ಕೊಡಗು: ಗ್ರಾಮೀಣ ಪ್ರದೇಶಕ್ಕೂ ಹಬ್ಬುತ್ತಿರುವ ಕರೋನಾ -ಮಂಜಿನ ನಗರಿಯಲ್ಲಿ ಹೆಚ್ಚಿದ ಆತಂಕ

ಪುಟ್ಟ ಪ್ರವಾಸೀ ಜಿಲ್ಲೆ ಕೊಡಗಿನಲ್ಲಿ ಕರೋನಾ ಎರಡನೇ ಅಲೆ ದಾಂಗುಡಿ ಇಟ್ಟಿದೆ. ಕಳೆದ ಬಾರಿಗಿಂತಲೂ ಈ ಬಾರಿ ಭಾರೀ ವೇಗವಾಗಿ ಗ್ರಾಮೀಣ ಪ್ರದೇಶಗಳನ್ನೂ ತನ್ನ ಕಬಂಧ ಬಾಹುವಿನಿಂದ ಆವರಿಸುತ್ತಿರುವ ಇದರ ಹೊಡೆತಕ್ಕೆ ಜನರು ತತ್ತರಿಸಿದ್ದಾರೆ. ಈಗ  ಜಿಲ್ಲೆಯ 104 ಗ್ರಾ.ಪಂ.ಗಳಿಗೆ ಸೇರಿದ 439 ಗ್ರಾಮಗಳು ಕರೋನಾ ಸೋಂಕಿನಿಂದ ಬಾಧಿತವಾಗಿದೆ. ಕಳೆದ ವಷ೯ ಮಾಚ್೯ 17 ರಂದು ಕೊಡಗು ಜಿಲ್ಲೆಯಲ್ಲಿ ವರದಿಯಾದ ಮೊದಲ ಪ್ರಕರಣದಿಂದ ಈವರೆಗೂ ಜಿಲ್ಲೆಯಲ್ಲಿ 21,759 ಕರೋನಾ ಸೋಂಕು ಪ್ರಕರಣ ವರದಿಯಾಗಿದೆ. ಆರಂಭಿಕ ಹಂತದಲ್ಲಿ ಅತ್ಯಂತ ಕಡಮೆ ಸೋಂಕು ಪ್ರಕರಣಗಳಿದ್ದ ಜಿಲ್ಲೆ ಇದೀಗ ಅತ್ಯಧಿಕ ಸೋಂಕು ಪ್ರಕರಣಗಳಿರುವ ಭಾರತದ ಜಿಲ್ಲೆಗಳ ಪೈಕಿ ಸ್ಥಾನ ಪಡೆದಿದೆ. ಸಣ್ಣ ಭೌಗೋಳಿಕ ಪ್ರದೇಶದೊಂದಿಗೆ ಕಡಮೆ ಜನಸಂಖ್ಯೆಯ ಆಧಾರದಲ್ಲಿ ಕೊಡಗು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸೋಂಕು ಪ್ರಕರಣ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಒಟ್ಟು 523 ಪ್ರಮುಖ ಹಳ್ಳಿಗಳಿದೆ. ಈ ಪೈಕಿ 439 ಗ್ರಾಮಗಳಲ್ಲಿ ಕರೋನಾ ಸೋಂಕು ವರದಿಯಾಗಿದೆ.  ಜಿಲ್ಲೆಯ ಸೋಮವಾರಪೇಟೆ, ಕುಶಾಲನಗರ, ವೀರಾಜಪೇಟೆ ಒಳಗೊಂಡ 3 ಪಟ್ಟಣ ಪಂಚಾಯತ್ ವ್ಯಾಪ್ತಿಯ 68 ವಾಡ್೯ಗಳಲ್ಲಿಯೂ ಕರೋನಾ ತಾಂಡವಾಡಿದೆ. ಮಡಿಕೇರಿ ನಗರಸಭೆ ವ್ಯಾಪ್ತಿಯ 23 ವಾಡ್೯ಗಳಲ್ಲಿ ಎಲ್ಲಾ ವಾಡ್೯ಗಳಲ್ಲಿಯೂ ಕರೋನಾ ಪ್ರಕರಣ ಕಂಡುಬಂದಿದೆ.

