ಅಲೋಪಥಿಯ ವಿರುದ್ಧ ಅಪಪ್ರಚಾರ: ಬಾಬಾ ರಾಮ್‌‌ದೇವ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಐಎಮ್ಎ ಪತ್ರ

ಯೋಗ ಗುರು ಬಾಬಾ ರಾಮ್‌ ದೇವ್‌  ಇತ್ತೀಚೆಗೆ ಅಲೋಪಥಿ ಚಿಕಿತ್ಸೆಯನ್ನು ಟೀಕಿಸಿ ಹೇಳಿಕೆ ನೀಡಿದ್ದರು. ಇದಕ್ಕೀಗ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಹಾಗು ಇತರೆ ವೈದ್ಯಕೀಯ ಸಂಘಗಳುಆಕ್ರೋಶಗೊಂಡಿವೆ. ಬಾಬು ರಾಮ್‌ ದೇವ್‌ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರಿಗೆ ಪತ್ರ ಬರೆಯಲಾಗಿದೆ.

ಅಲೋಪಥಿ (ಆಧುನಿಕ ವೈದ್ಯ ವಿಜ್ಞಾನ) ಎಂಬುವುದು ಅವಿವೇಕಿ ಮತ್ತು ಅಸಮರ್ಪಕ ವಿಜ್ಞಾನ, ಮೊದಲು ಹೈಡ್ರೋಕ್ಸಿಕ್ಲೂರೊಖ್ವಿನ್ ವಿಫಲವಾಯಿತು, ನಂತರ ರೆಮ್ಡಿಸಿವಿರ್‌, ಐವರ್ಮೆಕ್ಟಿನ್‌ ಹಾಗು ಪ್ಲಾಸ್ಮಾ ಥೆರಪಿ ವಿಫಲವಾಯಿತು, ನಂತರ ಆಂಟಿಬಯೋಟಿಕ್ಸ್‌ಗಳಾದ ಫ್ಯಾಬಿಫ್ಲೂ ಮತ್ತು ಸ್ಟೆರಾಯ್ಡ್‌ ಕೂಡ ವಿಫಲವಾಯಿತು ಎಂದು ಇತ್ತೀಚೆಗೆ ಬಾಬಾ ರಾಮ್‌ ದೇವ್‌ ಅಲೋಪಥಿ ಚಿಕಿತ್ಸೆಯನ್ನು ಟೀಕಿಸಿ ಹೇಳಿಕೆ ಕೊಟ್ಟಿದ್ದರು, ಜೊತೆಗೆ ಆಕ್ಸಿಜನ್‌ ಕೊರತೆಗಿಂತಲೂ ಅಲೋಪಥಿ ಔಷಧದಿಂದ ಲಕ್ಷಾಂತರ ಕೋವಿಡ್‌ ಸೋಂಕಿತರು ಸಾವನ್ನಪ್ಪಿದ್ದಾರೆಂದಿದ್ದರು.

ವೈದ್ಯರ ವಿರುದ್ಧ ಬಾಬಾ ರಾಮ್‌ ದೇವ್‌ ನೀಡುತ್ತಿರುವ ಹೇಳಿಕೆ ಖಂಡನಾರ್ಹ, ಅವರು ವೈದ್ಯರು ಹಾಗು ರೋಗಿಗಳ ನಡುವೆ ಅವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ವಿಜ್ಞಾನದ ಬದಲು ಮೌಢ್ಯ ಹರಡುತ್ತಿದ್ದಾರೆ. ಇದು ವೈದ್ಯ ಸಮೂಹಕ್ಕೆ ಹಿನ್ನಡೆ ಮಾಡುವ ಕೆಲಸವಾಗಿದೆ. ಕೂಡಲೇ ರಾಮದೇವ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಐಎಂಎ ಒತ್ತಾಯ ಮಾಡಿದೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಅಲೋಪಥಿಕ್ ವೈದ್ಯರು ಮುಂಚೂಣಿಯಲ್ಲಿದ್ದಾರೆ. 1200 ಕ್ಕೂ ಹೆಚ್ಚು ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಅಂತಹವರನ್ನು ಅವಮಾನಿಸುವ ಕೆಲಸವನ್ನು ಬಾಬಾ ರಾಮ್‌ ದೇವ್ ಮಾಡಿದ್ದಾರೆಂದು ಐಎಂಎ ಗರಂ ಆಗಿದೆ. ‌

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇವರು ನೀಡಿರುವ ದ್ವೇಷದ ಮತ್ತು ವಿಜ್ಞಾನದ ಕುರಿತಾದ ಸುಳ್ಳು ಹೇಳಿಕೆ ಇಡೀ ವೈದ್ಯಸಮೂಹವನ್ನು ಕುಗ್ಗಿಸುವಂತೆ ಮಾಡುತ್ತದೆ. ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮಾನವ ಸಮಾಜಕ್ಕೆ ನೆರವಾಗುವಂತಹ ಸಕಲ ಪ್ರಯತ್ನವನ್ನು ವೈದ್ಯರು ನಡೆಸುತ್ತಿದ್ದಾರೆಂದು ಐಎಂಎ ತಿಳಿಸಿದೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...