ಗ್ರಾಮೀಣ ಪ್ರದೇಶಗಳನ್ನೂ ಭಾದಿಸುತ್ತಿರುವ ಕರೋನಾ ಎರಡನೇ ಅಲೆ: ಸಾವಿನ ಪ್ರಮಾಣ ನಾಲ್ಕು‌‌ ಪಟ್ಟು ಹೆಚ್ಚು

ಕೋವಿಡ್ -19 ರ ಎರಡನೇ ಅಲೆಯ ಒಂದು‌‌ ಪ್ರಮುಖ ಲಕ್ಷಣವೆಂದರೆ   ಗ್ರಾಮೀಣ ಭಾರತದಲ್ಲಾದ ಪ್ರಕರಣಗಳಲ್ಲಿನ ಹೆಚ್ಚಳ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಮೊದಲ ಅಲೆಯ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ ಭಾರತದ ಒಳನಾಡು ಅಥವಾ ಹಿಂದುಳಿದ ಪ್ರದೇಶಗಳಲ್ಲಿನ ಪ್ರಕರಣಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ ಮತ್ತು ಸತ್ತವರ ಸಂಖ್ಯೆಯೂ ಹೆಚ್ಚಾಗಿದೆ.


ಡೇಟಾ ಲಭ್ಯವಿರುವ 272 ಹಿಂದುಳಿದ ಪ್ರದೇಶ ಅನುದಾನ ನಿಧಿ (ಬಿಆರ್‌ಜಿಎಫ್) ವ್ಯಾಪ್ತಿಗೆ ಒಳಪಟ್ಟಿರುವ ಜಿಲ್ಲೆಗಳಲ್ಲಿ 243  ಜಿಲ್ಲೆಗಳಲ್ಲಿ ಮೇ 5 ರ ಹೊತ್ತಿಗೆ 39.16 ಲಕ್ಷಕ್ಕೂ ಹೆಚ್ಚು ಜನರು ಈ ಸೋಂಕಿಗೆ ಒಳಗಾಗಿದ್ದಾರೆ. ಇದು ಸೆಪ್ಟೆಂಬರ್ 16, 2020 ರಂದು ಮೊದಲ ಅಲೆಯ ಗರಿಷ್ಠ. 9.5 ಲಕ್ಷ ಸೋಂಕುಗಳಿಗಿಂತ ನಾಲ್ಕು ಪಟ್ಟು ಹೆಚ್ಚು.


ಈ ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಹೊರೆ ಎರಡನೆ ಅಲೆಯಲ್ಲಿ ಹೆಚ್ಚಾಗಿದೆ. ಆತಂಕಕಾರಿ ಸಂಗತಿ ಎಂದರೆ ಎರಡನೇ ಅಲೆ ಇನ್ನೂ ಗರಿಷ್ಠ ಮಟ್ಟ ತಲುಪಿಲ್ಲ. ಸಕ್ರಿಯ ಪ್ರಕರಣಗಳು ಈಗಾಗಲೇ ಮೊದಲ ಅಲೆಯ ಗರಿಷ್ಠ ಸಕ್ರಿಯ ಪ್ರಕರಣಗಳಿಗಿಂತ 4.2 ಪಟ್ಟು ಹೆಚ್ಚು.  ಈ ಜಿಲ್ಲೆಗಳಲ್ಲಿ ಪ್ರಸ್ತುತ 7.15 ಲಕ್ಷಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ, ಇದು ಗ್ರಾಮೀಣ ಜಿಲ್ಲೆಗಳಲ್ಲಿ  ಹೆಲ್ತ್‌ಕೇರ್ ಮೂಲಸೌಕರ್ಯವನ್ನು ತೀವ್ರ ಒತ್ತಡಕ್ಕೆ ಒಳಪಡಿಸುತ್ತದೆ.


