಿವಂಗತ ಜಯಲಲಿತಾ (Jayalalitha) ಬಗ್ಗೆ ಅಣ್ಣಾಮಲೈ (Annamalai) ಆಡಿರೋ ಮಾತುಗಳು, ತಮಿಳುನಾಡಲ್ಲಿ ದೊಡ್ಡ ಚರ್ಚೆಯ ಚಂಡಮಾರುತವನ್ನ ಎಬ್ಬಿಸಿದೆ. ಸಂದರ್ಶನವೊಂದರಲ್ಲಿ ಮಾತಾಡಿದ ಅಣ್ಣಾಮಲೈ, ಜಯಲಲಿತಾ ತಮಿಳುನಾಡಿನ ಎಲ್ಲರಿಗಿಂತಲೂ ಶ್ರೇಷ್ಠ ಹಿಂದುತ್ವವಾದಿ (Hindutva) ನಾಯಕಿ ಆಗಿದ್ದರು ಎಂದಿದ್ದಾರೆ.
ಜಯಲಲಿತಾ ನಿಧನರಾದ ನಂತರ ತಮಿಳುನಾಡಿನಲ್ಲಿ ಸೃಷ್ಟಿಯಾಗಿರುವ ಖಾಲಿ ಸ್ಥಳವನ್ನು ತುಂಬಲು ಬಿಜೆಪಿಗೆ (Bjp) ಹೆಚ್ಚಿನ ಅವಕಾಶವಿದೆ ಅನ್ನೋ ಮೂಲಕ ನೇರವಾಗಿ ಅಮ್ಮಾ ಅಭಿಮಾನದ ಮತಬುಟ್ಟಿಗೆ ಕೈ ಹಾಕಿದ್ರು. ಇದು ರಾಜಕೀಯ ಹವಮಾನ ವೈಪರಿತ್ಯಕ್ಕೆ ದಾರಿ ಮಾಡಿಕೊಟ್ಟಿದೆ.
ಇನ್ನು ಅಮ್ಮಾ ಹಿಂದುತ್ವವಾದಿ ಅನ್ನೋ ಅಣ್ಣಾಮಲೈ ಹೇಳಿಕೆಯನ್ನು ಜಯಲಲಿತಾ ಆಪ್ತ ಶಶಿಕಲಾ (Shashikala) ತಳ್ಳಿಹಾಕಿದ್ದಾರೆ. ಅಣ್ಣಾಮಲೈ ಹೇಳಿಕೆಗಳು ಜಯಲಲಿತಾ ಬಗ್ಗೆ ಇರೋ ಅಜ್ಞಾನ, ತಪ್ಪು ತಿಳುವಳಿಕೆಯನ್ನ ತೋರಿಸುತ್ತೆ ಅಂತಾ ಕಿಡಿಕಾರಿದ್ದಾರೆ.