ಲೋಕಸಭೆ ಚುನಾವಣೆಯಲ್ಲಿ (parliment election) ಕುರುಡು ಕಾಂಚಾಣದ ಕುಣಿತ ಜೋರಾಗಿದೆ.. ಎಲೆಕ್ಷನ್ ಅಖಾಡದಲ್ಲಿ ಅಭಿವೃದ್ಧಿ ವಿಚಾರಗಳಿಂದ (Developement works) ಮತಕೇಳುವ ಬದಲು ಅಭ್ಯರ್ಥಿಗಳು ಮತದಾರರಿಗೆ ಹಣದ ಆಮಿಷ ತೋರುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ರಮವಾಗಿ ಸಾಗಿಸ್ತಿದ್ದ ಲಕ್ಷಾಂತರ ರೂಪಾಯಿ ಹಣ, ಸೀರೇ, ಮದ್ಯವನ್ನ ಪೊಲೀಸರು (police) ಸೀಜ್ ಮಾಡಿದ್ದಾರೆ.
ಗುಜರಾತ್ನ (gujarat) ಸೂರತ್‌ನಿಂದ ಚೈನೈಗೆ (chennai) ಅಕ್ರಮವಾಗಿ ಸಾಗಾಟ ಮಾಡ್ತಿದ್ದ 40 ಸಾವಿರ ಸೀರೆ ಹಾಗೂ ಇತರ ವಸ್ತುಗಳನ್ನ ಬೀದರ್ (bidar) ಚುನಾವಣಾ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. ಬೀದರ್‌ನ ಬಸವಕಲ್ಯಾಣ ತಾಲೂಕಿನ ಮನ್ನಳ್ಳಿ ಚೆಕ್‌ಪೋಸ್ಟ್‌ನಲ್ಲಿ (check post) ಲಾರಿ ಸಮೇತ 40 ಲಕ್ಷ ಮೌಲ್ಯದ 40 ಸಾವಿರ ಸೀರೆಗಳನ್ನ ವಾಣಿಜ್ಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇನ್ನೊಂದೆಡೆ ದಾಖಲೆಯಿಲ್ಲದ 14 ಲಕ್ಷ 88 ಸಾವಿರ (14 lakhs 88 thousand) ಹಣ ಜಪ್ತಿ ಮಾಡಲಾಗಿದೆ.ಬಾಗಲಕೋಟೆಯ ನಾಯನೇಗಲಿ ಚೆಕ್‌ಪೋಸ್ಟ್‌ನಲ್ಲಿ ತಮಿಳುನಾಡಿನ ಲಾರಿಯಲ್ಲಿ ಹಣ ಪತ್ತೆಯಾಗಿದ್ದು, ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಫೈಯಿಂಗ್ ಸ್ವಾಡ್ (Flying squad) ಜಂಟಿ ತಪಾಸಣೆ ನಡೆಸಿ ಹಣ ವಶಕ್ಕೆ ಪಡೆದಿದ್ದಾರೆ.
ಯಾದಗಿರಿಯಲ್ಲೂ (yadagiri) ಅಬಕಾರಿ ಇಲಾಖೆ ಅಧಿಕಾರಿಗಳು ಅಪಾರ ಪ್ರಮಾಣದ ಮದ್ಯ ವಶಕ್ಕೆ ಪಡೆದಿದ್ದಾರೆ, ಬೈಕ್‌ನಲ್ಲಿ ಸಾಗಿಸುತ್ತಿದ್ದ ತೆಲಂಗಾಣ ಮೂಲದ 23.4 ಲೀಟರ್ ಮದ್ಯವನ್ನ ಜಪ್ತಿ ಮಾಡಿದ್ದಾರೆ.ಜೊತೆಗೆ ಆರೋಪಿಯನ್ನ ಬಂಧಿಸಿ ಪ್ರಕರಣ ದಾಖಲಿಸಿ, ವಿಚಾರಣೆ ಮುಂದುವರೆಸಿದ್ದಾರೆ.
ಚುನಾವಣೆ ವೇಳೆ ರಾಜ್ಯದಲ್ಲಿ ದಾಖಲೆ ಇಲ್ಲದ ಕೋಟಿ ಕೋಟಿ ಹಣ ಸೀಜ್ ಆಗುತ್ತಲೇ ಇದೆ.. ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಅಕ್ರಮ ಹಣ ಸಾಗಾಟಕ್ಕೆ ಕಡಿವಾಣ ಹಾಕ್ತಿದ್ದಾರೆ.. ಆದ್ರೆ. ಮತದಾರರು ಹಣ, ಹೆಂಡ, ಗಿಫ್ಟ್ಗಳಿಗೆ ಮತ ಮಾರಾಟ ಮಾಡದೇ ಜಾಗರೂಕರಾಗಬೇಕಿದೆ.