ಇದು ಬಹುಶಃ ಈ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳಿಗೆ ಕಾರಣವಾಗಬಹುದು.  ಮೇ 5 ರ ಹೊತ್ತಿಗೆ‌‌ ಒಇ‌243 ಜಿಲ್ಲೆಗಳು ಒಟ್ಟಾಗಿ 36,523 ಸಾವುಗಳನ್ನು ದಾಖಲಿಸಿವೆ. ಕಳೆದ ವರ್ಷ ಮೊದಲ ಅಲೆಯ ಉತ್ತುಂಗದಲ್ಲಿ ಸತ್ತವರ ಸಂಖ್ಯೆಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಅಂದರೆ ಸೆಪ್ಟೆಂಬರ್ 16, 2020 ರ ಹೊತ್ತಿಗೆ ಈ ಜಿಲ್ಲೆಗಳಲ್ಲಿ ಸತ್ತವರ ಒಟ್ಟು ಸಂಖ್ಯೆ 9,555.


ಬಿಆರ್‌ಜಿಎಫ್ ಅಡಿಯಲ್ಲಿರುವ 272 ಜಿಲ್ಲೆಗಳಲ್ಲಿ ಸುಮಾರು 54 ಪ್ರತಿಶತ ಕೇವಲ ಐದು ರಾಜ್ಯಗಳಿಗೆ ಸೇರಿದೆ. ಬಿಹಾರ – 38, ಉತ್ತರ ಪ್ರದೇಶ – 35, ಮಧ್ಯಪ್ರದೇಶ – 30, ಜಾರ್ಖಂಡ್ – 23 ಮತ್ತು ಒಡಿಶಾ – 20. ಈ ರಾಜ್ಯಗಳು ದೇಶದ ನಗರ ಕೇಂದ್ರಗಳಿಗೆ ಹೆಚ್ಚಿನ ಕಾರ್ಮಿಕ ಶಕ್ತಿ ಅಥವಾ ವಲಸೆ ಕಾರ್ಮಿಕರನ್ನು ಸಹ ಒದಗಿಸುತ್ತವೆ.


ಕರೊನಾವೈರಸ್ ಪ್ರಕರಣಗಳ ನಗರ ಮತ್ತು ಗ್ರಾಮೀಣ ವಿಭಜನವಾರು ಪ್ರಕರಣಗಳು ನೇರವಾಗಿ ಲಭ್ಯವಿಲ್ಲದಿದ್ದರೂ, ಬಿಆರ್‌ಜಿಎಫ್ ಜಿಲ್ಲೆಗಳಲ್ಲಿನ ಪ್ರಕರಣಗಳು ಮತ್ತು ಸಾವುಗಳ ವಿಶ್ಲೇಷಣೆಯು ಗ್ರಾಮೀಣ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ 272 ಜಿಲ್ಲೆಗಳಲ್ಲಿ  ಸಾಂಕ್ರಾಮಿಕ ರೋಗವು ಹರಡಿರುವುದನ್ನು ಆ ಮೂಲಕ ಗ್ರಾಮೀಣ ಪ್ರದೇಶಗಳಲ್ಲೂ ಹರಡಿರುವುದನ್ನು ಸೂಚಿಸುತ್ತದೆ.

ಈ 272 ಜಿಲ್ಲೆಗಳಲ್ಲಿ ಹೆಚ್ಚಿನವು ಮೂಲಭೂತ ಆರೋಗ್ಯ ಸೌಲಭ್ಯಗಳನ್ನು ಮಾತ್ರ ಹೊಂದಿವೆ.  ರಾಜ್ಯಗಳ ಸರ್ಕಾರಗಳು‌ ಕಲ್ಪಿಸುತ್ತಿರುವ  ಮೂಲಸೌಕರ್ಯಗಳು ಹೆಚ್ಚಾಗಿ ದೊಡ್ಡ ಪಟ್ಟಣಗಳು ​​ಮತ್ತು ನಗರಗಳಲ್ಲಿವೆ.  ಇದರ ಪರಿಣಾಮವಾಗಿ ಈ ಜಿಲ್ಲೆಗಳಿಂದ ಹತ್ತಿರದ ದೊಡ್ಡ ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯ ರೋಗಿಗಳು ಬರುತ್ತಿದ್ದಾರೆ, ಇದು ಪಟ್ಟಣಗಳು ​​ಮತ್ತು ನಗರಗಳಲ್ಲಿ ಈಗಾಗಲೇ ಒತ್ತಡಕ್ಕೊಳಗಾದ ಮೂಲಸೌಕರ್ಯಗಳ ಮೇಲೆ ಮತ್ತಷ್ಟು ಹೊರೆ ಹೊರೆಸುತ್ತದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...