ಬಾಬಾ ರಾಮ್ ದೇವ್‌ ಸೃಷ್ಟಿಸಿದ ಅಲೋಪತಿ ವಿವಾದಕ್ಕೆ ಪತಂಜಲಿ ಸ್ಪಷ್ಟೀಕರಣ

ಬಾಬಾ ರಾಮ್ ದೇವ್ ಮತ್ತೊಮ್ಮೆ ವಿವಾದದಲ್ಲಿದ್ದಾರೆ. ಈ ಬಾರಿ ಅವರು, “ಅಲೋಪತಿಯನ್ನು ಮೂರ್ಖ ಮತ್ತು ದಿವಾಳಿಯಾದ ವಿಜ್ಞಾನ” ಎಂದು ಹೇಳಿರುವ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿತ್ತು. ಈ ಹೇಳಿಕೆಯ ಕುರಿತು ಬೇಸರಕೊಂಡಿದ್ದ ಭಾರತೀಯ ವೈದ್ಯಕೀಯ ಸಂಘವು ಬಾಬಾ ರಾಮ್ ದೇವ್ ವಿರುದ್ಧ ಪ್ರಕರಣ ದಾಖಲಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು ಮತ್ತು ಕಾನೂನು ನೋಟಿಸ್ ಸಹ ಕಳುಹಿಸಿತ್ತು. ಆದರೆ ಈ ಪ್ರಕರಣದ ಕುರಿತು ಪತಂಜಲಿ ಟ್ರಸ್ಟ್ ರಾಮದೇವ್‌ನ ಪರವಾಗಿ ಸ್ಪಷ್ಟೀಕರಣ ನೀಡಿದ್ದು, ಇದರಲ್ಲಿ ರಾಮ್ ದೇವ್ ಜನರ ಮುಂದೆ ವಾಟ್ಸಾಪ್ ಸಂದೇಶವನ್ನು ಓದುತ್ತಿದ್ದಾರೆಂದು ಹೇಳಲಾಗುತ್ತದೆ.

ರಾಮ್ ದೇವ್ ವಾಟ್ಸಾಪ್ ಸಂದೇಶವನ್ನು ಓದುತ್ತಿದ್ದರು – ಪತಂಜಲಿ ಟ್ರಸ್ಟ್

ಪತಂಜಲಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಯೋಗ ಗುರು ಬಾಬಾ ರಾಮ್ ದೇವ್ ವೈದ್ಯಕೀಯ ವಿಜ್ಞಾನವನ್ನು ಸಂಪೂರ್ಣವಾಗಿ ಗೌರವಿಸುತ್ತಾರೆ ಎಂದು ಹೇಳಿದ್ದಾರೆ.

“ರಾಮ್ ದೇವ್ ವಾಟ್ಸಾಪ್‌ನಲ್ಲಿ ಬಂದ ಫಾರ್ವರ್ಡ್ ಸಂದೇಶವನ್ನು ಓದುತ್ತಿದ್ದರು. ವೈದ್ಯಕೀಯ ವಿಜ್ಞಾನ ಮತ್ತು ಉತ್ತಮ ವೈದ್ಯರ ಬಗ್ಗೆ ಅವರಿಗೆ ಯಾವುದೇ ಕೆಟ್ಟ ಭಾವನೆಗಳಿಲ್ಲ. ಅವರ ವಿರುದ್ಧ ಮಾಡಲಾಗುತ್ತಿರುವ ಎಲ್ಲಾ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿವೆ. ” ಎಂದು ಹೇಳಿದ್ದಾರೆ.

ಇಡೀ ಪ್ರಕರಣ ಏನು?

ಅಸಲಿಗೆ ಬಾಬಾ ರಾಮ್ ದೇವ್ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಸುಮಾರು 140 ಸೆಕೆಂಡುಗಳ ಈ ವೀಡಿಯೊದಲ್ಲಿ, ಬಾಬಾ ರಾಮ್‌ದೇವ್ ಅವರ ಫೋನ್‌ನಿಂದ ಏನನ್ನೊ ಓದುತ್ತಿದ್ದಾರೆ. ಅಲ್ಲಿ ಓದಿರುವುದೇ ಈ ವೀಡಿಯೊದಲ್ಲಿ ಇರುವುದು ಎಂದು ಪತಂಜಲಿ ಸಮರ್ಥನೆ ಮಾಡಿಕೊಂಡಿದೆ.

ಆದರೆ “ಅಲೋಪಥಿ ಒಂದು ಅವಿವೇಕಿ ಹಾಗೂ ಅಸಮರ್ಪಕ ವಿಜ್ಞಾನ. ಮೊದಲು ಹೈಡ್ರೋಕ್ಸಿಕ್ಲೊರೊಖ್ವಿನ್ ವಿಫಲವಾಯಿತು. ನಂತರ, ರೆಮ್ಡೆಸಿವಿರ್, ಐವರ್‍ಮೆಕ್ಟಿನ್ ಹಾಗೂ ಪ್ಲಾಸ್ಮಾ ಥೆರಪಿ ವಿಫಲವಾಯಿತು. ಇತರ ಆ್ಯಂಟಿಬಯೋಟಿಕ್ಸ್ ಗಳಾದ ಫ್ಯಾಬಿಫ್ಲೂ ಮತ್ತು ಸ್ಟೆರಾಯ್ಡ್ ಕೂಡ ವಿಫಲವಾಯಿತು ಮತ್ತು ಆಕ್ಸಿಜನ್ ಕೊರತೆಗಿಂತ ಹೆಚ್ಚಾಗಿ ಅಲೋಪಥಿ  ಔಷಧಿಗಳಿಂದ ಲಕ್ಷಗಟ್ಟಲೆ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ” ಎಂದು ಬಾಬಾ ರಾಮ್ ದೇವ್ ಇತ್ತೀಚೆಗೆ ಹೇಳಿದ್ದರು.

ಬಾಬಾ ರಾಮ್ ದೇವ್ ಗೆ ಐಎಂಎ ಯಿಂದ ಕಾನೂನು ನೋಟಿಸ್.

ರಾಮದೇವ್ ಬಾಬಾ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಭಾರತೀಯ ವೈದ್ಯಕೀಯ ಸಂಘ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದು, ನೀವು ಈ ಆರೋಪಗಳನ್ನು ಸ್ವೀಕರಿಸಿ ಆಧುನಿಕ ವೈದ್ಯಕೀಯ ಸೌಲಭ್ಯವನ್ನು ಪರಿಹರಿಸಿ ಅಥವಾ ರಾಮ್ ದೇವ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಐಎಂಎ ಒತ್ತಾಯಿಸಿದೆ. ಇದಲ್ಲದೆ, ಐಎಂಎ ರಾಮ್ ದೇವ್ ಅವರಿಗೆ ಲೀಗಲ್ ನೋಟಿಸ್ ಕೂಡ ನೀಡಿದೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...