• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಬಂಗಾಳದಲ್ಲಿ ಟಿಎಂಸಿ, ಪಂಜಾಬಿನಲ್ಲಿ ಎಎಪಿ ನಾಯಕತ್ವದಡಿ ನಾವು ಹೋರಾಡಬೇಕು : ಪಿ ಚಿದಂಬರಂ

ಪ್ರತಿಧ್ವನಿ by ಪ್ರತಿಧ್ವನಿ
March 18, 2022
in ದೇಶ
0
ಬಂಗಾಳದಲ್ಲಿ ಟಿಎಂಸಿ, ಪಂಜಾಬಿನಲ್ಲಿ ಎಎಪಿ ನಾಯಕತ್ವದಡಿ ನಾವು ಹೋರಾಡಬೇಕು : ಪಿ ಚಿದಂಬರಂ
Share on WhatsAppShare on FacebookShare on Telegram

ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಸೋಲು ಕಂಡ ಬಳಿಕ 2024 ರ ಲೋಕಸಭಾ ಚುನಾವಣೆಯಲ್ಲಿ ಇತರೆ ಪಕ್ಷಗಳೊಂದಿಗೆ ಹೊಂದಿಕೊಳ್ಳುವ ಕುರಿತು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

ADVERTISEMENT

2024ರ ಸಾರ್ವತ್ರಿಕ ಚುನಾವಣೆಗೆ ತಮ್ಮ ಪಕ್ಷವು ಸಿದ್ಧವಾಗಿದ್ದರೂ, ಬಿಜೆಪಿಯನ್ನು ಸೋಲಿಸಲು ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ

(ಬಿಜೆಪಿ ವಿರುದ್ಧ) ಪ್ರತಿಯೊಂದು ಪಕ್ಷವೂ ಹೊಂದಾಣಿಕೆ ಮಾಡಿಕೊಳ್ಳಬೇಕು. ಇದು ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್‌ಗೂ ಅನ್ವಯಿಸುತ್ತದೆ. ಹೋರಾಟವು ರಾಜ್ಯವಾರು ಇರುತ್ತದೆ. ಬಂಗಾಳದಲ್ಲಿ ನಾವು ತೃಣಮೂಲ ಕಾಂಗ್ರೆಸ್‌ ನಾಯಕತ್ವದಲ್ಲಿ ಹೋರಾಡಬೇಕು. ಪಂಜಾಬ್‌ನಲ್ಲಿ ನಾವು ಎಎಪಿ ನಾಯಕತ್ವದಡಿ ಹೋರಾಡಬೇಕು. ನಾಯಕರಾಗಿ ನೀವು ರಾಜ್ಯವಾರು ಬಿಜೆಪಿ ವಿರುದ್ಧ ಹೋರಾಡಿದರೆ ಅದನ್ನು ಸೋಲಿಸಲು ಸಾಧ್ಯವಾಗುತ್ತದೆ ಎಂದು ಚಿದಂಬರಂ ಹೇಳಿದ್ದಾರೆ.

ಹಲವು ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವವೇ ಇಲ್ಲ ಎಂದು ಒಪ್ಪಿಕೊಂಡ ಚಿದಂಬರಂ, ʼಬ್ಲಾಕ್‌ ಕಮಿಟಿಯಿಂದ ಪಕ್ಷವನ್ನು ಪುನಃ ಸಂಘಟಿಸಬೇಕುʼ ಎಂದು ಕರೆ ನೀಡಿದ್ದಾರೆ.

ಎನ್‌ಡಿಟಿವಿಯೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಹಲವು ವರ್ಷಗಳಿಂದ ನೆಲೆ ಕಳೆದುಕೊಂಡಿದೆ ಎಂದು ನಮಗೆಲ್ಲರಿಗೂ ಗೊತ್ತಿದೆ. ನಾವು ಮೊದಲು ಪಕ್ಷವನ್ನು ಪುನಃ ಕಟ್ಟಬೇಕು, ನಂತರ ಚುನಾವಣೆ ಎದುರಿಸಬೇಕು. ಪಕ್ಷವನ್ನು ಕಟ್ಟುವುದು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವುದು ಎರಡು ಒಟ್ಟಿಗೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಕಾಂಗ್ರೆಸ್‌ ನಾಯಕತ್ವದೊಂದಿಗೆ ಭಿನ್ನಮತ ಹೊಂದಿರುವ ಜಿ-23 ಗುಂಪಿಗೆ ಪಕ್ಷವನ್ನು ಒಡೆಯುವ ಕೆಲಸ ಮಾಡದೆ ತಮ್ಮ ತಮ್ಮ ಕ್ಷೇತ್ರಕ್ಕೆ ಮರಳಿ ಪಕ್ಷ ಸಂಘಟನೆ ಮಾಡುವಂತೆ ಅವರು ಕರೆ ಕೊಟ್ಟಿದ್ದಾರೆ.