2020 ಕಳೆದ ವಷ೯ ಮಾಚ್೯ 14 ರಂದು ಕೊಡಗು ಜಿಲ್ಲಾ ಸಕಾ೯ರಿ ಆಸ್ಪತ್ರೆಯಲ್ಲಿ ಕೆಮ್ಮು ಬಾಧಿತನಾದ ವ್ಯಕ್ತಿಯೋವ೯ ದಾಖಲಾದ. ವೈದ್ಯರು ಸಂಶಯದ ಮೇರೆಗೆ ಗಂಟಲ ದ್ರವ  ಮಾದರಿ ತೆಗೆದು ಪರೀಕ್ಷೆಗೆ ಆಗಿದ್ದ ವ್ಯವಸ್ಥೆಯಂತೆ ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಿದರು.. ಈತನ ವರದಿ ನೆಗೆಟೀವ್ ಬಂದದ್ದರಿಂದ ಕರೋನಾ ಸೋಂಕು ಕೊಡಗಿಗೆ ಕಾಲಿಡಲಿಲ್ಲ ಎಂದು ವೈದ್ಯಕೀಯ ಸಿಬ್ಬಂದಿಗಳು ನಿಟ್ಟುಸಿರುಬಿಟ್ಟಿದ್ದರು. ಆದರೆ ಮೂರೇ ದಿನಗಳಲ್ಲಿ ಮಾಚ್೯ 17 ರಂದು ಕೊಂಡಂಗೇರಿ ಬಳಿಯ ಕೇತು ಮೊಟ್ಟೆ ಗ್ರಾಮದ ವ್ಯಕ್ತಿಯೋವ೯ ಜ್ವರದಿಂದ ಬಳಲುತ್ತಾ ಆಸ್ಪತ್ರೆಗೆ ದಾಖಲಾದರು. ಗಲ್ಫ್ ನಿಂದ ಬಂದಿದ್ದ ಈ ವ್ಯಕ್ತಿಯ ಗಂಟಲ ದ್ರವ ಪರೀಕ್ಷೆ ಪಾಸಿಟೀವ್ ಬಂದಿತ್ತು.  ಕೂಡಲೇ ಕಾಯೋ೯ನ್ಮುಖರಾಗಿದ್ದ ವೈದ್ಯಕೀಯ ತಂಡ ಈತನಿಗೆ ಅಗತ್ಯ ಚಿಕಿತ್ಸೆ ನೀಡಲಾರಂಭಿಸಿದ್ದರು. ಕೆಲವೇ ದಿನಗಳಲ್ಲಿ ಜ್ವರ, ಕೆಮ್ಮುವಿನಿಂದ ಮುಕ್ತನಾದ ರೋಗಿ ಚೇತರಿಸಿಕೊಳ್ಳತೊಡಗಿದ. ಆ ಸಂದಭ೯ ಈತನಿಗೆ ಒಟ್ಟು 15 ಬಾರಿ ಗಂಟಲ ದ್ರವ ಪರೀಕ್ಷೆ ಮಾಡಲಾಗಿತ್ತು ನೆಗೆಟಿವ್ ಎಂದು ಸಾಬೀತಾದ ಮೇಲಷ್ಟೇ ಈತನನ್ನು ಏಪ್ರಿಲ್ 7 ರಂದು ಅಂದರೆ ದಾಖಲಾದ 20 ದಿನಗಳ ನಂತರ ಸಕಾ೯ರಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಕೇತುಮೊಟ್ಟೆಗೆ ಕಳುಹಿಸಲಾಗಿತ್ತು.  ಈ ಸೋಂಕು ತಗುಲಿದ್ದ ಪ್ರಕರಣವೇ ಕೊಡಗು ಜಿಲ್ಲೆಯ ಇತಿಹಾಸದಲ್ಲಿ ಮೊದಲ ಕರೋನಾ ಸೋಂಕು ಪ್ರಕರಣ ಎಂದು ದಾಖಲಾಗಿದೆ. ನಂತರದ ದಿನಗಳಲ್ಲಿ 2-3 ಎಂದು ಸೋಂಕಿತ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. 2020 ರ ಮಾಚ್೯ 17 ರಿಂದ 2021 ರ ಮೇ 21 ರವರೆಗೆ ಕೊಡಗು ಜಿಲ್ಲೆಯಲ್ಲಿ  ಒಟ್ಟು 21,759 ಕರೋನಾ ಸೋಂಕು ಪ್ರಕರಣ ವರದಿಯಾಗಿದೆ. ಈ ಪೈಕಿ 18,389 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 3,097 ಸಕ್ರಿಯ ಪ್ರಕರಣಗಳಿದೆ. ಜಿಲ್ಲೆಯಾದ್ಯಂತ 443 ಕಂಟೈನ್ಮೆಂಟ್ ವಲಯಗಳಿದೆ. ಕರೋನಾ ಸೋಂಕು ಪ್ರಕರಣದಿಂದ ಜಿಲ್ಲೆಯಲ್ಲಿ 273 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 20 ದಿನಗಳಿಂದ ಜಿಲ್ಲೆಯಲ್ಲಿ ಮರಣ ಹೊಂದುತ್ತಿರುವವರ ಸಂಖ್ಯೆ ದಿನಕ್ಕೆ ಸರಾಸರಿ 6 ರಷ್ಟಿದೆ.

 ಕರೋನಾ ಹರಡುವಿಕೆಗೆ ಕಾರಣ ಹೇಳುವುದಾದರೆ ಮೊದಲ ಸಲ ಕರೋನಾ ಸೋಂಕು ವ್ಯಾಪಿಸಿದ್ದಾಗ ಲಾಕ್ ಡೌನ್ ಸಂದಭ೯ ಹಲವಷ್ಟು ಮಂದಿ ತಾವಿರುವ ಊರುಗಳಲ್ಲಿಯೇ ಇದ್ದರು. ಉದಾಹರಣೆಗೆ, ಬೆಂಗಳೂರಿನಲ್ಲಿದ್ದ ಅನೇಕರು ಮೊದಲ ಹಂತದಲ್ಲಿ ಕೊಡಗಿಗೆ ಬಂದಿರಲಿಲ್ಲ. ಲಾಕ್ ಡೌನ್ ಕಲ್ಪನೆಯೇ ಹೊರಜಿಲ್ಲೆಯಲ್ಲಿ ಉದ್ಯೋಗದಲ್ಲಿದ್ದವರ ಪಾಲಿಗೆ ಎಲ್ಲರಂತೆ ಹೊಸತ್ತಾಗಿತ್ತು.  ಸಕಾ೯ರ ಹೊಸ ಹೊಸ ವಿಧಾನಗಳ ಮೂಲಕ ಸೋಂಕು ತಡೆಯಲು ಕ್ರಮ ಕೈಗೊಂಡಿತ್ತು. ಸ್ಥಳೀಯವಾಗಿ ಜಿಲ್ಲಾಡಳಿತಕ್ಕೆ ಹೆಚ್ಚಿನ ಅಧಿಕಾರ ಮತ್ತು ತೀಮಾ೯ನ ಕೈಗೊಳ್ಳುವ ಅಧಿಕಾರ ನೀಡಿತ್ತು.  ಕಳೆದ ವಷ೯ ಕೊಡಗು – ಕೇರಳ ಅಂತರರಾಜ್ಯ ಗಡಿಯನ್ನೇ ಬಂದ್ ಮಾಡಲಾಗಿತ್ತು. ಈ ಬಾರಿ ಜಿಲ್ಲಾಧಿಕಾರಗಳಿಗೆ ಸ್ವಯಂ ತೀಮಾ೯ನಕ್ಕೆ ಹೆಚ್ಚಿನ ಸ್ವಾತಂತ್ರ್ಯ ನೀಡಲಿಲ್ಲ. ಹೀಗಾಗಿಯೇ ಪ್ರವಾಸೋದ್ಯಮ ಬಂದ್ ಮಾಡಿದ್ದ ಕೊಡಗು ಜಿಲ್ಲಾಧಿಕಾರಿ ಆದೇಶವನ್ನು ಸಕಾ೯ರ ತನ್ನದೇ ಆದೇಶ ಪಾಲಿಸಬೇಕು ಎಂಬ ಸೂಚನೆಯಂತೆ ಹಿಂದಕ್ಕೆ ಪಡೆಯುವಂತೆ ಮಾಡಿತ್ತು.

 ಎರಡನೇ ಅಲೆಯ ಬಗ್ಗೆ ರಾಜ್ಯವ್ಯಾಪಿ ತೀವ್ರ ನಿಲ೯ಕ್ಷ್ಯ ವಹಿಸಲಾಯಿತು. ಬೆಂಗಳೂರು ಕರೋನಾ ಸೋಂಕಿನ ಹಾಟ್ ಸ್ಪಾಟ್ ಆಯಿತು. ಬೆಂಗಳೂರು ಮತ್ತು ಇತರ ಊರುಗಳಿಂದ ಲಾಕ್ ಡೌನ್ ದಿನಗಳನ್ನು ಮೊದಲೇ ಊಹಿಸಿ ಸಾವಿರಾರು ಸಂಖ್ಯೆಯಲ್ಲಿ ಕೊಡಗಿಗೆ ಬಂದ ಸಾವಿರಾರು ಮಂದಿಯಲ್ಲಿ ಅನೇಕರು ತಮ್ಮೊಂದಿಗೆ ಸೋಂಕನ್ನೂ ಹೊತ್ತು ತಂದರು.. ಇದರಿಂದಾಗಿ ಗ್ರಾಮಗ್ರಾಮಗಳಿಗೂ ಸೋಂಕು ವ್ಯಾಪಿಸಲು ಕಾರಣವಾಯಿತು. ಮೊದಲ ಹಂತದಲ್ಲಿ ಸೋಂಕು ಪೀಡಿತರ ಪ್ರಾಥಮಿಕ ಸಂಪಕ೯ವನ್ನು ಅತ್ಯಂತ ಕಟ್ಟುನಿಟ್ಟಾಗಿ ಮಾಡಲಾಗುತ್ತಿತ್ತು. ಪ್ರಾಥಮಿಕ ಸಂಪಕ೯ದಾರರನ್ನೂ ಪರೀಕ್ಷೆಗೊಳಪಡಿಸಲಾಗುತ್ತಿತ್ತು. ಎರಡನೇ ಅಲೆ ಸಂದಭ೯ ಪ್ರಾಥಮಿಕ ಸಂಪಕ೯ದಾರರ ಪರೀಕ್ಷೆಯಲ್ಲಿ ಸಿಬ್ಬಂದಿಗಳ ಕೊರತೆ ಕಾರಣದಿಂದ ಮೊದಲಿನಂತೆ ಎಲ್ಲರನ್ನೂ ಪರೀಕ್ಷೆಗೊಳಪಡಿಸಲು ಸಾಧ್ಯವಾಗಲಿಲ್ಲ. ಗ್ರಾಮಪಂಚಾಯತ್ ಮಟ್ಟದಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮ ಕೈಗೊಳ್ಳುವಲ್ಲಿಯೂ ವಿಫಲತೆ ಕಂಡಬಂತು. ಹೀಗಾಗಿ ಗ್ರಾಮಗಳಿಗೆ ಏಕಾಏಕಿ ವ್ಯಾಪಿಸತೊಡಗಿದ ಸೋಂಕು ಹತೋಟಿಗೇ ಸಿಲುಕದಂತಾಯಿತು.

 ಕರೋನಾ ಎರಡನೇ ಅಲೆಯ ಮೊದಲ ಹಂತದಲ್ಲಿಯೇ ಕೈಗೊಳ್ಳಬೇಕಾಗಿದ್ದ ಕಠಿಣ ತೀಮಾ೯ನಗಳನ್ನು 1 ತಿಂಗಳಷ್ಟು ತಡವಾಗಿ ಜನಪ್ರತಿನಿಧಿಗಳು, ಸಕಾ೯ರದ ಇಲಾಖೆಗಳು ಕೈಗೊಂಡಿದೆ. ಹೆಚ್ಚಿರುವ ಸೋಂಕನ್ನು ತಡವಾಗಿಯಾದರೂ ತಡೆಯಲು ಪ್ರಯತ್ನಗಳು ಸಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿಯೂ ಗಣನೀಯವಾಗಿ ಸೋಂಕು ಪ್ರಮಾಣ ಕಡಮೆಯಾಗುವ ನಿರೀಕ್ಷೆ ಇದೆ ಮದುವೆ ಸೇರಿದಂತೆ ಅನೇಕ ಕಾಯ೯ಕ್ರಮಗಳು ನಿಯಮಗಳನ್ನೂ ಮೀರಿ ಹೆಚ್ಚು ಜನರನ್ನು ಸೇರಿಸಿದ್ದರಿಂದ  ಸೋಂಕು ಹೆಚ್ಚಳಕ್ಕೆ ಕಾರಣವಾಗಿದ್ದು, ಜಿಲ್ಲೆಯ ಜನಸಂಖ್ಯೆ 2011 ರ ಗಣತಿ ಪ್ರಕಾರ 5.54 ಲಕ್ಷ ಇದೆ. ಈಗಿನ ಜನಸಂಖ್ಯೆ 5.75 ಲಕ್ಷ ಎಂದು ಅಂದಾಜಿಸಿದ್ದಲ್ಲಿ,  ಕರೋನಾ ಸೋಂಕಿತರ ಸಂಖ್ಯೆ 22,000 ದಷ್ಟಿದೆ. ಈ ಹೋಲಿಕೆ ಗಮನಿಸಿದರೆ ಜಿಲ್ಲೆಯಲ್ಲಿ ಸೋಂಕು ಪ್ರಮಾಣ ಶೇ.4 ರಷ್ಟಿದೆ… ಅಂದರೆ ಜಿಲ್ಲೆಯ 5.75 ಲಕ್ಷ ಜನರ ಪೈಕಿ 100 ರಲ್ಲಿ  4 ಮಂದಿಗೆ  ಸೋಂಕು ಕಂಡುಬಂದಿದೆ. ಕೊಡಗು ಜಿಲ್ಲೆಯಲ್ಲಿ ಗಂಟಲ ದ್ರವ ಮಾದರಿ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವವರಲ್ಲಿ ಶೇ. 25 ರಿಂದ ಶೇ. 30 ರಷ್ಟು ಪಾಸಿಟಿವ್ ಪ್ರಮಾಣ ಕಂಡುಬಂದಿದೆ. ಕಳೆದ ವಷ೯ ಜಿಲ್ಲೆಯಲ್ಲಿ ಈ ಪ್ರಮಾಣ ಶೇ.8-10 ರಷ್ಟಿತ್ತು. ಈ ವಷ೯ ಪರೀಕ್ಷೆಗಳ ಸಂಖ್ಯೆಯಲ್ಲಿ ಉಂಟಾಗಿರುವ ಏರಿಕೆಯೂ ಹೆಚ್ಚಳಕ್ಕೆ ಕಾರಣವಾಗಿದೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...