ರಾಜ್ಯದಲ್ಲಿ ಸದ್ಯದಲ್ಲೇ ಎದುರಾಗಲಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ- ಚುನಾವಣೆ ವಿಚಾರ.
ಉಪ-ಚುನಾವಣೆಯ ಅಖಾಡದಲ್ಲಿಯೂ ಮುಂದುವರೆಯಲಿದೆ ಮೈತ್ರಿ.
ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಉಪ-ಚುನಾವಣೆ ಎದುರಿಸಲು ಸಜ್ಜು.
2:1 ರ ಅನುಪಾತದಲ್ಲಿ ಚುನಾವಣೆ ಎದುರಿಸಲು ಬಿಜೆಪಿ-ಜೆಡಿಎಸ್ ಸನ್ನದ್ಧು.
ಹಾಗಾದ್ರೆ ಏನಿದು 2:1 ರ ಅನುಪಾತದ ರಾಜಕೀಯ ಮೇಲಾಟ?
“ಪ್ರತಿಧ್ವನಿ”ಯಲ್ಲಿ 2:1 ರ ಅನುಪಾತದ ಕಂಪ್ಲೀಟ್ ಡೀಟೈಲ್ಸ್.
ರಾಜ್ಯದಲ್ಲಿ ಎದುರಾಗಲಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ-ಚುನಾವಣೆ.
ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರಾಗಿದ್ದವರು ಸಂಸತ್ ಪ್ರವೇಶ ಹಿನ್ನೆಲೆ.
ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ-ಚುನಾವಣೆ.
ಈ ಉಪ-ಚುನಾವಣೆಯನ್ನು 2:1 ರ ಅನುಪಾತದಲ್ಲಿ ಎದುರಿಸಬೇಕು.
ಅಂದರೆ, 2 ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ, ಪಕ್ಷದ ಚಿಹ್ನೆ ಕಮಲದಡಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು.
ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲ ಚಿಹ್ನೆಯಡಿಯಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯುವುದು.
ಇತ್ತ ಹಳೆಯ ಮೈಸೂರು ಭಾಗವಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನ ಚಿಹ್ನೆಯಡಿಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಮಾತುಕತೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಹೈಕಮಾಂಡ್ ನಾಯಕರ ಜೊತೆಗೆ ಇದೇ ಅನುಪಾತದ ಬಗ್ಗೆ ಮಾತುಕತೆ.
ಮಾತುಕತೆ ಮಾಡುವ ನಿಟ್ಟಿನಲ್ಲಿಯೇ ದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಬಿ.ವೈ.ವಿಜಯೇಂದ್ರ.