ಕಾಂಗ್ರೆಸ್‌ ಪಕ್ಷದ ಇತ್ತೀಚಿನ ವಿಧಾನಸಭಾ ಚುನಾವಣಾ ಸೋಲಿಗೆ ಗಾಂಧಿ ಕುಟುಂಬವನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ನಾನು ಗೋವಾದ ಜವಾಬ್ದಾರಿಯನ್ನು ಒಪ್ಪಿಕೊಂಡಂತೆ ಗಾಂಧಿಗಳು ಜವಾಬ್ದಾರಿಯನ್ನು ಒಪ್ಪಿಕೊಂಡರು ಮತ್ತು ಇತರರು ಇತರ ರಾಜ್ಯಗಳ ಜವಾಬ್ದಾರಿಯನ್ನು ಸ್ವೀಕರಿಸಿದರು. ಯಾರೂ ಜವಾಬ್ದಾರಿಯಿಂದ ಓಡಿಹೋಗುವುದಿಲ್ಲ. ಆದರೆ ಜವಾಬ್ದಾರಿಯು ನಾಯಕತ್ವ ಸ್ಥಾನದಲ್ಲಿರುವ ಪ್ರತಿಯೊಬ್ಬರ ಮೇಲಿದೆ, ಅದು ಬ್ಲಾಕ್, ಜಿಲ್ಲೆ, ರಾಜ್ಯ ಮತ್ತು ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಗೂ ಸೋಲಿನ ಜವಾಬ್ದಾರಿ ಇದೆ. ಎಐಸಿಸಿ ನಾಯಕತ್ವ ಮಾತ್ರ ಚುನಾವಣಾ ಸೋಲಿಗೆ ಕಾರಣ ಎಂದುಎಂದರೆ ಸಾಕಾಗುವುದಿಲ್ಲ ಎಂದು ಚಿದಂಬರಂ ತಿಳಿಸಿದ್ದಾರೆ.

Tags: Congress PartyCovid 19ಎಎಪಿಕರೋನಾಕೋವಿಡ್-19ಟಿಎಂಸಿಪಂಜಾಬ್ಪಶ್ಚಿಮ ಬಂಗಾಳಪಿ ಚಿದಂಬರಂಬಂಗಾಳ ಕೊಲ್ಲಿಬಂಗಾಳ ಸರ್ಕಾರಬಿಜೆಪಿ
Previous Post

ರಾಜಸ್ಥಾನ: ಮಕ್ಕಳೆದುರೇ ದಲಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

Next Post

ಜಾಗತಿಕ ಕೋವಿಡ್‌ ಪ್ರಕರಣದಲ್ಲಿ ಮತ್ತೆ ಏರಿಕೆ : ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ

Related Posts

ಚನ್ನಮ್ಮ ಬಡ ಜನ, ದುರ್ಬಲರಲ್ಲಿ ದೇವರನ್ನು ಕಾಣುತ್ತಿದ್ದ ಮಾನವತಾಮೂರ್ತಿ : ರಮೇಶಗೌಡ ಭಾವುಕ..!
Top Story

ಚನ್ನಮ್ಮ ಬಡ ಜನ, ದುರ್ಬಲರಲ್ಲಿ ದೇವರನ್ನು ಕಾಣುತ್ತಿದ್ದ ಮಾನವತಾಮೂರ್ತಿ : ರಮೇಶಗೌಡ ಭಾವುಕ..!

by ಪ್ರತಿಧ್ವನಿ
July 27, 2026
0

ಬೆಂಗಳೂರು :  ಶ್ರೀಮತಿ ಚನ್ನಮ್ಮ ದೇವೇಗೌಡರು ಬಡ ಜನರು ಮತ್ತು ದುರ್ಬಲರಲ್ಲಿ ದೇವರನ್ನು ಕಾಣುತ್ತಿದ್ದ ಮಾನವತಾಮೂರ್ತಿ. ಕಷ್ಟಗಳನ್ನು ಹೊತ್ತು ಮನೆಗೆ ಬರುತ್ತಿದ್ದವರಿಗೆ ನೆರವು ನೀಡುವ ಆಸರೆಯಾಗಿದ್ದರು ಎಂದು...

Read moreDetails
ಆಸ್ಪತ್ರೆಯಿಂದ ಸೋನಮ್ ಡಿಸ್ಟಾರ್ಜ್‌‌: ರಾಜ್‌ಘಾಟ್‌ಗೆ ತೆರಳಿ ಗಾಂಧೀಜಿಗೆ ನಮನ

ಆಸ್ಪತ್ರೆಯಿಂದ ಸೋನಮ್ ಡಿಸ್ಟಾರ್ಜ್‌‌: ರಾಜ್‌ಘಾಟ್‌ಗೆ ತೆರಳಿ ಗಾಂಧೀಜಿಗೆ ನಮನ

July 27, 2026
ಪಂಜಾಬ್‌ನಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಪಂಜಾಬ್‌ನಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

July 27, 2026
ಕೆನಡಾದಲ್ಲಿ ಭಾರತದ ಯುವತಿಗೆ ಗುಂಡಿಕ್ಕಿ ಹ**

ಕೆನಡಾದಲ್ಲಿ ಭಾರತದ ಯುವತಿಗೆ ಗುಂಡಿಕ್ಕಿ ಹ**

July 27, 2026
ಗದ್ದಲದ ಮಧ್ಯೆ ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಮಂಡನೆ

ಗದ್ದಲದ ಮಧ್ಯೆ ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಮಂಡನೆ

July 27, 2026
Next Post
ಜಾಗತಿಕ ಕೋವಿಡ್‌ ಪ್ರಕರಣದಲ್ಲಿ ಮತ್ತೆ ಏರಿಕೆ : ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ

ಜಾಗತಿಕ ಕೋವಿಡ್‌ ಪ್ರಕರಣದಲ್ಲಿ ಮತ್ತೆ ಏರಿಕೆ : ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada